ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಟೊಯೊಟಾ ಕರೊಲ್ಲಾ ಆಲ್ಟೀಸ್

ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಪೈಕಿ ಒಂದೆನಿಸಿಕೊಂಡಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ), ನೂತನ ಕರೊಲ್ಲಾ ಆಲ್ಟೀಸ್ ಕಾರನ್ನು ಪ್ರಸ್ತುತ ಸಾಗುತ್ತಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಮಾಡಿದೆ.

2014 ಆಟೋ ಎಕ್ಸ್ ಪೋ ಲೈವ್

ನೂತನ ಟೊಯೊಟಾ ಕಾರು ಕ್ರಾಂತಿಕಾರಿ ನೂತನ ವಿನ್ಯಾಸ ಪಡೆದಿದ್ದು, ಹೆಚ್ಚು ಐಷಾರಾಮಿ ಫೀಚರುಗಳನ್ನು ಹೊಂದಿರುತ್ತದೆ. ಇನ್ನು ಒಳಗಡೆ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಪಯಣವನ್ನು ಖಾತ್ರಿಪಡಿಸಲಿದೆ.

ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಟೊಯೊಟಾ ಕರೊಲ್ಲಾ ಆಲ್ಟೀಸ್

ಸಂಸ್ಥೆಯ ಪ್ರಕಾರ ನೂತನ ಕರೊಲ್ಲಾ ಆಲ್ಟೀಸ್, ಟೊಯೊಟಾದ ಹೊಸ ವಿನ್ಯಾಸದ ಸಂಕೇತವಾಗಿರಲಿದೆ. ಇದು ಭಾರತ ಸೇರಿದಂತೆ ಜಾಗತಿಕವಾಗಿಯೂ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ.

ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಟೊಯೊಟಾ ಕರೊಲ್ಲಾ ಆಲ್ಟೀಸ್

ಈ ಹಿಂದೆ 2003ನೇ ಇಸವಿಯಲ್ಲಿ ಲಾಂಚ್ ಕಂಡಿದ್ದ ಆಲ್ಟೀಸ್, ಸಿ ಸೆಡಾನ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ 10 ದಶಲಕ್ಷದಷ್ಟು ಸಂತುಷ್ಟ ಗ್ರಾಹಕರನ್ನು ಪಡೆದಿತ್ತು.

ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಟೊಯೊಟಾ ಕರೊಲ್ಲಾ ಆಲ್ಟೀಸ್

ಅಂದ ಹಾಗೆ ನೂತನ ಟೊಯೊಟಾ ಕರೊಲ್ಲಾ ಬೆಲೆಯು 2014 ಮೇ ತಿಂಗಳಲ್ಲಿ ಘೋಷಣೆಯಾಗಲಿದೆ. ಇದೇ ಸಂದರ್ಭದಲ್ಲೇ ವಿತರಣೆ ಕಾರ್ಯ ಕೂಡಾ ಆರಂಭವಾಗಲಿದೆ.

ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಟೊಯೊಟಾ ಕರೊಲ್ಲಾ ಆಲ್ಟೀಸ್

ನೂತನ ಟೊಯೊಟಾ ಆಲ್ಟೀಸ್ ವಿವಿಟಿಐ ಪೆಟ್ರೋಲ್ ಮತ್ತು 1.4 ಲೀಟರ್ ಡಿ-4ಡಿ ಡೀಸೆಲ್ ಎಂಜಿನ್ ಹೊಂದಿದೆ. ಇದು ಹಿಂದಿನ ಆವೃತ್ತಿಗೆ ಸಮಾನವಾಗಿರುತ್ತದೆ.

ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಟೊಯೊಟಾ ಕರೊಲ್ಲಾ ಆಲ್ಟೀಸ್

ಹಾಗೆಯೇ ಪೆಟ್ರೋಲ್ ವೆರಿಯಂಟ್ ಸಿವಿಟಿ-ಐ ಜತೆ ಏಳು ಸ್ಪೀಡ್ ಸ್ವಿಕ್ಯೂಷಲ್ ಶಿಫ್ಟ್‌ಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ಇನ್ನು ಇಂದಿನಿಂದಲೇ ಆಲ್ಟೀಸ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿರುತ್ತದೆ.

ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಟೊಯೊಟಾ ಕರೊಲ್ಲಾ ಆಲ್ಟೀಸ್

ಪ್ರಸ್ತುತ 11ನೇ ಜನಾಂಗದ ಕರೊಲ್ಲಾ ಆಲ್ಟೀಸ್, ತನ್ನ ನಿಕಟ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಎಲಾಂಟ್ರಾ, ಸ್ಕೋಡಾ ಒಕ್ಟಾವಿಯಾ ಮತ್ತು ಫೋಕ್ಸ್‌ವ್ಯಾಗನ್ ಜೆಟ್ಟಾ ಆವೃತ್ತಿಗೆ ಪೈಪೋಟಿ ಒಡ್ಡಲಿದೆ.

More from DriveSpark

Article Published On: Wednesday, February 5, 2014, 15:20 [IST]
English summary
Toyota Corolla Altis makes India debut at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+