ದೆಹಲಿಯಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ರಣಕಹಳೆ

By Nagaraja

ಭಾರತೀಯ ಮಾರುಕಟ್ಟೆಗೆ 2010ನೇ ಇಸವಿಯಲ್ಲಿ ಮೊದಲ ಎಟಿಯೋಸ್ ಆವೃತ್ತಿಯನ್ನು ಪರಿಚಯಿಸಲಾಗಿತ್ತು. ಇದೀಗ ಬೆಳೆದು ಬರುತ್ತಿರುವ ಬೇಡಿಕೆಯನ್ನು ಗಮನಿಸಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು, ನೂತನ ಎಟಿಯೋಸ್ ಕ್ರಾಸ್ ಆವೃತ್ತಿಯನ್ನು ಪರಿಚಯಿಸಿದೆ.

2014 ಆಟೋ ಎಕ್ಸ್ ಪೋ

2014 ಆಟೋ ಎಕ್ಸ್ ಪೋದಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ಭರ್ಜರಿ ಪ್ರದರ್ಶನ ಕಂಡಿದೆ. ಇದು ಫೋರ್ಡ್ ಇಕೊಸ್ಪೋರ್ಟ್ ಮತ್ತು ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ದೆಹಲಿಯಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ರಣಕಹಳೆ

ತನ್ನ ನಿಕಟ ಪ್ರತಿಸ್ಪರ್ಧಿಗಿಂತಲೂ ಭಿನ್ನವಾಗಿ ಪರಿಪೂರ್ಣ ಆಫ್ ರೋಡ್ ಎನಿಸಿಕೊಳ್ಳುವುದು ಟೊಯೊಟಾ ಗುರಿಯಾಗಿದೆ.

ದೆಹಲಿಯಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ರಣಕಹಳೆ

ಲಿವಾದಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಆಯ್ಕೆಗಳಲ್ಲೇ ನೂತನ ಎಟಿಯೋಸ್ ಕ್ರಾಸ್ ಆಗಮನವಾಗಲಿದೆ. ಅಂದರೆ ಎ 1.4 ಲೀಟರ್ ಡೀಸೆಲ್ ಎಂಜಿನ್ ಜತೆಗೆ ಎರಡು ಪೆಟ್ರೋಲ್ ಎಂಜಿನ್ (1.5 ಹಾಗೂ 1.2 ಲೀಟರ್) ಆಯ್ಕೆಗಳು ಇರಲಿದೆ.

ದೆಹಲಿಯಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ರಣಕಹಳೆ

ನೂತನ ಎಟಿಯೋಸ್ ಕ್ರಾಸ್, ಲಿವಾಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಇದು ಮುಂದುಗಡೆ ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿದೆ.

ದೆಹಲಿಯಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ರಣಕಹಳೆ

ಇದರ ದೊಡ್ಡದಾದ ಫಾಗ್ ಲ್ಯಾಂಪ್ ಹಾಗೂ ಬಂಪರ್ ಆಕರ್ಷಕವಾಗಿದೆ. ಹಾಗೆಯೇ ನಡ್ಜ್ ಗಾರ್ಡ್ ವಿಶೇಷ ರೀತಿಯಲ್ಲಿ ಸಜ್ಜೀಕರಿಸಲಾಗಿದೆ.

ದೆಹಲಿಯಲ್ಲಿ ಟೊಯೊಟಾ ಎಟಿಯೋಸ್ ಕ್ರಾಸ್ ರಣಕಹಳೆ

ಬದಿಯಿಂದ ನೋಡಿದಾಗ ಟೊಯೊಟಾ ಎಟಿಯೋಸ್ ಕ್ರಾಸ್ ಸಣ್ಣದಾಗಿರುವಂತೆಯೇ ಗೋಚರಿಸಬಹುದು. ಆದರೆ ಕಾರಿನ ಒಳಗಡೆ ಬೇಕಾದಷ್ಟು ಸ್ಥಳಾವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು ಆಫ್ ರೋಡಿಗೂ ಹೊಂದಿಯಾಗುವ ರೀತಿಯಲ್ಲಿ ವಿನ್ಯಾಸ ರಚಿಸಲಾಗಿದೆ.

More from DriveSpark

Article Published On: Monday, February 10, 2014, 15:30 [IST]
English summary
Toyota had introduced the Etios to the Indian market back in 2010. Due to raise in demand of compact SUVs and crossover, the Japanese car manufacturer has revealed their new ‘Etios Cross'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+