ಬರುತ್ತಿದೆ ಗಾಳಿಯಿಂದ ಚಲಿಸುವ ಟಾಟಾ ಕಾರು - ಏರ್‌ಪೊಡ್

By Nagaraja

ಕೆಲವು ವರ್ಷಗಳ ಹಿಂದೆ ನ್ಯಾನೋ ಅಗ್ಗದ ಕಾರನ್ನು ಬಿಡುಗಡೆ ಮಾಡುವ ಮೂಲಕ ಇಡೀ ವಿಶ್ವವನ್ನು ಬೆರಗುಗೊಳಿಸಿದ್ದ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಈಗ ಮಗದೊಂದು ನವೀನ ತಂತ್ರಜ್ಞಾನದೊಂದಿಗೆ ಮುಂದೆ ಬಂದಿದೆ.

ಮುಖ್ಯಾಂಶಗಳು

  • ಸಂಕುಚಿತ ವಾಯುನಿಂದ ಚಲಿಸುವ ಟಾಟಾ ಕಾರು - ಏರ್ ಪೊಡ್
  • ಹಗುರ ಭಾರತ (300 ಕೆ.ಜಿ ಒಳಗಡೆ),
  • ಶೂನ್ಯ ಮಾಲಿನ್ಯ,
  • ಎಲೆಕ್ಟ್ರಿಕ್ ಕಾರಿಗಿಂತಲೂ ಅಗ್ಗ,
  • ಟಾಟಾ ಸರ್ವೀಸ್ ಸ್ಟೇಷನ್‌ಗಳಲ್ಲಿ ಮೂರು ನಿಮಿಷಗಳಲ್ಲೇ ಸಂಕುಚಿತ ಗಾಳಿ ಮರು ತುಂಬುವಿಕೆ,
  • ಕಡಿಮೆ ಚಾಲನಾ ವೆಚ್ಚ,
  • ಕಡಿಮೆ ನಿರ್ವಹಣಾ ವೆಚ್ಚ - (ಕೂಲಿಂಗ್ ಸಿಸ್ಟಂ, ಸ್ಪಾರ್ಕ್ ಪ್ಲಗ್, ಸ್ಟಾರ್ಟರ್ ಮೋಟಾರು ಮತ್ತು ಮಫ್ಲರ್ ಅಗತ್ಯವಿರುವುದಿಲ್ಲ)

ಈ ಬಾರಿ ಹಿಂದೆಂದಿಗಿಂತಲೂ ಮುಂದುವರಿದ ತಂತ್ರಜ್ಞಾನವನ್ನು ಪರಿಚಯಿಸಿರುವ ಟಾಟಾ ಸಂಸ್ಥೆಯು, ಗಾಳಿಯಿಂದ ಸಂಚರಿಸುವ ಏರ್‌ಪೊಡ್ ಕಾರನ್ನು ಪರಿಚಿಯಿಸಿದೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಈ ಚೊಕ್ಕದಾದ ಕಾರು ನಿಕಟ ಭವಿಷ್ಯದಲ್ಲೇ ರಸ್ತೆ ಪ್ರವೇಶಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಸಂಬಂಧ ಎಕ್ಸ್ ಕ್ಲೂಸಿವ್ ಮಾಹಿತಿಗಳಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಗಾಳಿಯಿಂದ ಚಲಿಸುವ ಟಾಟಾ ಕಾರು - ಏರ್‌ಪೊಡ್

ಸಂಕುಚಿತ ವಾಯು ಸಿದ್ಧಾಂತದಲ್ಲಿ ಚಲಿಸುವ ಈ ತ್ರಿಚಕ್ರ ವಾಹನ ಅಭಿವೃದ್ಧಿಗಾಗಿ ಟಾಟಾ ಸಂಸ್ಥೆಯು ಫ್ರಾನ್ಸ್‌ನ ಮೋಟಾರು ಡೆವಲಪ್‌ಮೆಂಟ್ ಇಂಟರ್ ನ್ಯಾಷನಲ್ (ಎಂಡಿಐ) ಜೊತೆ ಕೈಜೋಡಿಸಿಕೊಂಡಿದೆ. ಸರಿ ಸುಮಾರು ಏಳು ವರ್ಷಗಳ ಹಿಂದೆ ಆರಂಭಿಸಿರುವ ಈ ಯೋಜನೆಯು ಈಗಾಗಲೇ ಎರಡು ಹಂತವನ್ನು ಪೂರ್ಣಗೊಳಿಸಿದೆ.

