ರತನ್ ಟಾಟಾ ಕಂಪನಿಯ ಪವರ್: ಗರಿಷ್ಠ ಸೇಫ್ಟಿ, ಲಕ್ಷುರಿ ಫೀಚರ್ಸ್‌ನ ಕಾರಿಗೆ ಮುಗಿಬಿದ್ದ ಜನ
ಭಾರತೀಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಳೆದ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದ್ದಾರೆ. 2024ರ ಜುಲೈ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 44,727 ಯುನಿಟ್‌ಗಳನ್ನು ಮಾರಾಟ ಮಾಡಿತು. ಕಳೆದ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಕಾರು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಟಾಟಾ ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯ ಹೊಂದಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಟಾಟಾ ಕಾರು ಮಾರಾಟದಲ್ಲಿ ಪಂಚ್ ಮಾದರಿಯು ಹೆಚ್ಚಿನ ಕೊಡುಗೆಯನ್ನು ನೀಡಿದೆ. ಕಂಪನಿಯ 'ಪಂಚ್' ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿದ್ದು, ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.
2024ರ ಜುಲೈ ತಿಂಗಳಿನಲ್ಲಿ ಟಾಟಾ ಪಂಚ್ (Tata Punch) ಮಾದರಿಯ 16,121 ಯುನಿಟ್‌ಗಳು ಮಾರಾಟವಾಗಿವೆ. ಇದನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 12,019 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.34 ರಷ್ಟು ಟಾಟಾ ಪಂಚ್ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ. ಇದು ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದ ಹೆಚ್ಚುತ್ತಿರುವ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ.

ಈ ಟಾಟಾ ಪಂಚ್ ಎಸ್‌ಯುವಿ ಮಾರುಕಟ್ಟೆಗೆ ಬಂದ ಮೊದಲ 10 ತಿಂಗಳಲ್ಲಿ 1 ಲಕ್ಷ ಯುನಿಟ್ ಮಾರಾಟ ಮಾಡಲಾಗಿತ್ತು. ಆ ನಂತರದ 9 ತಿಂಗಳ ಅವಧಿಯಲ್ಲಿ ಮಾರಾಟ ಪ್ರಮಾಣ ದ್ವಿಗುಣಗೊಂಡಿತು. 2023ರ ಡಿಸೆಂಬರ್ ವೇಳೆಗೆ 3 ಲಕ್ಷ ಯುನಿಟ್ ಕಾರುಗಳು ಮಾರಾಟವಾಗಿದ್ದವು. ವಿಶೇಷವಾಗಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ ಶೇಕಡ 68% ಮಾರುಕಟ್ಟೆ ಪಾಲನ್ನು ಹೊಂದಿದೆ.
ಟಾಟಾ ಪಂಚ್ ಪ್ಯೂರ್ ಹಾಗೂ ಅಡ್ವೆಂಚರ್ ಒಳಗೊಂಡಂತೆ ಹಲವು ರೂಪಾಂತರ (ವೇರಿಯೆಂಟ್)ಗಳನ್ನು ಹೊಂದಿವೆ. ಈ ಪಂಚ್ ಅಟಾಮಿಕ್ ಆರೆಂಜ್, ಟ್ರಾಪಿಕಲ್ ಮಿಸ್ಟ್, ಡೇಟೋನಾ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಈ ಟಾಟಾ ಪಂಚ್ ಕಾರು ಎರಡು ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ.

ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪೆಟ್ರೋಲ್ ಮಾದರಿಗಳು 18.8 -20.09 ಕಿ.ಮೀ, ಸಿಎನ್‌ಜಿ ಮಾದರಿಗಳು 26.99 ಕಿ.ಮೀ ಮೈಲೇಜ್ ಕೊಡುತ್ತವೆ. ಈ ಟಾಟಾ ಪಂಚ್ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಬಹುದು. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 366 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಈ ಕಾರಿನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ರೇರ್-ವ್ಯೂ ಕ್ಯಾಮೆರಾವನ್ನು ಪಡೆದಿದೆ. ಟಾಟಾ ಮೋಟಾರ್ಸ್ ತನ್ಬ್ನ ನಾಲ್ಕನೇ ಎಲೆಕ್ಟ್ರಿಕ್ ಮಾದರಿಯಾಗಿ ಪಂಚ್ ಇವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಟಾಟಾ ಪಂಚ್ ಇವಿ ಟಾಟಾದ ಹೊಸ Acti.EV (ಅಡ್ವಾನ್ಸ್ಡ್ ಕನೆಕ್ಟೆಡ್ ಟೆಕ್ ಇಂಟೆಲಿಜೆಂಟ್ ಎಲೆಕ್ಟ್ರಿಕ್ ವೆಹಿಕಲ್) ಪ್ಲಾಟ್‌ಫಾರ್ಮ್‌ನ ಆಧಾರವಾಗಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಮುಂಬರುವ ಎಲೆಕ್ಟ್ರಿಕ್ ಮಾದರಿಗಳಾದ ಹ್ಯಾರಿಯರ್ ಇವಿ ಮತ್ತು ಕರ್ವ್ ಇವಿ ಆಧರಿಸಿರುತ್ತದೆ. ಈ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 25 kWh ಮತ್ತು 35 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ.
ಇದರಲ್ಲಿ 25 kWh ಬ್ಯಾಟರಿ ಪ್ಯಾಕ್ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 315 ಕಿ.ಮೀ ರೇಂಜ್ ನೀಡುತ್ತದೆ. ಇನ್ನು 35 kWh ಬ್ಯಾಟರಿ ಪ್ಯಾಕ್ 421 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಮಿಡ್ ರೇಂಜ್ ಮಾದರಿಯು 80bhp ಮತ್ತು 114Nm ಟಾರ್ಕ್ ಅನ್ನು ಉತ್ಪಾದಿಸಿದರೆ, ಲಾಂಗ್ ರೇಂಜ್ ಮಾದರಿಯು 120bhp ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications