ಸದ್ಯದಲ್ಲೇ ಟೊಯೊಟಾ ಮಿನಿ ಎಸ್‌ಯುವಿ ಲಾಂಚ್

By Nagaraja

ಭಾರತದ ಪ್ರಯಾಣಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ರೂಪಿಸಿರುವ ಟೊಯೊಟಾ ಮೋಟಾರ್ಸ್, ಸದ್ಯದಲ್ಲೇ ದೇಶಕ್ಕೆ ಸಣ್ಣ ಎಸ್‌ಯುವಿ ಪರಿಚಯಿಸುವ ಕುರಿತಾಗಿ ಚಿಂತನೆ ನಡೆಸುತ್ತಿದೆ.

ಅಂದರೆ ನವೆಂಬರ್ ವೇಳೆಯಾಗುವಾಗ ಟೊಯೊಟಾ ರಷ್ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ವಾಹನ ಮೂಲಗಳು ಅಭಿಪ್ರಾಯಪಟ್ಟಿವೆ.

ಕಳೆದ ಕೆಲವು ತಿಂಗಳುಗಳಲ್ಲಿ ಕಾರು ಮಾರಾಟ ಕುಸಿತದಲ್ಲಿದೆ. ಈ ನಿಟ್ಟಿನಲ್ಲಿ ಟೊಯೊಟಾದ ನೂತನ ಕಾಂಪಾಕ್ಟ್ ಎಸ್‌ಯುವಿ ಉತ್ತೇಜನ ತುಂಬುವ ನಿರೀಕ್ಷೆಯಲ್ಲಿದೆ. ಈ ಮೂಲಕ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಹಾಗೂ ಇದೀಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ನಿಸ್ಸಾನ್ ಟೆರನೊಗೆ ನಿಕಟ ಪ್ರತಿಸ್ಪರ್ಧಿ ಕಣಕ್ಕಿಳಿಸುವ ಇರಾದೆಯನ್ನು ಟೊಯೊಟಾ ಹೊಂದಿದೆ.

ಶೀಘ್ರದಲ್ಲೇ ಟೊಯೊಟಾ ಮಿನಿ ಎಸ್‌ಯುವಿ ಲಾಂಚ್

ಟೊಯೊಟಾ ಎಂದಾಕ್ಷಣ ಇನ್ನೋವಾ ಕಾರುಗಳು ನೆನಪಿಗೆ ಬರುತ್ತದೆ. ಹೌದು, ಇನ್ನೋವಾ ಮುಖಾಂತರ ದೇಶದ ಜನತೆಗೆ ಹತ್ತಿರುವಾಗಿರುವ ಟೊಯೊಟಾದ ನೂತನ ಬ್ರಾಂಡ್ ಹೇಗೆ ಜನಮನ ಗೆಲ್ಲಲಿದೆ ಎಂಬುದನ್ನು ಕೆಲವೇ ದಿನಗಳಲ್ಲಿ ಉತ್ತರ ಲಭಿಸಲಿದೆ.

ಶೀಘ್ರದಲ್ಲೇ ಟೊಯೊಟಾ ಮಿನಿ ಎಸ್‌ಯುವಿ ಲಾಂಚ್

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ನೂತನ ಸಣ್ಣ ಎಸ್‌ಯುವಿ ಲಾಂಚ್ ಮಾಡುವ ಇರಾದೆಯನ್ನು ಕಂಪನಿ ಹೊಂದಿದೆ. ಇದು 1.4 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡಿ4-ಡಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.

ಶೀಘ್ರದಲ್ಲೇ ಟೊಯೊಟಾ ಮಿನಿ ಎಸ್‌ಯುವಿ ಲಾಂಚ್

ವಿಶೇಷವಾಗಿಯೂ ಭಾರತೀಯ ಮಾರುಕಟ್ಟೆಗಾಗಿ ರಷ್ ಬಿಡುಗಡೆಯಾಗಲಿದೆ. ಇದು ಫೋರ್ ವೀಲ್ ಡ್ರೈವ್ ಆಪ್ಷನ್ ಕೂಡಾ ಹೊಂದಿರುವ ಸಾಧ್ಯತೆಗಳು ಹೆಚ್ಚಾಗಿವೆ.

ಶೀಘ್ರದಲ್ಲೇ ಟೊಯೊಟಾ ಮಿನಿ ಎಸ್‌ಯುವಿ ಲಾಂಚ್

ಇನ್ನು ಬೆಲೆ ಬಗ್ಗೆ ಮಾತನಾಡುವುದಾದರೆ 10 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗಲಿದೆ. ಇದು ಡಸ್ಟರ್, ಇಕೊಸ್ಪೋರ್ಟ್ ಆವೃತ್ತಿಗಳಿಗೆ ನೇರ ಪೈಪೋಟಿ ನೀಡಲಿದೆ.

ಶೀಘ್ರದಲ್ಲೇ ಟೊಯೊಟಾ ಮಿನಿ ಎಸ್‌ಯುವಿ ಲಾಂಚ್

ಇನ್ನು ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೆಚ್ಚಿನ ಪೈಪೋಟಿ ನಿರೀಕ್ಷೆ ಮಾಡಬಹುದಾಗಿದೆ.

More from DriveSpark

Article Published On: Thursday, October 10, 2013, 10:18 [IST]
English summary
Japanese car maker Toyota is planning to launch new mini suv in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+