ಭಾರತಕ್ಕೂ ಬರುತ್ತಾ ಸ್ವಿಫ್ಟ್ ವಿಶೇಷ ಆವೃತ್ತಿ?
ಮಾರುತಿ ಸುಜುಕಿ ಅಂಗಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ, ತನ್ನ ಜನಪ್ರಿಯ ಸ್ವಿಫ್ಟ್ ಆವೃತ್ತಿಯ ನೂತನ ಎಸ್‌ಝಡ್-ಎಲ್ ವರ್ಷನ್ ಅನ್ನು ಬ್ರಿಟನ್ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.
ಪ್ರಸ್ತುತ ಕಾರು ಮಾರ್ಚ್ 1ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಕೇವಲ 500 ಸೀಮಿತ ಆವೃತ್ತಿಗಳು ಮಾತ್ರ ಲಭ್ಯವಾಗಲಿದ್ದು, ಗ್ರಾಹಕರು ಆದಷ್ಟು ಬೇಗನೇ ತಮ್ಮ ಕಾರನ್ನು ಬುಕ್ ಮಾಡಿಕೊಳ್ಳುವಂತೆ ವಿನಂತಿಸಿಕೊಳ್ಳಲಿದೆ. ಎಸ್‌ಝಡ್3 ತಲಹದಿಯಲ್ಲಿ ನಿರ್ಮಾಣವಾಗಿರುವ ಎಸ್‌ಝಡ್-ಎಲ್, 1.2 ಲೀಟರ್ ಪೆಟ್ರೋಲ್ ಮಿಲ್ ಪಡೆದುಕೊಂಡಿದೆ. ಇದು ತ್ರಿ ಡೋರ್ ಹಾಗೂ ಫೈವ್ ಡೋರ್ ವರ್ಷನ್‌ಗಳಲ್ಲಿ ಲಭ್ಯವಿರಲಿದೆ.

ಸುಜುಕಿ ಸ್ವಿಫ್ಟ್ ಎಸ್‌ಝಡ್-ಎಲ್ ವಿಶೇಷ ಆವೃತ್ತಿ
ನೂತನ ಸ್ವಿಫ್ಟ್ ಎಸ್‌ಝಡ್-ಎಲ್, ಮಾರ್ಚ್ 1ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ತ್ರಿ ಡೋರ್ ವರ್ಷನ್ 10,899 ಪೌಂಡ್ ಹಾಗೆಯೇ ಫೈವ್ ಡೋರ್ ವರ್ಷನ್ 11,316 ಪೌಂಡುಗಳಷ್ಟು ದುಬಾರಿಯೆನಿಸಲಿದೆ.

ವೈಶಿಷ್ಟ್ಯ
ನೂತನ ಸ್ವಿಫ್ಟ್ ಎಸ್‌ಝಡ್-ಎಲ್ ಆವೃತ್ತಿಯಲ್ಲಿ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದ್ದು, ಸುರಕ್ಷತೆಗಾಗಿ ಇಎಸ‌್‌ಪಿ ಜತೆ 7 ಏರ್ ಬ್ಯಾಗ್ ಆಳವಡಿಸಲಾಗಿದೆ. ಇದರ ಜತೆಗೆ ಏರ್-ಕಾನ್, ಬ್ಲೂಟೂತ್ ಮತ್ತು ಯುಎಸ್‌ಬಿ ಪೋರ್ಟ್ ಕೂಡಾ ಇರಲಿದೆ.

ಹಾಗೆಯೇ ಕ್ರೂಸ್ ಕಂಟ್ರೋಲ್ ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಇರಲಿದೆ. ಇವೆಲ್ಲವೂ ಸ್ಟಾಂಡರ್ಡ್ ಆಗಿರಲಿದೆ.

ಒಟ್ಟು ಎರಡು ಕಲರ್ ವೆರಿಯಂಟ್‌ಗಳಲ್ಲಿ ವಿಶೇಷ ಆವೃತ್ತಿ ಲಭ್ಯವಿರಲಿದೆ. ಅವುಗಳೆಂದೆರ ಕಾಸ್ಮಿಕ್ ಬ್ಲ್ಯಾಕ್ ಮ್ತತು ಬೂಸ್ಟ್ ಬ್ಲೂ.

ಇನ್ನು ಕಾರಿನೊಳಗಡೆ ಸ್ಪೆಷಲ್ ಸೀಟು ಹಾಗೂ ಯೂನಿಕ್ ಫ್ಯಾಬ್ರಿಕ್ ಕವರ್ ಇರಲಿದೆ.

ಪ್ರಸ್ತುತ ಬ್ರಿಟನ್‌ಗೆ ಮಾರುಕಟ್ಟೆಗೆ ಮಾತ್ರ ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆಗೊಂಡಿರುವ ನೂತನ ಸ್ವಿಫ್ಟ್ ಸೀಮಿತ ಆವೃತ್ತಿಯು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೂ ಅಚ್ಚರಿಯೇನಿಲ್ಲ.


Click it and Unblock the Notifications








