ಟಾಟಾ ಕಾರು ಖರೀದಿ ವೇಳೆ ರು. 80,000 ವರೆಗೆ ಪ್ರಯೋಜನ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮಗದೊಮ್ಮೆ ಆಫರುಗಳ ಮಹಾಪೂರವನ್ನೇ ಗ್ರಾಹಕರಿಗೆ ಮುಂದಿಡುತ್ತಿದೆ.
ನಿಗದಿತ ಅವಧಿಯಲ್ಲಿ ಹೊಸ ಹೊಸ ಮಾದರಿಗಳನ್ನು ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಇದೀಗ ತನ್ನ ಜನಪ್ರಿಯಮ ಮಾದರಿಗಳಿಗೆ ಗರಿಷ್ಠ ಪ್ರಯೋಜನಗಳನ್ನು ನೀಡುತ್ತಿದೆ. ಹಾಗಿದ್ದರೂ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ಈ ಆಫರ್ ಪಟ್ಟಿಯಲ್ಲಿರುವುದಿಲ್ಲ. ಅಷ್ಟಕ್ಕೂ ಯಾವೆಲ್ಲ ಟಾಟಾ ಕಾರುಗಳಿಗೆ ಎಷ್ಟೆಷ್ಟು ಆಫರ್ ನೀಡಲಾಗುತ್ತಿದೆ? ಸಂಪೂರ್ಣ ವಿವರಗಳಿಗಾಗಿ ಸ್ಲೈಡ್‌ನತ್ತ ಮುಂದುವರಿಯಿರಿ.

ನಿಮ್ಮ ಮಾಹಿತಿಗಾಗಿ, ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಹೋಂಡಾ ಅಮೇಜ್ ಹಿಂದಿಕ್ಕಿದ್ದ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಮಾರಾಟ ಅಂಕಿಅಂಶದಲ್ಲಿ ಮೂರನೇ ಸ್ಥಾನಕ್ಕೆ ನೆಗೆತ ಕಂಡಿತ್ತು. ನಿಸ್ಸಂಶಯವಾಗಿಯೂ ಇಲ್ಲಿ ಮೊದಲೆರಡು ಸ್ಥಾನಗಳನ್ನು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್ ಆಲಂಕರಿಸಿಕೊಂಡಿದೆ.

ನ್ಯಾನೋ ಟ್ವಿಸ್ಟ್
ಗರಿಷ್ಠ ಪ್ರಯೋಜನ ರು. 35,000 ವರೆಗೆ
ವಿಶಿಷ್ಟತೆ
ಪವರ್ ಸ್ಟೀರಿಂಗ್,
ಬೆಸ್ಟ್ ಇನ್ ಕ್ಲಾಸ್ ಮೈಲೇಜ್ - 25.35 kmpl
ಆ್ಯಂಪಿಸ್ಟ್ರೀಮ್ ಮ್ಯೂಸಿಕ್ ಸಿಸ್ಟಂ, ಸಿಡಿ, ಎಂಪಿ3, ಆಕ್ಸ್, ಯುಎಸ್‌ಬಿ ಮತ್ತು ಬ್ಲೂಟೂತ್

ಟಾಟಾ ಇಂಡಿಕಾ
ಗರಿಷ್ಠ ಪ್ರಯೋಜನ ರು. 40,000 ವರೆಗೆ
ವಿಶಿಷ್ಟತೆ
ಸಂಸ್ಕರಿಸಿದ ಸಿಆರ್4 ಎಂಜಿನ್
ಮೈಲೇಜ್ 25 kmpl
ಎಫ್ ಶಿಫ್ಟ್ ಗೇರ್ ಬಾಕ್ಸ್, ಡ್ಯು ಪ್ಲೋಟ್ ಸಸ್ಪೆನ್ಷನ್
ಹೆಚ್ಚು ಸ್ಥಳಾವಕಾಶಯುಕ್ತ ಡ್ಯುಯಲ್ ಟೋನ್ ಇಂಟಿರಿಯರ್

