ಬೆಂಗ್ಳೂರಲ್ಲಿ ಟಾಟಾ ನ್ಯಾನೋ ಡೀಸೆಲ್ ಟೆಸ್ಟಿಂಗ್
ವಿಶ್ವದ ಅತಿ ಅಗ್ಗದ ಕಾರೆಂಬ ಖ್ಯಾತಿ ಪಡೆದಿರುವ ಟಾಟಾ ನ್ಯಾನೋ ಡೀಸೆಲ್ ಆವೃತ್ತಿ ನಿಕಟ ಭವಿಷ್ಯದಲ್ಲಿ ಆಗಮನವಾಗಲಿರುವಂತೆಯೇ ನಮ್ಮ ಬೆಂಗಳೂರು ನಗರದಲ್ಲಿ ಯಶಸ್ವಿ ಟೆಸ್ಟಿಂಗ್ ನಡೆಸಿದೆ.
ದೇಶದ ಮಧ್ಯಮ ವರ್ಗದ ಗ್ರಾಹಕರು ನ್ಯಾನೋ ಡೀಸೆಲ್ ವೆರಿಯಂಟ್ ಆಗಮನಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಿರುವಾಗ ಬೆಂಗಳೂರಿನಲ್ಲೇ ಟೆಸ್ಟಿಂಗ್ ಹಮ್ಮಿಕೊಂಡಿರುವುದು ಇನ್ನಷ್ಟು ಕುತೂಹಲ ಸೃಷ್ಟಿಸಿದೆ.
ಐದು ವರ್ಷಗಳ ಹಿಂದೆ ದೇಶದ ರಸ್ತೆಗೆ ಪ್ರವೇಶಿಸಿದ್ದ ನ್ಯಾನೋ ನಿರೀಕ್ಷಿಸಿದಷ್ಟು ಹೆಚ್ಚು ಸದ್ದು ಮಾಡಿರಲಿಲ್ಲ. ಇನ್ನು ಕಳೆದ ಮೂರು ತಿಂಗಳಲ್ಲಂತೂ ಮಾರಾಟ ಭಾರಿ ಹಿನ್ನಡೆ ಅನುಭವಿಸಿತ್ತು.
ಸಮಕಾಲೀನ ಪರಿಸ್ಥಿತಿಯಲ್ಲಿ ಮಾರಾಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡೀಸೆಲ್ ಹಾಗೂ 800ಸಿಸಿ ಶಕ್ತಿಶಾಲಿ ಪೆಟ್ರೋಲ್ ಎಂಜಿನ್ ಲಾಂಚ್ ಮಾಡಲು ಟಾಟಾ ಮೋಟಾರ್ಸ್ ಸಿದ್ಧತೆ ನಡೆಸುತ್ತಿದೆ. ಈ ಎರಡೂ ಆವೃತ್ತಿಗಳು 3.5 ಲಕ್ಷ ರು.ಗಳಿಗೆ ಗ್ರಾಹಕರನ್ನು ತಲುಪಲಿದೆ. ಈ ಮೂಲಕ ಹ್ಯುಂಡೈ ಇಯಾನ್ ಹಾಗೂ ಮಾರುತಿ ಅಲ್ಟೊ800ಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಹೊಂದಿದೆ.

ಡೀಸೆಲ್ ವೆರಿಯಂಟ್ ಸಬ್ 1 ಲೀಟರ್ ಡೀಸೆಲ್ ಎಂಜಿನ್ ಪಡೆಯಲಿದ್ದು, 50 ಬಿಎಚ್‌ಪಿ
ಗಿಂತಲೂ ಕಡಿಮೆ ಪವರ್ ಉತ್ಪಾದಿಸಲಿದೆ.
ಫೋಟೊ ಕೃಪೆ: ಪವರ್ ಡ್ರಿಫ್ಟ್

ಇಂಟಿರಿಯರ್ ವಿನ್ಯಾಸದಲ್ಲಿ ಬದಲಾವಣೆ ಹಾಗೂ ಪರಿಷ್ಕೃತ ಬಂಪರ್ ನ್ಯಾನೋ ಡೀಸೆಲ್‌ನ ಪ್ರಮುಖ ಫೀಚರ್ ಆಗಿರಲಿದೆ.
ಫೋಟೊ ಕೃಪೆ: ಪವರ್ ಡ್ರಿಫ್ಟ್

ಇನ್ನು ನಿಕಟ ಭವಿಷ್ಯದಲ್ಲಿ ನ್ಯಾನೋ ಸಿಎನ್‌ಜಿ ವರ್ಷನ್ ಕೂಡಾ ದೇಶದ ರಸ್ತೆಗೆ ಪ್ರವೇಶಿಸಲಿದೆ.

ನ್ಯಾನೋ ಸಿಎನ್‌ಜಿ ಕಾನ್ಸೆಪ್ಟ್

ಟಾಟಾ ನ್ಯಾನೋ

ಇದೀಗ ನ್ಯಾನೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








