ಸಜುಕಿಯಿಂದ ಹೊಸ ಡೀಸೆಲ್ ಎಂಜಿನ್; ನಿಮ್ಮ ನಿರೀಕ್ಷೆ ಮುಟ್ಟಿತೇ?
ದೇಶದ ನಂ. 1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅಂಗಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ, ನೂತನ ಡೀಸೆಲ್ ಎಂಜಿನ್‌ವೊಂದನ್ನು ಅಭಿವೃದ್ಧಿಪಡಿಸುತ್ತಿದ್ದು, ಕಾರು ಪ್ರಿಯರು ಅತೀವ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ
ಸುಜುಕಿಯಿಂದ ಹೊಸ ಆಯಾಮದ ಡೀಸೆಲ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಸುಜುಕಿ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಲಿದೆ. ಯಾಕೆಂದರೆ ತನ್ನದೇ ಡೀಸೆಲ್ ಘಟಕದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಿಮಗೆ ತಿಳಿದಿರುವಂತೆಯೇ ಸುಜುಕಿ ಯಶಸ್ಸಿನಲ್ಲಿ ಫಿಯೆಟ್ ಡೀಸೆಲ್ ಎಂಜಿನ್ ಬಹುದೊಡ್ಡ ಪಾತ್ರ ವಹಿಸಿತ್ತು. ಅಂದರೆ ಇದುವರೆಗೆ ತನ್ನ ಪ್ರತಿಯೊಂದು ಉತ್ಪನ್ನಗಳಿಗೂ ಫಿಯೆಟ್ ಸಂಸ್ಥೆಯನ್ನು ಅವಲಂಬಿಸಿತ್ತು. ಆದರೆ ಇದೀಗ ಪರಿಸ್ಥಿತಿ ವಿಭಿನ್ನವಾಗಿದ್ದು, ಸುಜುಕಿ ಸಂಪೂರ್ಣವಾಗಿಯೂ ತನ್ನದೇ ತಲಹದಿಯಲ್ಲಿ ಹೊಸ ಡೀಸೆಲ್ ಎಂಜಿನ್ ಆಭಿವೃದ್ಧಿಪಡಿಸುತ್ತಿದೆ.

ಇದುವರೆಗೆ ಮಾರುತಿ ಸುಜುಕಿಯ ಡೀಸೆಲ್ ವಿಭಾಗವನ್ನು ಫಿಯೆಟ್ ಮಲ್ಟಿಜೆಟ್ ಎಂಜಿನ್ ಆವರಿಸಿತ್ತು. ಇದು ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಿಂದ ಆರಂಭವಾಗಿ ಡಿಜೈರ್ ಕಾಂಪಾಕ್ಟ್, ಎರ್ಟಿಗಾ ಎಂಪಿವಿ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಇದೀಗ ಇತರ ಸಂಸ್ಥೆಗಳ ಮೇಲೆ ನಿರ್ಭರವಾಗುವುದನ್ನು ತಡೆಗಟ್ಟಲು ಸುಜುಕಿ ಯೋಜನೆ ಹಾಕಿಕೊಂಡಿದೆ. ಇದರ ಫಲವೆಂಬಂತೆ ನೂತನ ಡೀಸೆಲ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ವರದಿಗಳ ಪ್ರಕಾರ ಸುಜುಕಿ ನೂತನ ಎಂಜಿನ್‌ಗಳು 800ಸಿಸಿ, ಟು ಸಿಲಿಂಡರ್ ಯುನಿಟ್ ಪಡೆದುಕೊಳ್ಳಲಿದೆ. ಇದನ್ನು ಪರೀಕ್ಷಾರ್ಥವಾಗಿ ವೈ9ಟಿ ಕೋಡ್ ಹೆಸರು ಪಡೆದುಕೊಂಡಿರುವ ಹೊಸತಾದ ಪಿಕಪ್ ಟ್ರಕ್‌ನಲ್ಲಿ ಆಳವಡಿಸುವ ಸಾಧ್ಯತೆಯಿದೆ.