ಟಾಟಾ ವಿಸ್ಟಾ
ಗರಿಷ್ಠ ಪ್ರಯೋಜನ ರು. 50,000 ವರೆಗೆ
ವಿಶಿಷ್ಟತೆ
ಟಚ್ ಸ್ಕ್ರೀನ್ ಮಲ್ಟಿ ಮೀಡಿಯಾ ಸಿಸ್ಟಂ ಜೊತೆ ಜಿಪಿಎಸ್,
ಸಂಸ್ಕರಿಸಿದಿ 75 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್,
ಡ್ರೈವ್ ಪ್ರೊ ಕನ್ಸೋಲ್ ಮತ್ತು ಡಿಐಎಸ್

ಇಂಡಿಗೊ ಇಸಿಎಸ್
ಗರಿಷ್ಠ ಪ್ರಯೋಜನ ರು. 40,000 ವರೆಗೆ
ವಿಶಿಷ್ಟತೆ
ಸಂಸ್ಕರಿಸಿದ ಸಿಆರ್4 ಎಂಜಿನ್
ಮೈಲೇಜ್ 25 kmpl
ಹೊಸ ಡ್ಯು ಪ್ಲೋಟ್ ಸಸ್ಪೆನ್ಷನ್
ಮ್ಯೂಸಿಕ್ ಸಿಸ್ಟಂ

ಟಾಟಾ ಮೂವಸ್
ಬೆಲೆ 6.99 ರು.ಗಳಿಂದ ಆರಂಭ
ವಿಶಿಷ್ಟತೆ
2.2 ಲೀಟರ್ ವ್ಯಾರಿಕೋರ್ ಎಂಜಿನ್, 120 ಪಿಎಸ್ ಪವರ್,
ಮೈಲೇಜ್ 15.16 kmpl
7/8/9 ಸಿಟ್ಟಿಂಗ್ ಅವಕಾಶ

ಸುಮೋ ಗೋಲ್ಡ್
ಗರಿಷ್ಠ ಪ್ರಯೋಜನ ರು. 20,000 ವರೆಗೆ
ವಿಶಿಷ್ಟತೆ
ಶಕ್ತಿಶಾಲಿ 3 ಲೀಟರ್ ಸಿಆರ್4 ಎಂಜಿನ್,
ರೂಫ್ ಮೌಂಟೆಡ್ ಡ್ಯುಯಲ್ ಎಸಿ,
ಡಬಲ್ ವಿಶ್‌ಬೋನ್ ಸಸ್ಪೆನ್ಷನ್

ಟಾಟಾ ಸಫಾರಿ ಸ್ಟ್ರೋಮ್
ಗರಿಷ್ಠ ಪ್ರಯೋಜನ ರು. 80,000 ವರೆಗೆ
ವಿಶಿಷ್ಟತೆ
ಶಕ್ತಿಶಾಲಿ 2.2 ಲೀಟರ್ ವ್ಯಾರಿಕೋರ್ ಎಂಜಿನ್
140 ಪಿಎಸ್, 320 ಎನ್‌ಎಂ,
4x4 ಇಎಸ್‌ಒಎಫ್ (ಎಲೆಕ್ಟ್ರಾನಿಕ್ ಶಿಫ್ಟ್-ಆನ್-ಫ್ಲೈ)
ಮೂರು ವರ್ಷಗಳ ಎಂಜಿನ್ ಅಥವಾ 1,00,000 ಕೀ.ಮೀ.ಗಳ ವಾರಂಟಿ

ಟಾಟಾ ಆರಿಯಾ
ಬೆಲೆ 9.95 ಲಕ್ಷ ರು.ಗಳಿಂದ ಆರಂಭ
ವಿಶಿಷ್ಟತೆ
ಹೊಸ 2.2 ಲೀಟರ್ ವ್ಯಾರಿಕೋರ್ ಎಂಜಿನ್
150 ಪಿಎಸ್, 320 ಎನ್‌ಎಂ
ಮೈಲೇಜ್ 15.05 kmpl
ಮೂರು ವರ್ಷಗಳ ಎಂಜಿನ್ ಅಥವಾ ಒಂದು ಲಕ್ಷ ಕೀ.ಮೀ.ಗಳ ವಾರಂಟಿ
ಅಂದ ಹಾಗೆ 2014 ನವೆಂಬರ್ 30ರ ವರೆಗೆ ಆಫರ್ ಜಾರಿಯಲ್ಲಿರಲಿದೆ.


Click it and Unblock the Notifications








