ಟಾಟಾದಿಂದ ಹೊಸತಾದ ವಿಸ್ಟಾ ಟೆಕ್ ವೆರಿಯಂಟ್ ಲಾಂಚ್
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನೂತನ ವಿಸ್ಟಾ ಟೆಕ್ ವೆರಿಯಂಟ್ ಲಾಂಚ್ ಮಾಡಿದೆ. ಈ ಡೀಸೆಲ್ ಕಾರಿನ ಮುಂಬೈ ಎಕ್ಸ್ ಶೋ ರೂಂ ದರ 5.01 ಲಕ್ಷ ರು.ಗಳಾಗಿವೆ.
ಒಟ್ಟು ಮೂರು ವೆರಿಯಂಟ್‌ಗಳಲ್ಲಿ ಟಾಟಾ ವಿಸ್ಟಾ ಟೆಕ್ ವೆರಿಯಂಟ್ ಲಭ್ಯವಿರಲಿದೆ. ಅವುಗಳೆಂದರೆ ಎಲ್‌ಎಸ್, ಎಲ್‌ಎಕ್ಸ್ ಮತ್ತು ವಿಕ್ಸ್. ಇದು ಮುಂಬೈ ಎಕ್ಸ್ ಶೋ ರೂಂ ದರ 5.01 ಲಕ್ಷ ರು.ಗಳಿಂದ ಆರಂಭವಾಗಿ 6.19 ಲಕ್ಷ ರು.ಗಳ ವರೆಗಿದೆ.

ಟಾಟಾ ವಿಸ್ಟಾ ಟೆಕ್ ಬಿಎಸ್3 ಮತ್ತು ಬಿಎಸ್4 ಎಂಬ ಎರಡೂ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಟಾಟಾ ವಿಸ್ಟಾ ಟೆಕ್ ಎಲ್‌ಎಸ್ ಮಾದರಿ 1.4 ಲೀಟರ್ ಟಿಡಿಐ ಬಿಎಸ್3 ಎಂಜಿನ್ ಮತ್ತು 1.3 ಲೀಟರ್ ಕ್ವಾಡ್ರಾಜೆಟ್ 75 ಅಶ್ವಶಕ್ತಿಯ ಬಿಎಸ್4 ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿರಲಿದೆ.

ಹಾಗೆಯೇ ಟಾಟಾ ವಿಸ್ಟಾ ಎಲ್‌ಎಕ್ಸ್ ವೆರಿಯಂಟ್ 1.4 ಲೀಟರ್ ಟಿಡಿಐ ಬಿಎಸ್3 ಡೀಸೆಲ್ ಆಗಮನವಾಗಲಿದೆ. ಅದೇ ಹೊತ್ತಿಗೆ ಟಾಪ್ ಎಂಡ್ ಲಿಮಿಟೆಡ್ ವೆರಿಯಂಟ್ ಆಗಿರುವ ಟಾಟಾ ವಿಎಕ್ಸ್ ಟೆಕ್ 1.3 ಲೀಟರ್, ಕ್ವಾಡ್ರಾಜೆಟ್ 75 ಅಶ್ವಶಕ್ತಿಯ ಬಿಎಸ್3 ಡೀಸೆಲ್ ಎಂಜಿನ್ ಮಾತ್ರ ಲಭ್ಯವಿರಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟಾಟಾ ಮೋಟಾರ್ಸ್, ವಿಸ್ಟಾ ವಿಎಕ್ಸ್ ಟೆಕ್ ಆವೃತ್ತಿಯು ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳ ಜತೆಗೆ ತಾಜಾ ತಂತ್ರಜ್ಞಾನ ಹೊಂದಿರುವುದಾಗಿ ತಿಳಿಸಿದೆ.

ಟಾಟಾ ನೂತನ ವಿಸ್ಟಾ ಟೆಕ್ ಆವೃತ್ತಿಯು ಅತ್ಯುತ್ತಮ ಚಾಲನಾ ಅನುಭವದ ಜತೆಗೆ ಹೈ ಎಂಡ್ ವೈಶಿಷ್ಟ್ಯಗಳೊಂದಿಗೆ ಸಂಪನ್ನವಾಗಿದೆ. ಮಾರುಕಟ್ಟೆಗೆ ನಾವೀನ್ಯತೆಯನ್ನು ಪ್ರದರ್ಶಿಸಲು ಸಾಧ್ಯವಾಗಿರುವುದರಲ್ಲಿ ಸಂತಸವಿದೆ ಎಂದು ಟಾಟಾ ತಿಳಿಸಿದೆ.

ನೂತನ ಟಾಟಾ ವಿಸ್ಟಾ ವಿಎಕ್ಸ್ ಟೆಕ್ ವೆರಿಯಂಟ್, 6.5 ಇಂಚು ಟಚ್‌ಸ್ಕ್ರೀನ್ ಮಾಹಿತಿ ಸಿಸ್ಟಂ ಹೊಂದಿದ್ದು, ಆಡಿಯೋ ಜತೆಗೆ ವೀಡಿಯೋ ಪ್ಲೇ ಇರಲಿದೆ. ಅಷ್ಟೇ ಅಲ್ಲದೆ ಇದರಲ್ಲಿ ಜಿಪಿಎಸ್ ನೇವಿಗೇಷನ್ ಮತ್ತು ಬ್ಲೂಟೂತ್ ಸೌಲಭ್ಯ ಕೂಡಾ ಇರಲಿದೆ.

ಇದರ ಜತೆಗೆ ವಿಸ್ಟಾ ವಿಕ್ಸ್ ಟೆಕ್ ಆವೃತ್ತಿಯು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಮತ್ತು ಡ್ರೈವ್ ಪ್ರೊ ಕನ್ಸೋಲ್ ಸೇವೆಯನ್ನು ಒದಗಿಸುತ್ತಿದೆ.

ನೂತನ ವಿಸ್ಟಾ ಟೆಕ್ ವೆರಿಯಂಟ್ ಹೊಸ ಕಲರ್ ಬ್ಲ್ಯೂ ಚಿಲ್‌ನಲ್ಲಿ ಲಭ್ಯವಿರಲಿದೆ. ಹಾಗೆಯೇ ಕಾರಿನ ಬದಿಯಲ್ಲಿ ದೊಡ್ಡದಾದ ಟೆಕ್ ಡೆಕಾಲ್ಸ್ ಇರಲಿದೆ. ಇನ್ನುಳಿದಂತೆ ಫ್ಯಾಬ್ರಿಕ್ ಸೀಟ್ ಲಭ್ಯವಿದ್ದರೂ ಅಲಾಯ್ ವೀಲ್ ಕೊರತೆ ಕಾಡಲಿದೆ.


Click it and Unblock the Notifications








