ಸುಜುಕಿ ಮಿನಿ ಎಸ್‌ಯುವಿ ಐಎಂ-4 ಭಾರತಕ್ಕೆ ಬರುತ್ತಾ?

By Nagaraja

ಸ್ವಿಜರ್ಲೆಂಡ್‌ನಲ್ಲಿ ಸಾಗುತ್ತಿರುವ ಪ್ರತಿಷ್ಠಿತ 2015 ಜಿನೆವಾ ಮೋಟಾರು ಶೋದಲ್ಲಿ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ ಮೋಟಾರು ಕಾರ್ಪೋರೇಷನ್ ಎರಡು ಹೊಸ ಕಾನ್ಸೆಪ್ಟ್ ಮಾದರಿಗಳನ್ನು ಪ್ರದರ್ಶಿಸಿದೆ. ಅವುಗಳೆಂದರೆ

ಐಎಂ-4 ಹಾಗೂ ಐಕೆ-2

ಈ ಬಹುನಿರೀಕ್ಷಿತ ಕಾನ್ಸೆಪ್ಟ್ ಮಾದರಿಗಳ ಕುರಿತಾಗಿನ ಸಮಗ್ರ ಮಾಹಿತಿಗಳನ್ನು ಎರಡು ವಿಭಿನ್ನ ಲೇಖನಗಳಾಗಿ ಚಿತ್ರ ಸಮೇತ ನಾವು ಪ್ರಕಟಿಸಲಿದ್ದೇವೆ. ಇದರಂತೆ ಈ ಲೇಖನದಲ್ಲಿ ಸುಜುಕಿ ಐಎಂ-4 ಕಾರಿನ ಕುರಿತಾಗಿ ಮಾಹಿತಿ ಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ.

2015 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಐಎಂ-4 ಮಿನಿ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶನ

85ನೇ ಆವೃತ್ತಿಯ ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಸಂಸ್ಥೆಯು ನೂತನ ಐಎಂ-4 ಫೋರ್ ವೀಲ್ ಡ್ರೈವ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಕಾಂಪಾಕ್ಟ್ ಎಸ್‌ಯುವಿ ವಿಭಾಗಕ್ಕೆ ಹೊಸ ಸೇರ್ಪಡೆಯಾಗಿರಲಿದೆ.

2015 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಐಎಂ-4 ಮಿನಿ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶನ

ಸುಜುಕಿ ನ್ಯೂ ಜನರೇಷನ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಹೊಸ ಸುಜುಕಿ ಕಾರು ನಿರ್ಮಾಣವಾಗಲಿದೆ. ಇದು ಇಂಧನ ಕ್ಷಮತೆ, ಸುರಕ್ಷತೆ, ಹ್ಯಾಂಡ್ಲಿಂಗ್, ಸ್ಥಿರತೆ ಹಾಗೂ ನಿರ್ವಹಣೆಯಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲಿದೆ.

2015 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಐಎಂ-4 ಮಿನಿ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶನ

ಈ 18 ಇಂಚುಗಳ 4x4 ಕಾರು 3,693 ಎಂಎಂ ಉದ್ದ, 1,709 ಎಂಎಂ ಅಗಲ, 1,566 ಎಂಎಂ ಎತ್ತರ ಹಾಗೂ 2438 ಎಂಎಂ ಚಕ್ರಾಂತರವನ್ನು ಪಡೆದುಕೊಂಡಿರಲಿದೆ.

2015 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಐಎಂ-4 ಮಿನಿ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶನ

ಅಂದ ಹಾಗೆ ಸುಜುಕಿ ಐಎಂ-4 ಕಾಂಪಾಕ್ಟ್ ಎಸ್‌ಯುವಿ 1.2 ಲೀಟರ್ ಡ್ಯುಯಲ್ ಜೆಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದರ ಜೊತೆಗೆ ಸುಜುಕಿಯ ನೂತನ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವು (ಎಸ್‌ಎಚ್‌ವಿಎಸ್) ಬಳಕೆಯಾಗಲಿದೆ.

2015 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಐಎಂ-4 ಮಿನಿ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶನ

ಹಾಗೊಂದು ವೇಳೆ ಭವಿಷ್ಯದಲ್ಲಿ ಐಎಂ-4 ಭಾರತಕ್ಕೆ ಆಗಮಿಸಿದ್ದಲ್ಲಿ ಭಾರಿ ಶಬ್ದ ಮಾಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿಗಳಿಗೆ ಭಾರಿ ಬೇಡಿಕೆಯಿದೆ. ಅಲ್ಲದೆ ಸುಜುಕಿ ಅಂಗಸಂಸ್ಥೆ ಮಾರುತಿಯು ಬೃಹತ್ ಮಾರಾಟ ವಲಯದ ಮೂಲಕ ತನ್ನ ನಿಷ್ಠೆಯನ್ನು ಕಾಯ್ದುಕೊಂಡಿರುವುದು ಹೆಚ್ಚು ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆ ಮಾಡಲು ಸಹಕಾರಿಯಾಗಲಿದೆ.

2015 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಐಎಂ-4 ಮಿನಿ ಎಸ್‌ಯುವಿ ಕಾನ್ಸೆಪ್ಟ್ ಪ್ರದರ್ಶನ

ಒಟ್ಟಿನಲ್ಲಿ ಸುಜುಕಿ ಮಿನಿ ಎಸ್‌ಯುವಿ ಈಗಾಗಲೇ ಗ್ರಾಹಕರಲ್ಲಿ ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ಜಿನೆವಾದಲ್ಲಿ ಅರಳಿರುವ ಈ ಹೂವು ಬಹುಬೇಗನೇ ಭಾರತದಲ್ಲೂ ತನ್ನ ಸುಗಂಧವನ್ನು ಪಸರಿಸಲಿ ಎಂಬುದೇ ಡ್ರೈವ್ ಸ್ಪಾರ್ಕ್ ಆಶಯವಾಗಿದೆ.

More from DriveSpark

Article Published On: Wednesday, March 4, 2015, 11:54 [IST]
English summary
Suzuki Motor Corporation unveils its world-premiere concept model, the iM-4, at the 85th Geneva Motor Show. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+