ಟಾಟಾ ಗಾಡಿಗಳಿಗೂ ಬರುತ್ತಂತೆ ಆಟೋಮ್ಯಾಟಿಕ್ ತಂತ್ರಾಂಶ

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ನಂ. 1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇತ್ತೀಚೆಗಷ್ಟೇ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರುವ ಸೆಲೆರಿಯೊ ಕಾರನ್ನು ಲಾಂಚ್ ಮಾಡಿತ್ತು. ಪ್ರಸ್ತುತ ಕಾರಿನ ಬುಕ್ಕಿಂಗ್ ಬಿರುಸಿನಿಂದ ಸಾಗುತ್ತಿದ್ದು, ಮ್ಯಾನುವಲ್ ಗೇರ್‌ಬಾಕ್ಸ್‌ಗಿಂತಲೂ ಹೆಚ್ಚು ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನು ಗಮನಿಸಿರುವ ದೇಶದ ನಂ.1 ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತಾವೇನೂ ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಸದ್ಯದಲ್ಲೇ ಆಟೋಮ್ಯಾಟಿಕ್ ಕಾರುಗಳನ್ನು ಲಾಂಚ್ ಮಾಡುವ ಮಹತ್ತರ ಯೋಜನೆ ಹೊಂದಿದೆ. ಈಗಾಗಲೇ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರಿನಲ್ಲಿ ತಮ್ಮ ನೂತನ ಆಟೋಮ್ಯಾಟಿಕ್ ತಂತ್ರಾಂಶವನ್ನು ಅವಿಷ್ಕರಿಸಿರುವ ಟಾಟಾ, ನಿಕಟ ಭವಿಷ್ಯದಲ್ಲೇ ಗ್ರಾಹಕರಿಗೆ ತಮ್ಮ ಎಎಂಟಿ ತಂತ್ರಗಾರಿಕೆಯ ಸವಿ ಅನುಭವಿಸಲು ನೆರವಾಗಲಿದೆ.

ಟಾಟಾ ಗಾಡಿಗಳಿಗೂ ಬರುತ್ತಂತೆ ಆಟೋಮ್ಯಾಟಿಕ್ ತಂತ್ರಾಂಶ

ಮಾಂಝಾ ಉತ್ತರಾಧಿಕಾರಿ ಗುರುತಿಸಿಕೊಂಡಿರುವ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು, ಟಾಟಾದಿಂದ ಆಗಮನವಾಗಲಿರುವ ಮೊದಲ ಆಟೋಮ್ಯಾಟಿಕ್ ಮ್ಯಾನುವಲ್ ತಂತ್ರಗಾರಿಕೆ ಹೊಂದಿರುವ ಕಾರೆನಿಸಿಕೊಳ್ಳುವ ಸಾಧ್ಯತೆಯಿದೆ.

ಟಾಟಾ ಗಾಡಿಗಳಿಗೂ ಬರುತ್ತಂತೆ ಆಟೋಮ್ಯಾಟಿಕ್ ತಂತ್ರಾಂಶ

ಇದರ ಬೆನ್ನಲ್ಲೇ ವಿಸ್ಟಾ ಉತ್ತರಾಧಿಕಾರಿಯಾದ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಟಾಟಾ ಪರಿಚಯಿಸಲಿದೆ. ವರದಿಗಳ ಪ್ರಕಾರ ಜೆಸ್ಟ್ ಹಾಗೂ ಬೋಲ್ಟ್ ಡೀಸೆಲ್ ವೆರಿಯಂಟ್‌ಗಳು ಆಟೋಮ್ಯಾಟಿಕ್ ತಂತ್ರಾಂಶ ಪಡೆಯಲಿದೆ.

ಟಾಟಾ ಗಾಡಿಗಳಿಗೂ ಬರುತ್ತಂತೆ ಆಟೋಮ್ಯಾಟಿಕ್ ತಂತ್ರಾಂಶ

ಅಷ್ಟೇ ಯಾಕೆ 2014 ಆಟೋ ಎಕ್ಸ್ ಪೋದಲ್ಲಿ ನ್ಯಾನೋ ಟ್ವಿಸ್ಟ್ ಆಟೋಮ್ಯಾಟಿಕ್ ವರ್ಷನ್ ಕಾರನ್ನು ಸಹ ಟಾಟಾ ಅನಾವರಣಗೊಳಿಸಿತ್ತು. ಇದು ಜಗತ್ತಿನ ಅತಿ ಅಗ್ಗದ ಆಟೋಮ್ಯಾಟಿಕ್ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ಟಾಟಾ ಗಾಡಿಗಳಿಗೂ ಬರುತ್ತಂತೆ ಆಟೋಮ್ಯಾಟಿಕ್ ತಂತ್ರಾಂಶ

ನ್ಯಾನೋದ ಆಟೋಮ್ಯಾಟಿಕ್ ವೆರಿಯಂಟ್, ಟ್ವಿಸ್ಟ್ ಎಫ್-ಟ್ರಾನಿಕ್ ಎಂದೆನಿಸಿಕೊಳ್ಳಲಿದೆ. ಇದು ನಗರ ಪ್ರದೇಶದ ಜನರಿಗೆ ಉತ್ತಮವೆನಿಸಲಿದೆ. ಅಲ್ಲದೆ ಇಂಡೋನೇಷ್ಯಾ ಸೇರಿದಂತೆ ಇನ್ನಿತರ ರಾಷ್ಟ್ರಗಳಿಗೆ ರಫ್ತು ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

More from DriveSpark

Article Published On: Wednesday, February 26, 2014, 8:01 [IST]
English summary
In the not too distant future, ever Tata Motors passenger vehicle will be equipped with the Automated Manual Transmission (AMT). Tata Motors first previewed its AMT technology during the reveal of the Zest compact sedan which was equipped with the upcoming transmission system.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+