ಅತ್ಯಾಕರ್ಷಕ ದೃಶ್ಯ ವೈಭವದೊಂದಿಗೆ ಸುಜುಕಿ ಸ್ವಿಫ್ಟ್ ಸ್ಟೈಲ್ ಎಂಟ್ರಿ
ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ನೂತನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನ ವಿಶೇಷ ಆವೃತ್ತಿಯನ್ನು ಘೋಷಣೆ ಮಾಡಿದೆ. ನೂತನ ಆವೃತ್ತಿಯು ಸುಜುಕಿ ಸ್ವಿಫ್ಟ್ ಸ್ಟೈಲ್ ಎಂದು ಹೆಸರಿಸಿಕೊಳ್ಳಲಿದೆ.
ನೂತನ ವಿಶೇಷ ಆವೃತ್ತಿಯು ಅತ್ಯಾಕರ್ಷಕ ದೃಶ್ಯ ವೈಭವದೊಂದಿಗೆ ಅನೇಕ ವೈಶಿಷ್ಯಗಳನ್ನು ಪಡೆದುಕೊಳ್ಳಲಿದೆ. ಆದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಪ್ರಸ್ತುತ ಜಪಾನ್ ಮಾರುಕಟ್ಟೆ ಪ್ರವೇಶಿಸಿರುವ ಈ ವಿಶೇಷ ಆವೃತ್ತಿಯು ಭಾರತ ಮಾರುಕಟ್ಟೆ ಪ್ರವೇಶಿಸಿತೇ? ಮುಂದಕ್ಕೆ ಓದಿರಿ...

ಅಂದ ಹಾಗೆ ಸುಜುಕಿ ಸ್ವಿಫ್ಟ್ ಸ್ಟೈಲ್ ಸದ್ಯಕ್ಕೆ ಜಪಾನ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಹಾಗಿದ್ದರೂ ಸುಜುಕಿ ಅಂಗಸಂಸ್ಥೆಯಾಗಿರುವ ಮಾರುತಿ ಸುಜುಕಿ, ಭಾರತದಲ್ಲಿ ಈ ಬಹುನಿರೀಕ್ಷಿತ ಮಾದರಿಯನ್ನು ಮುಂದಿನ ದಿನಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಬಾಹ್ಯ ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ, ಹೊಸತಾದ ಗ್ರಿಲ್ ಸಮತಲವಾಗಿರುವ ಕ್ರೋಮ್ ಬಾರ್ ಪಡೆದುಕೊಳ್ಳಲಿದೆ. ಅದೇ ರೀತಿ ಬಿಳಿ ಹಾಗೂ ಕಪ್ಪು ಬಣ್ಣಗಳು ಹೆಚ್ಚು ಆಕರ್ಷಣೆಯನ್ನು ನೀಡಲಿದೆ.

ಇನ್ನುಳಿದಂತೆ ಕಪ್ಪು ಬಣ್ಣದ 16 ಇಂಚಿನ ಅಲಾಯ್ ವೀಲ್, ಔಟ್‌ಸೈಡ್ ರಿಯರ್ ವ್ಯೂ ಮಿರರ್, ಎಲ್‌ಇಡಿ ಟರ್ನ್ ಇಂಡಿಕೇಟರ್ ಲ್ಯಾಂಪ್ ಮತ್ತು ಸ್ಟೈಲ್ ಬ್ಯಾಡ್ಜ್ ಪ್ರಮುಖವಾಗಿರಲಿದೆ.

ಹಾಗೆಯೇ ಸುಜುಕಿ ಸ್ವಿಫ್ಟ್ ಸ್ಟೈಲ್ ಒಳಾಂಗಣದಲ್ಲಿ, ಎಕ್ಸ್‌ಕ್ಲೂಸಿವ್ ಅಪ್‌ಹೋಲ್‌ಸ್ಟ್ರೇ, ಮುಂಭಾಗದಲ್ಲಿ ಆಸನ ಬದಿಯಲ್ಲಿ ಪಾಕೆಟ್, ಇನ್ಸ್ಟ್ರುಮೆಂಟ್ ಪ್ಯಾನೆಲ್, ಡೋರ್ ಟ್ರಿಮ್ ಓರ್ನಮೆಂಟ್, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್, ಆಡಿಯೋ ಕಂಟ್ರೋಲ್ ಮತ್ತು ಡ್ರೈವಿಂಗ್ ಆರ್ಮ್‌ರೆಸ್ಟ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಇವೆಲ್ಲದರ ಜತೆಗೆ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್‌ಸೈಡ್ ರಿಯರ್ ವ್ಯೂ ಮಿರರ್, ಪ್ರೀಮಿಯಂ ಯುವಿ ಕಟ್ ಗ್ಲಾಸ್, ಕ್ರೂಸ್ ಕಂಟ್ರೋಲ್, 1 ಸ್ಟೆಪ್ ರಿಕ್ಲೈನಿಂಗ್ ರಿಯರ್ ಸೀಟ್, ಹೀಟಡ್ ಫ್ರಂಟ್ ಸೀಟ್, ಆಟೋಮ್ಯಾಟಿಕ್ ಹೆಡ್ ಲೈಟ್, ಫ್ರಂಟ್ ಫಾಗ್ ಲ್ಯಾಂಪ್ ಮತ್ತು ಎಲ್‌ಇಡಿ ಲ್ಯಾಂಪ್ ಇರಲಿದೆ.

ಅಂದ ಹಾಗೆ ಸುಜುಕಿ ಸ್ವಿಫ್ಟ್ ಸ್ಟೈಲ್ 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ. ಹಾಗೆಯೇ ಐಚ್ಛಿಕ 7 ಸ್ಪೀಡ್ ಸಿವಿಟಿ ಗೇರ್ ಬಾಕ್ಸ್ ಸಹ ಲಭ್ಯವಾಗಲಿದೆ.


Click it and Unblock the Notifications








