ಬರುತ್ತಿದೆ 'ಪವರ್ ಸ್ಟೀರಿಂಗ್' ಶಕ್ತಿಶಾಲಿ ನ್ಯಾನೋ
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಸದ್ಯದಲ್ಲೇ ಪವರ್ ಸ್ಟೀರಿಂಗ್ ನ್ಯಾನೋ ಕಾರನ್ನು ಲಾಂಚ್ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ ಪವರ್ ಸ್ಟೀರಿಂಗ್ ಹೊಂದಿರುವ ನ್ಯಾನೋ ಮುಂದಿನ ವರ್ಷಾರಂಭದಲ್ಲಿ ಅಂದರೆ ಇನ್ನೊಂದು ತಿಂಗಳಲ್ಲಿ ರಸ್ತೆ ಪ್ರವೇಶಿಸಲಿದೆ.
ನ್ಯಾನೋಗೆ ಕಳಂಕ ತಂದ 'ಅಗ್ಗದ ಕಾರು' ಪಟ್ಟ
ವಿಶ್ವದ ಅತಿ ಅಗ್ಗದ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ನ್ಯಾನೋದಲ್ಲಿ ಪವರ್ ಸ್ಟೀರಿಂಗ್ ಅಭಾವ ಎದ್ದು ಕಾಣಿಸಿಸುತ್ತಿತ್ತು. ಪ್ರಮುಖವಾಗಿ ನಗರ ಪ್ರದೇಶದ ವಾಹನ ದಟ್ಟಣೆಯ ಚಾಲನೆಯಲ್ಲಿ ನ್ಯಾನೋ ಪವರ್ ಸ್ಟೀರಿಂಗ್ ತೊಂದರೆ ಎದ್ದು ಕಾಣಿಸುತ್ತಿತ್ತು. ಅಲ್ಲದೆ 30 ಕೀ.ಮೀ. ವೇಗಮಿತಿಯೊಳಗೆ ಸಂಚರಿಸುವಾಗ ಪವರ್ ಸ್ಟೀರಿಂಗ್ ಅಭಾವತೆ ಕಾಡುತ್ತಿತ್ತು.

ಇವೆಲ್ಲಕ್ಕೂ ಪರಿಹಾರ ಕಂಡುಕೊಂಡಿರುವ ಟಾಟಾ ಮೋಟಾರ್ಸ್, ಪವರ್ ಸ್ಟೀರಿಂಗ್ ಆಳವಡಿಸಲು ನಿರ್ಧರಿಸಿದೆ. ಇದು ಮುಂದಿನ ಜನವರಿ 15ರ ಒಳಗಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪವರ್ ಸ್ಟೀರಿಂಗ್ ವೈಶಿಷ್ಟ್ಯವನ್ನು ಪಡೆಯಲಿರುವ ನ್ಯಾನೋ ಸಾಮಾನ್ಯ ಆವೃತ್ತಿಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ. ಹೌದು, ಟಾಪ್ ಎಂಡ್ ಎಲ್‌ಎಕ್ಸ್ ವೆರಿಯಂಟ್ 15,000 ರು.ಗಳಷ್ಟು ದುಬಾರಿಯಾಗಲಿದೆ.

ಅಂದ ಹಾಗೆ ಜರ್ಮನಿಯ ಜನಪ್ರಿಯ ಮೋಟಾರು ವಾಹನಗಳ ಬಿಡಿಭಾಗ ತಯಾರಕ ಸಂಸ್ಥೆಯಾಗಿರುವ ಝಡ್‌ಎಫ್ ಫ್ರೈಡ್ರಿಚ್‌ಶಾಫನ್ ನ್ಯಾನೋ ಪವರ್ ಸ್ಟೀರಿಂಗನ್ನು ಅಭಿವೃದ್ಧಿಪಡಿಸಲಿದೆ.

ನಿಮ್ಮ ಮಾಹಿತಿಗಾಗಿ, ಪೋರ್ಷೆಗಳಂತಹ ಐಷಾರಾಮಿ ಕಾರುಗಳಿಗೆ ಟ್ರಾನ್ಸ್‌ಮಿಷನ್ ಜೋಡಣೆಯಲ್ಲಿ ಝಡ್‌ಎಫ್ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ನ್ಯಾನೋ ಗುಣಮಟ್ಟತೆಗೆ ಕಾರಣವಾಗಲಿದೆ. ಏತನ್ಮಧ್ಯೆ ನ್ಯಾನೋದಲ್ಲಿ ಎಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ಪವರ್ ಸ್ಟೀರಿಂಗ್ ಆಳವಡಿಕೆಯಾಗಲಿದೆಯೇ ಎಂಬುದು ಸಹ ಕುತೂಹಲಕ್ಕೆ ಕಾರಣವಾಗಿದೆ.

ಪ್ರಸ್ತುತ ಮೂರು ವೆರಿಯಂಟ್‌ಗಳಲ್ಲಿ ನ್ಯಾನೋ ಲಭ್ಯವಿರಲಿದೆ. ಪ್ರಸಕ್ತ ಸಾಲಿನಲ್ಲಿ ನ್ಯಾನೋ ಸಿಎನ್‌ಜಿ ಇಮ್ಯಾಕ್ಸ್ ವೆರಿಯಂಟ್ ಪರಿಚಯಿಸಲಾಗಿತ್ತು. ಹಾಗೆಯೇ ಡೀಸೆಲ್ ಎಂಜಿನ್ 2014ರಲ್ಲಿ ಆಗಮನವಾಗಲಿದೆ.

ಒಟ್ಟಿನಲ್ಲಿ ನ್ಯಾನೋದಲ್ಲಿರುವ 624 ಸಿಸಿ ಪೆಟ್ರೋಲ್ ಎಂಜಿನ್ 37.4 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ ಫೋರ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕೂಡಾ ಲಗತ್ತಿಸಲಾಗಿದೆ.


Click it and Unblock the Notifications








