ನಿಮಗಿದು ಗೊತ್ತೇ? ದಿಲ್ಲಿಯಲ್ಲಿ ಟಾಟಾದಿಂದ 18 ಮಾದರಿಗಳ ಪ್ರದರ್ಶನ

By Nagaraja

ಈ ಬಾರಿಯ ದೆಹಲಿ ಆಟೋ ಎಕ್ಸ್ ಪೋದಲ್ಲಿ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಗಮನ ಸೆಳೆದಿವೆ. ಈ ಪೈಕಿ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೂಡಾ ಹೊರತಾಗಿಲ್ಲ.

2014 ಆಟೋ ಎಕ್ಸ್ ಪೋ

ಅಷ್ಟಕ್ಕೂ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಟಾಟಾ ಎಷ್ಟು ಮಾದರಿಗಳು ಪ್ರದರ್ಶಿಸಿವೆ ಎಂಬುದನ್ನು ನಿಮ್ಮಿಂದ ಊಹಿಸಬಹುದೇ? ಹೌದು, ಬರೋಬ್ಬರಿ 18 ನೂತನ ಮಾದರಿಗಳನ್ನು ಪ್ರದರ್ಶಿಸಿದೆ.

ಟಾಟಾ ಕಾನ್ಸೆಪ್ಟ್

ಟಾಟಾ ಕಾನ್ಸೆಪ್ಟ್

ಈ ಎಲ್ಲದರ ಮೂಲಕ 12ನೇ ಆಟೋ ಎಕ್ಸ್ ಪೋದ ಸಂಪೂರ್ಣ ಪ್ರಯೋಜನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಟಾಟಾ ಯಶಸ್ಸನ್ನು ಕಂಡಿದೆ.

ಟಾಟಾ ವೆಂಚುರ್

ಟಾಟಾ ವೆಂಚುರ್

ಈ ಪೈಕಿ ಪ್ರಯಾಣಿಕ ವಾಹನಗಳು ಡಿಸೈನ್‌ನೆಕ್ಸ್ಟ್, ಡ್ರೈವ್‌ನೆಕ್ಸ್ಟ್ ಹಾಗೂ ಕನೆಕ್ಟ್‌ನೆಕ್ಸ್ಟ್ ಸಿದ್ಧಾಂತವನ್ನು ಪಾಲಿಸಿದ್ದರೆ ವಾಣಿಜ್ಯ ವಾಹನಗಳು ಡಿಸೈನ್‌ನೆಕ್ಸ್ಟ್, ನಿರ್ವಹಣೆ ನೆಕ್ಸ್ಟ್ ಜತೆಗೆ ಫ್ಯೂಯಲ್‌ನೆಕ್ಸ್ಟ್ ಥೀಮ್ ಒಳಗೊಂಡಿದ್ದವು.

ಬೋಲ್ಟ್

ಬೋಲ್ಟ್

ಟಾಟಾ ಮೋಟಾರ್ಸ್‌ನಿಂದ ಅನಾವರಣಗೊಂಡಿರುವ ವಾಹನಗಳ ಪೈಕಿ ಟಾಟಾ ಬೋಲ್ಟ್ ಸಬ್ ಫೋರ್ ಮೀಟರ್ ಸೆಡಾನ್ ಹಾಗೂ ಜೆಸ್ಟ್ ಹ್ಯಾಚ್‌ಬ್ಯಾಕ್ ಕಾರುಗಳು ಅತಿ ಹೆಚ್ಚು ಗಮನ ಸೆಳೆದಿದ್ದವು.

ಟಾಟಾ ಪ್ರೈಮಾ

ಟಾಟಾ ಪ್ರೈಮಾ

ಇನ್ನು ವಾಣಿಜ್ಯ ವಾಹನಗಳತ್ತ ಗಮನ ಹರಿಸಿದ್ದರೆ ಟಾಟಾ ಸಂಸ್ಥೆಯು, ಪ್ರೈಮಾ ಸಿಎಕ್ಸ್1618ಟಿ, ಆಲ್ಟ್ರಾ 614 ಎಲ್‌ಪಿಎಸ್ 4923 ಎಲ್‌ಎ ಮಾದರಿಗಳನ್ನು ಪ್ರದರ್ಶಿಸಿದ್ದರು.

ಟಾಟಾ ಆಲ್ಟ್ಟಾ

ಟಾಟಾ ಆಲ್ಟ್ಟಾ

ಇವೆಲ್ಲದರ ಜತೆಗೆ ಕಾನ್ಸೆಪ್ಟ್ ವಾಹನಗಳನ್ನು ಪ್ರದರ್ಶಿಸುವಲ್ಲಿಯೂ ಟಾಟಾ ಮರೆಯಲಿಲ್ಲ. ಈ ಪೈಕಿ ಆಧುನಿಕತೆಯ ಸಂಕೇತವಾಗಿರುವ ನೆಕ್ಸಾನ್ ಕಾಂಪಾಕ್ಟ್ ಎಸ್‌ಯುವಿ ಗರಿಷ್ಠ ಪ್ರತಿಕ್ರಿಯೆ ಪಡೆದಿತ್ತು. ಇದರ ಜತೆಗೆ ಕನೆಕ್ಟ್ ನೆಕ್ಸ್ಟ್ ಕಾನ್ಸೆಪ್ಟ್‌ಗಳು ಅನಾವರಣಗೊಂಡಿದ್ದವು.

ಟಾಟಾ ಐರಿಸ್

ಟಾಟಾ ಐರಿಸ್

ಹೆಚ್ಚುವರಿಯಾಗಿ ಭವಿಷ್ಯದ ಸಾರಿಗೆ ವ್ಯವಸ್ಥೆಗಾಗಿ ಗ್ರೀನ್ ಪ್ಯೂಯಲ್ ವಾಹನಗಳನ್ನು ಪ್ರದರ್ಶಿಸಲಾಗಿತ್ತು. ಇದರಲ್ಲಿ ಮ್ಯಾಜಿಕ್ ಐರಿಸ್ ಎಲೆಕ್ಟ್ರಿಕ್, ಸಣ್ಣ ಎಲೆಕ್ಟ್ರಿಕ್ ವಾಣಿಜ್ಯ ಪ್ರಯಾಣಿಕ ವಾಹನ ಮತ್ತು ಸ್ಟಾರ್ ಬಸ್ ಅರ್ಬನ್ ಎಫ್-ಇ ಹೈಬ್ರಿಡ್ ಬಸ್ ಸೇರಿಕೊಂಡಿದ್ದವು.

 ಟಾಟಾ ಸುಮೋ ಎಕ್ಸ್‌ಟ್ರೀಮ್

ಟಾಟಾ ಸುಮೋ ಎಕ್ಸ್‌ಟ್ರೀಮ್

ಇವೆಲ್ಲವೂ ಮುಂದಿನ ದಿನಗಳಲ್ಲಿ ಟಾಟಾವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಲ್ಲಿದೆ.

ಟಾಟಾ ಮಾರ್ಕೊಪೊಲೊ

ಟಾಟಾ ಮಾರ್ಕೊಪೊಲೊ

ಇದು ಟಾಟಾದಿಂದ ಕಂಡುಬಂದಿರುವ ಆಧುನಿಕ ತಂತ್ರಗಾರಿಕೆ ಹೊಂದಿರುವ ಬಸ್

More from DriveSpark

Article Published On: Friday, February 14, 2014, 17:05 [IST]
English summary
Tata Motors showcases 18 new vehicles at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+