ಅಂದ ಹಾಗೆ 800ಸಿಸಿ ಡೀಸೆಲ್ ಎಂಜಿನ್ ಪಡೆಯಲಿರುವ ಪಿಕಪ್ ಟ್ರಕ್ 2015ರ ಇಸವಿಯಲ್ಲಷ್ಟೇ ಲಾಂಚ್ ಆಗಲಿದೆ. ಪಿಕಪ್ ಟ್ರಕ್‌ನಲ್ಲಿ ಇದನ್ನು ಆಳವಡಿಸಲಿರುವ ಪ್ರಮುಖ ಕಾರಣ ಡೀಸೆಲ್ ಎಂಜಿನ್‌ನಲ್ಲಿ ಯಾವುದೇ ತೊಂದರೆ ಎದುರಾದ್ಧಲ್ಲಿ ಅದನ್ನು ನಿಭಾಯಿಸಬಹುದಾಗಿದೆ. ಈ ಮೂಲಕ ಅತ್ಯುತ್ತಮ ಪ್ರಯಾಣಿಕ ಕಾರನ್ನು ಬಿಡುಗಡೆಗೊಳಿಸಬಹುದು. ಒಮ್ಮೆ ಯೋಜನೆ ಯಶಸ್ವಿ ಕಂಡಲ್ಲಿ ಎಲ್ಲ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳಿಗೂ ಇದು ಆಳವಡಿಕೆಯಾಗಲಿದೆ.

ಬಳಿಕ 800ಸಿಸಿ ಎಂಜಿನನ್ನು 1.5 ಲೀಟರ್ ಫೋರ್ ಸಿಲಿಂಡ್ ಡೀಸೆಲ್ ಎಂಜಿನ್ ಹಿಂಬಾಲಿಸಲಿದೆ. ನೈಜ ಪರಿಸ್ಥಿತಿಯಲ್ಲಿ ಇದು 1.6 ಲೀಟರ್ ಎಂಜಿನ್ ಆಗಿದ್ದರೂ ವಿಶೇಷವಾಗಿ ಭಾರತದಲ್ಲಿ 1.5 ಲೀಟರ್ ಪರಿಮಿತಿಯೊಳಗೆ ಪರಿಚಯಿಸಲಾಗುವುದು. ಈ ಮೂಲಕ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಪ್ರಸ್ತುತ 1.5 ಲೀಟರ್ ಡೀಸೆಲ್ ಎಂಜಿನ್ 2016ನೇ ಇಸವಿಯಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಇದು ಸುಜುಕಿಯ ನೂತನ ಕಾಂಪಾಕ್ಟ್ ಎಸ್‌ಯುವಿ ಎಕ್ಸ್‌ಎ ಆಲ್ಪಾದಲ್ಲಿ ಆಳವಡಿಕೆಯಾಗುವುದು ಬಹುತೇಕ ಖಚಿತವಾಗಿದೆ.

ಒಟ್ಟಿನಲ್ಲಿ ಈಗಿನ ಪರಿಸ್ಥಿತಿಯಲ್ಲಿ ಅವಲೋಕಿಸಿದಾಗ ಸುಜುಕಿ ಡೀಸೆಲ್ ಎಂಜಿನ್ ಕಾರು ಪ್ರತ್ಯಕ್ಷವಾಗುವುದು ಸದ್ಯಕ್ಕೆ ದೂರದ ಮಾತು. ಅಂದರೆ ಇನ್ನು ಒಂದೆರಡು ವರ್ಷ ಕಾಯಬೇಕಾಗಿದೆ. ಹಾಗಿದ್ದರೂ ಸುಜುಕಿಯ ನೂತನ ಡೀಸೆಲ್ ಎಂಜಿನ್ ಹೆಚ್ಚು ಇಂಧನ ಕ್ಷಮತೆಯನ್ನು ನೀಡಲು ಯಶಸ್ವಿಯಾಗಲಿದೆ ಎಂಬುದು ಆಟೋ ವಿಮರ್ಶಕರ ನಿಲುವಾಗಿದೆ.


Click it and Unblock the Notifications








