ಕಾಯುವಿಕೆ ಅಂತ್ಯ; ಕ್ರೆಡಿಟ್ ಕಾರ್ಡ್ ಉಜ್ಜಿ ನ್ಯಾನೋ ಒಯ್ಯಿರಿ
ಭಾರತೀಯ ಆಟೋಮೊಬೈಲ್ ರಂಗದಲ್ಲಿ ಇದೇ ಮೊದಲ ಬಾರಿಯೆಂಬಂತೆ ದೇಶದ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಆವೃತ್ತಿಯಾದ ಟ್ಯಾಟಾ ನ್ಯಾನೋ ಮಾರಾಟಕ್ಕಾಗಿ ಅತಿ ನೂತನ ಯೋಜನೆಯೊಂದನ್ನು ಮುಂದಿರಿಸಿದೆ.
ಇದೀಗ ನ್ಯಾನೋ ಖರೀದಿ ಎಷ್ಟು ಸುಲಭ ಅಂದರೆ ಕ್ರೆಡಿಟ್ ಕಾರ್ಡ್ ಉಜ್ಜಿ ಅದೇ ದಿನ ನಿಮ್ಮ ಮನೆಗೆ ವಿಶ್ವದ ಅತಿ ಅಗ್ಗದ ಕಾರನ್ನು ಒಯ್ಯಬಹುದು. ಈ ಘೋಷಣೆ ಕಂಪನಿಯಿಂದ ಹೊರಬರುತ್ತಿರುವಂತೆಯೇ ಮುಂಬೈ ಶೇರು ಸೂಚ್ಯಂಕದಲ್ಲಿ (ಬಿಎಸ್‌ಇ) ಟಾಟಾ ಮೋಟಾರ್ಸ್ ಶೇರುಗಳು ಬುಧವಾರ ಶೇಕಡಾ 1.71ರಷ್ಟು ಏರುಗತಿ ಕಂಡಿವೆ.
ಒಂದಲ್ಲ ಒಂದು ರೀತಿಯಲ್ಲಿ ನ್ಯಾನೋ ಪ್ರಯಾಣಿಕ ಕಾರನ್ನು ಉತ್ತೇಜಿಸಲು ಟಾಟಾ ಮೋಟಾರ್ಸ್ ಯೋಜನೆ ಹಮ್ಮಿಕೊಳ್ಳುತ್ತಲೇ ಇವೆ. ಇನ್ನು ವಿಶೇಷವೆಂದರೆ ಯಾವುದೇ ಹೆಚ್ಚಿನ ಬಡ್ಡಿದರವಿಲ್ಲದೆ ಹಣ ಪಾವತಿ ಮಾಡಬಹುದಾಗಿದೆ.
ಈ ಆಕರ್ಷಕ ಯೋಜನೆಯಂತೆ ಗ್ರಾಹಕರಿಗೆ ಇಎಂಐ ಸೌಲಭ್ಯ ಲಭ್ಯವಿದ್ದು, ಪ್ರತಿ ತಿಂಗಳು ಶೇಕಡಾ '0' ಬಡ್ಡಿದರದಲ್ಲಿ ಅಂದರೆ ಪ್ರತಿ ಲಕ್ಷಕ್ಕೆ 8,333 ರು. ಇಎಂಐ ಮೂಲಕ 12 ತಿಂಗಳು ಪಾವತಿಸಬೇಕಾಗುತ್ತದೆ. ಈ ಮಹತ್ತರ ಯೋಜನೆಗಾಗಿ ಆಕ್ಸಿಸ್, ಎಚ್‌ಎಸ್‌ಬಿಸಿ, ಐಸಿಐಸಿಐ, ಕೊಟಕ್ ಮಹೀಂದ್ರ ಹಾಗೂ ಸ್ಟಾಡಂರ್ಡ್ ಚಾರ್ಟರ್ಡ್ ಬ್ಯಾಂಕ್‌ಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ವಿಶೇಷ ಆಫರ್, ದೇಶದ 26 ನಗರಗಳಲ್ಲಿ ಸೇರಿದಂತೆ ಟಾಟಾ ಮೋಟಾರ್ಸ್ 75 ಡೀಲರ್‌ಶಿಪ್‌ಗಳ ಬಳಿ ಲಭ್ಯವಿರಲಿದೆ.
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೊ ಮಾಡಿ

ಕಳೆದ ಕೆಲವು ತಿಂಗಳುಗಳಲ್ಲಿ ಕಾರು ಮಾರಾಟವು ಹಿನ್ನಡೆ ಅನುಭವಿಸಿದ್ದರಿಂದ ಟಾಟಾ ಮೋಟಾರ್ಸ್ ಇಂತಹದೊಂದು ಹೊಸ ಯೋಜನೆ ಹೊರತಂದಿದೆ.

ಖಂಡಿತವಾಗಿಯೂ ದೇಶದ ಮಧ್ಯಮ ವರ್ಗದ ಜನರಿಗೆ ಈ ಯೋಜನೆ ನೆರವಾಗುವ ನಿರೀಕ್ಷೆಯಿದೆ. ಇದರೊಂದಿಗೆ ನ್ಯಾನೋ ಮಾರಾಟ ಕೂಡಾ ಪ್ರಗತಿ ಕಾಣಲಿದೆ.

ಇನ್ನು ಕಾರು ಖರೀದಿಗಾಗಿ ನೀವು ಮುಂಗಡವಾಗಿ ಬುಕ್ಕಿಂಗ್ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಟಾಟಾ ಮೋಟಾರ್ಸ್ ಯೋಜನೆ ಪ್ರಕಾರ, ನೀವು ಕ್ರೆಡಿಟ್ ಕಾರ್ಡ್ ಉಜ್ಜಿದ ಅದೇ ದಿನದಲ್ಲಿ ಕಾರನ್ನು ಮನೆಗೆ ಒಯ್ಯಬಹುದಾಗಿದೆ.

ನಿಕಟ ಭವಿಷ್ಯದಲ್ಲಿ ನ್ಯಾನೋ ಡೀಸೆಲ್ ಆವೃತ್ತಿ ಆಗಮನವಾಗಲಿರುವಂತೆಯೇ ಈ ಕ್ರೆಡಿಟ್ ಕಾರ್ಡ್ ಯೋಜನೆ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕ್ರೆಡಿಟ್ ಕಾರ್ಡ್ ಉಜ್ಜಿ ನ್ಯಾನೋ ಒಯ್ಯಿರಿ

ಕ್ರೆಡಿಟ್ ಕಾರ್ಡ್ ಉಜ್ಜಿ ನ್ಯಾನೋ ಒಯ್ಯಿರಿ



Click it and Unblock the Notifications








