ಸ್ವಿಫ್ಟ್ ಪ್ರೇರಣೆ; ಇದುವೇ ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್
ಈಗಷ್ಟೇ ಸುಜುಕಿ ಮಿನಿ ಎಸ್‌ಯುವಿ ಬಗ್ಗೆ ಐಎಂ-4 ಬಗ್ಗೆ ಮಾಹಿತಿ ಕೊಟ್ಟಿರುತ್ತೇವೆ. 2015 ಜಿನೆವಾ ಮೋಟಾರು ಶೋದಲ್ಲಿ ಜಪಾನ್ ಮೂಲದ ಸುಜುಕಿ ಮಗದೊಂದು ಆಕರ್ಷಕ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಸಹ ಪರಿಚಯಿಸಿದೆ. ಅದುವೇ ಐಕೆ-2.
ವರದಿಗಳ ಪ್ರಕಾರ ಸ್ವಿಜರ್ಲೆಂಡ್‌ನ ಜಿನೆವಾದಲ್ಲಿ ಅನಾವರಣಗೊಂಡಿರುವ ನೂತನ ಸುಜುಕಿ ಐಕೆ-2 ಮಾದರಿಯು 2016ರ ವೇಳೆಗೆ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ. ವಿಶೇಷವೆಂದರೆ ಈ ಬಹುನಿರೀಕ್ಷಿತ ಮಾದರಿಯು ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ಸುಜುಕಿಯ ಜನಪ್ರಿಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನಿಂದ ಪ್ರೇರಣೆ ಪಡೆದುಕೊಂಡು ಹೊಸತಾದ ಐಕೆ-2 ಕಾನ್ಸೆಪ್ಟ್ ರಚಿಸಲಾಗಿದೆ. ಹಾಗೆಯೇ ಇದು ಸ್ವಿಫ್ಟ್‌ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

'ಲಿಕ್ವಿಡ್ ಫ್ಲೊ' ಎಂಬ ವಿನ್ಯಾಸ ತಂತ್ರಗಾರಿಕೆಯನ್ನು ಇದರಲ್ಲಿ ಅನುಸರಿಸಲಾಗಿದೆ. ಹಾಗೆಯೇ ಹೊಸತಾದ 1.0 ಲೀಟರ್ ಬೂಸ್ಟರ್‌ಜೆಟ್ ಡೈರಕ್ಟ್ ಇಂಜೆಕ್ಷನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ.

ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಕಾರು 4023 ಎಂಎಂ ಉದ್ದ, 1920 ಎಂಎಂ ಅಗಲ ಮತ್ತು 1450 ಎಂಎಂ ಎತ್ತರವನ್ನು ಪಡದುಕೊಳ್ಳಲಿದೆ.

ಪೂರ್ಣವಾಗಿಯೂ ಹೊಸ ತಳಹದಿಯಲ್ಲಿ ನಿರ್ಮಾಣವಾಗಲಿರುವ ಸುಜುಕಿ ಐಕೆ-2, ನೋಟ, ಉಪಯುಕ್ತತೆ, ಆರಾಮದಾಯಕ, ನಿರ್ವಹಣೆ ಹಾಗೂ ಇಂಧನ ಕ್ಷಮತೆಯಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ.

ದಿಟ್ಟವಾದ ನೋಟ, ಎಲ್‌ಇಡಿ ಹೆಡ್ ಲ್ಯಾಂಪ್, ವಿಶೇಷ ಮೈ ಬಣ್ಣ ಹಾಗೂ ಎಲ್ಲ ಹೊಸ ಎಂಜಿನ್‌ಗಳು ಇದರ ವಿಶೇಷತೆಯಾಗಿರಲಿದೆ.


Click it and Unblock the Notifications








