ಬರುತ್ತಿದೆ ಇಕೊಸ್ಪೋರ್ಟ್ ಎದುರಾಳಿ ಸುಜುಕಿ iV-4

By Nagaraja

ಇತ್ತೀಚೆಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಫೋರ್ಡ್ ಇಕೊಸ್ಪೋರ್ಟ್ ದೇಶದ ರಸ್ತೆಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಂದ ಹಾಗೆ ಭಾರತೀಯ ಮಾರುಕಟ್ಟೆಗಳಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಈ ಅಭಿಯಾನ ಮಹಿಂದ್ರದ ಸ್ಕಾರ್ಪಿಯೊದಿಂದ ಆರಂಭವಾಗಿದ್ದರೂ ಸಮಕಾಲೀನ ಕಾಲಘಟ್ಟದಲ್ಲಿ ರೆನೊ ಡಸ್ಟರ್ ಕೂಡಾ ಭರ್ಜರಿ ಯಶ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಈ ಎಲ್ಲದರ ನಡುವೆ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಗಮನ ಮಾತ್ರ ಸಣ್ಣ ಹಾಗೂ ಹ್ಯಾಚ್‌ಬ್ಯಾಕ್ ಕಾರು ಮಾರುಕಟ್ಟೆಯಲ್ಲಿ ಮೇಲೆ ಕೇಂದ್ರಿತವಾಗಿತ್ತು. ಆದರೆ ಇದೀಗ ಎಚ್ಚೆತ್ತುಕೊಂಡಿರುವ ಮಾರುತಿ ಮಾತೃಸಂಸ್ಥೆ ಸುಜುಕಿ ನೂತನ iV-4 ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಮಾರುಕಟ್ಟೆಗಿಳಿಸಲು ಯೋಜನೆ ಸಿದ್ಧಪಡಿಸುತ್ತಿದೆ.

ಫ್ರಾಂಕ್‌ಫರ್ಟ್‌ ಮೋಟಾರ್ ಶೋ

ಫ್ರಾಂಕ್‌ಫರ್ಟ್‌ ಮೋಟಾರ್ ಶೋ

ಇದೇ ಸಾಲಿನ ಸೆಪ್ಟೆಂಬರ್ 10ರಿಂದ ಆರಂಭವಾಗಲಿರುವ 65ನೇ ಐಎಎ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ನೂತನ iV-4 ಅನಾವರಣಗೊಳಿಸುವುದಾಗಿ ಸುಜುಕಿ ಘೋಷಿಸಿದೆ. 'ಗ್ರಾಬ್ ಯುವರ್ ಫೀಲ್ಡ್' ಥೀಮ್‌ನಲ್ಲಿ ನೂತನ ಕಾಂಪಾಕ್ಟ್ ಎಸ್‌ಯುವಿ ಪ್ರದರ್ಶನಗೊಳ್ಳಲಿದೆ.

ಗ್ರೌಂಡ್ ಕ್ಲಿಯರನ್ಸ್

ಗ್ರೌಂಡ್ ಕ್ಲಿಯರನ್ಸ್

ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಇಮೇಜ್‌ನಿಂದಲೇ ಪ್ರಸ್ತುತ ಕಾರು ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ಹೊಂದಿದೆ ಎಂಬುದು ವ್ಯಕ್ತವಾಗುತ್ತಿದೆ. ಇದರ ರೂಫ್ ಮೌಟೆಂಡ್ ಹೆಡ್‌ಲ್ಯಾಂಪ್ ಮತ್ತೊಂದು ಆಕರ್ಷಕ ಫೀಚರ್ ಆಗಿದೆ.

ಎಕ್ಸ್ ಆಲ್ಫಾ ಕಾನ್ಸೆಪ್ಟ್

ಎಕ್ಸ್ ಆಲ್ಫಾ ಕಾನ್ಸೆಪ್ಟ್

ಎಕ್ಸ್ ಆಲ್ಫಾ ಕಾನ್ಸೆಪ್ಟ್ ತಲಹದಿಯಲ್ಲಿ iV-4 ರೂಪುಗೊಳ್ಳಲಿದೆ. ಇದು ಯುರೋಪ್ ಸೇರಿದಂತೆ ಭಾರತದಲ್ಲೂ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯೆನಿಸಲಿದೆ.

ದೆಹಲಿ ಆಟೋ ಎಕ್ಸ್‌ಪೋ 2014

ದೆಹಲಿ ಆಟೋ ಎಕ್ಸ್‌ಪೋ 2014

ಬಲ್ಲ ಮೂಲಗಳ ಪ್ರಕಾರ ಸುಜುಕಿ iV-4 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದ್ದು, ಆ ಬಳಿಕ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆ.

ಕಾನ್ಸೆಪ್ಟ್ ಮಾಡೆಲ್

ಕಾನ್ಸೆಪ್ಟ್ ಮಾಡೆಲ್

ಅಂತೂ ಇಂತೂ ಇದು ಕಾನ್ಸೆಪ್ಟ್ ಮಾಡೆಲ್‌ಗಷ್ಟೇ ಸೀಮಿತವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಸುಜುಕಿ iV-4

ವೀಡಿಯೋ ವೀಕ್ಷಿಸಿ

More from DriveSpark

Article Published On: Wednesday, July 31, 2013, 9:41 [IST]
English summary
The competition in the compact SUV segment recently heated up with the coming of Ford EcoSport. Opportunity is still not lost though and Suzuki is now ready to capitalize on it by launching a new compact SUV, the iV-4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+