ಗಾಳಿಯಿಂದ ಚಲಿಸುವ ಟಾಟಾ ಕಾರು - ಏರ್‌ಪೊಡ್

ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಪ್ರಕಾರ ಬ್ಲೂ ಸ್ಕೈ ಯೋಜನೆಯ ಅಡಿಯಲ್ಲಿ ಸಂಕುಚಿತ ಏರ್ ಎಂಜಿನ್ ಅಭಿವೃದ್ಧಿಯಲ್ಲಿ ಟಾಟಾ ತೊಡಗಿದ್ದು, 2015ರ ವೇಳೆಯಾಗುವಾಗ ಹವಾಯ್‌ನಲ್ಲಿ ಈ ಮಹತ್ತರ ಯೋಜನೆ ಪರಿಚಯವಾಗಲಿದೆ.

ಗಾಳಿಯಿಂದ ಚಲಿಸುವ ಟಾಟಾ ಕಾರು - ಏರ್‌ಪೊಡ್

ಇದು ಸಂಸ್ಥೆಯ ಶೂನ್ಯ ಮಾಲಿನ್ಯದ ವಾಹನದ ನೀತಿಯ ಭಾಗವಾಗಿದ್ದು, ಇದರಲ್ಲಿ ಸ್ಟೀರಿಂಗ್ ವೀಲ್ ಬದಲು ಜಾಯ್ ಸ್ಟಿಕ್ (ವಿವಿಧ ದಿಕ್ಕುಗಳಲ್ಲಿ ಚಲಿಸಬಹುದಾದ ನಿಯಂತ್ರಕ) ಇರಲಿದೆ.

ಗಾಳಿಯಿಂದ ಚಲಿಸುವ ಟಾಟಾ ಕಾರು - ಏರ್‌ಪೊಡ್

ಟಾಟಾ ಏರ್ ಪೊಡ್‌ನಲ್ಲಿ ಒಂದು ಮಗು ಹಾಗೂ ಮೂವರಿಗೆ ಕುಳಿತುಕೊಳ್ಳಬಹುದಾಗಿದೆ. ಹಾಗೆಯೇ ಗಂಟೆಗೆ 80 ಕೀ.ಮೀ. ಅಂತೆಯೇ ಗರಿಷ್ಠ 200 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸಬಹುದಾಗಿದೆ.

ಗಾಳಿಯಿಂದ ಚಲಿಸುವ ಟಾಟಾ ಕಾರು - ಏರ್‌ಪೊಡ್

ಭಾರತದಂತಹ ವಾಹನ ನಿಬಿಡ ರಾಷ್ಟ್ರಗಳಿಗೆ ಹೇಳಿ ಮಾಡಿಸಿದಂತಹ ವಾಹನ ಇದಾಗಿದ್ದು, ಯಾವುದೇ ರೀತಿಯ ಟ್ರಾಫಿಕ್ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ. ಹಾಗೆಯೇ ಪಾರ್ಕಿಂಗ್ ಕೂಡಾ ಬಹಳ ಸುಲಭವಾಗಿದೆ.

ಗಾಳಿಯಿಂದ ಚಲಿಸುವ ಟಾಟಾ ಕಾರು - ಏರ್‌ಪೊಡ್

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಐದು ಲಕ್ಷ ರು.ಗಳ ಅಂದಾಜು ಬೆಲೆಯನ್ನು ಟಾಟಾ ಏರ್ ಪೊಡ್‌ಗೆ ನಿಗದಿಪಡಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲೇ ಸ್ಪಷ್ಟ ಉತ್ತರ ದೊರಕಲಿದೆ. ಇದಕ್ಕಾಗಿ ಸದಾ ಓದುತ್ತಿರಿ ಡ್ರೈವ್ ಸ್ಪಾರ್ಕ್!

More from DriveSpark

Article Published On: Friday, February 6, 2015, 11:35 [IST]
English summary
According to sources, Tata Motors might bring its air-powered Airpod car in 2015. In 2007 Tata Motors had signed an agreement with Luxembourg-based Motor Development International (MDI) to produce and sell cars running on compressed air.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+