ಟೊಯೊಟಾ ಫಾರ್ಚ್ಯುನರ್ ಸ್ಪೋರ್ಟಿವೊ ಎಡಿಷನ್ ಲಾಂಚ್
ಹೈ ಎಂಡ್ ಕ್ರೀಡಾ ಬಳಕೆಯ ವಾಹನಗಳ (ಎಸ್‌ಯುವಿ) ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಟೊಯೊಟಾ ಫಾರ್ಚ್ಯುನರ್ ವಿಶೇಷ ಟಿಆರ್‌ಡಿ ಸ್ಪೋರ್ಟಿವೊ ಎಡಿಷನ್ ಲಾಂಚ್ ಆಗಿದೆ. ಈ ಮೂಲಕ ದೀಪಾವಳಿ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಟೊಯೊಟಾ ಇನ್ನಷ್ಟು ಮಾರಾಟ ವೃದ್ಧಿಸುವ ನಿರೀಕ್ಷೆ ಹೊಂದಿದೆ.
ನೂನತ ಟಿಆರ್‌ಡಿ ಸ್ಪೋರ್ಟಿವೊ ಸೀಮಿತ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿರಲಿದೆ. ಹಾಗೆಯೇ ಸ್ಟಾಂಡರ್ಡ್ ವೆರಿಯಂಟ್‌ಗಿಂತಲೂ 40,000 ರು.ಗಳಷ್ಟು ದುಬಾರಿಯೆನಿಸಲಿದೆ. ಟೊಯೊಟಾ ಫಾರ್ಚ್ಯುನರ್ ಸ್ಪೋರ್ಟಿವೊ ಎಡಿಷನ್ ವೈಶಿಷ್ಟ್ಯಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಟೊಯೊಟಾ ಫಾರ್ಚ್ಯುನರ್ ಟಿಆರ್‌ಡಿ ಸ್ಪೋರ್ಟಿವೊ ನಿಗದಿತ ಎಡಿಷನ್ ದರ 24.36 ಲಕ್ಷ ರು.ಗಳಾಗಿವೆ. ಇದು 4x4 ಮ್ಯಾನುವಲ್ ಟ್ರಾನ್ಸ್‌ಮಿಷನ್ ಮಾದರಿಯಲ್ಲಿ ದೊರಕಲಿದೆ.

ಅಂದ ಹಾಗೆ ಕೇವಲ 400 ಸೀಮಿತ ಮಾದರಿಗಳು ಮಾತ್ರ ಲಭ್ಯವಿರಲಿದೆ. ಹಾಗಾಗಿ ಈ ವಿಶೇಷ ಟೊಯೊಟಾ ಉಡುಗೊರೆಯಾಗಿ ತ್ವರೆ ಮಾಡಲು ವಿನಂತಿಸಲಾಗಿದೆ.

ನೂತನ ಟಿಆರ್‌ಡಿ ಸ್ಪೋರ್ಟಿವೊ ಲಿಮಿಟೆಡ್ ಎಡಿಷನ್ ಸೂಪರ್ ವೈಟ್ ಹಾಗೂ ಸಿಲ್ವರ್ ಮೆಟ್ಯಾಲಿಕ್ ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ಇತರ ವೈಶಿಷ್ಟ್ಯಗಳು
- ಡ್ಯುಯಲ್ ಟೋನ್ ಫ್ರಂಟ್ ಆಂಡ್ ರಿಯರ್ ಬಂಪರ್ ಸ್ಪಾಯ್ಲರ್,
- ರೂಫ್ ಮೌಂಟೆಡ್ ರಿಯರ್ ಸ್ಪಾಯ್ಲರ್,
- ಬದಿಗಳಲ್ಲಿ ಟಿಆರ್‌ಡಿ ಬ್ಯಾಡ್ಜ್,
- ರಿಯರ್ ಆಂಡ್ ಫ್ರಂಟ್ ಗ್ರಿಲ್

ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಟೊಯೊಟಾ ಫಾರ್ಚ್ಯುನರ್, ಇದುವರೆಗೆ 54,000 ಯುನಿಟ್‌ಗಳು ಮಾರಾಟವಾಗಿದೆ. ಇದರಲ್ಲಿ 3.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ (169 ಬಿಎಚ್‌ಪಿ, 343 ಎನ್‌ಎಂ ಟಾರ್ಕ್) ಆಳವಡಿಸಲಾಗಿದೆ.

ಏತನ್ಮಧ್ಯೆ ಟೊಯೊಟಾ ಇನ್ನೋವಾ ಲಿಮಿಟೆಡ್ ಎಡಿಷನ್ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ. ಈ ಎಲ್ಲ ಆವೃತ್ತಿಗಳು ಈ ಹಬ್ಬದ ಆವೃತ್ತಿಯಲ್ಲಿ ಟೊಯೊಟಾವನ್ನು ಇನ್ನಷ್ಟು ವಿಶೇಷವಾಗಿಸಿದೆ.


Click it and Unblock the Notifications








