ಮುಂಬರುವ ಕಾರುಗಳು; ಒಂದು ಪಕ್ಷಿನೋಟ
ಬೆಳೆಯುತ್ತಿರುವ ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ದೇಶಿಯ ಜತೆಗೆ ವಿದೇಶಿ ವಾಹನ ತಯಾರಕ ಸಂಸ್ಥೆಗಳು ತನ್ನ ಸರಣಿ ಕಾರುಗಳನ್ನು ಭಾರತ ವಾಹನ ಮಾರುಕಟ್ಟೆಯಲ್ಲಿ ನಿರಂತರ ಅಂತರಾಳದಲ್ಲಿ ಬಿಡುಗಡೆ ಮಾಡುವುದರಲ್ಲಿ ಕಾರ್ಯ ಮಗ್ನವಾಗಿದೆ.
ಇವನ್ನೂ ಓದಿ: ಟೊಯೊಟಾ ಎಟಿಯೋಸ್ ಕ್ರಾಸ್ ಭರ್ಜರಿ ಲಾಂಚ್
ವಾಹನ ಮಾರಾಟ ಕುಸಿತದಲ್ಲಿರುವ ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲೂ ನೂತನ ಮಾದರಿಗಳನ್ನು ಪ್ರದರ್ಶಿಸುವುದರಿಂದ ವಾಹನ ತಯಾರಕ ಸಂಸ್ಥೆಗಳು ಹಿಂಜರಿದಿಲ್ಲ. ಅಲ್ಲದೆ ಸಾಕಾಷ್ಟು ನೂತನ ಕಾರುಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿ ನಿಂತಿವೆ. ಈ ನಿಟ್ಟಿನಲ್ಲಿ ಪಟ್ಟಿ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ನಿಕಟ ಭವಿಷ್ಯದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲಿರುವ ಪ್ರಮುಖ ಕಾರುಗಳ ಬಗ್ಗೆ ವಿವರಣೆ ಕೊಡುವ ಪ್ರಯತ್ನ ಮಾಡಲಿದ್ದೇವೆ. ಇದಕ್ಕಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ದಟ್ಸನ್ ಗೊ ಪ್ಲಸ್
ನಿಮಗೆಲ್ಲರಿಗೂ ತಿಳಿದಂತೆಯೇ 2014 ಆಟೋ ಎಕ್ಸ್ ಪೋ ಬೆನ್ನಲ್ಲೇ ಬಿಡುಗಡೆಯಾಗಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಗೊ ಪ್ಲಸ್ ಎಂಪಿವಿ ಕಾರು ಹಿಂಬಾಲಿಸಲಿದೆ. ಇದು ಕಡಿಮೆ ದರ ಸಬ್ ಮೀಟರ್ ವಾಹನವಾಗಿರಲಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದೆ. ಇದು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಹಾಗೂ ಎಂಜಾಯ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.
ನಿರೀಕ್ಷಿತ ಬಿಡುಗಡೆ: 2014 ಮಧ್ಯಂತರ ಅವಧಿ
ನಿರೀಕ್ಷಿತ ದರ: 5.5 ಲಕ್ಷ ರು. (ಇಂಡೋನೇಷ್ಯಾ)

ಹೋಂಡಾ ಜಾಝ್
ಜಪಾನ್‌ನಲ್ಲಿ ಈಗಾಗಲೇ ಫಿಟ್ ರೂಪದಲ್ಲಿ ಮಾರಾಟದಲ್ಲಿರುವ 2014 ಹೋಂಡಾ ಜಾಝ್ ಭಾರತೀಯ ಮಾರುಕಟ್ಟೆಗೆ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.
ನಿರೀಕ್ಷಿತ ಲಾಂಚ್: 2014 ಅಥವಾ 2015
ದರ: ತಿಳಿದು ಬಂದಿಲ್ಲ.

ಹೋಂಡಾ ಮೊಬಿಲಿಯೊ
ಬ್ರಿಯೊ ತಲಹದಿಯಲ್ಲಿ ರೂಪುಗೊಳ್ಳಲಿರುವ ಹೋಂಡಾ ಮೊಬಿಲಿಯೊ, ಮಾರುತಿ ಎರ್ಟಿಗಾ ಹಾಗೂ ಟೊಯೊಟಾ ಇನ್ನೋವಾ ಎಂಪಿವಿ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಅದು ಇದು ಸ್ವಲ್ಪ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯುವ ಸಾಧ್ಯತೆಯಿದೆ.
ನಿರೀಕ್ಷಿತ ಲಾಂಚ್: 2014 ಮಧ್ಯಂತರ ಅವಧಿ
ನಿರೀಕ್ಷಿತ ದರ: 10-15 ಲಕ್ಷ ರು.

ಮಾರುತಿ ಸುಜುಕಿ ಸಿಯಾಝ್
ಎಸ್‌ಎಕ್ಸ್4 ಬದಲಿ ಕಾರಾಗಿರುವ ಮಾರುತಿ ಸುಜುಕಿ ಸಿಯಾಝ್ ಕಾಂಪಾಕ್ಟ್ ಸೆಡಾನ್ ಕಾರನ್ನು 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳಿಸಲಾಗಿತ್ತು. ಅಲ್ಲದೆ ಇತ್ತೀಚೆಗಷ್ಟೇ ಬೀಜಿಂಗ್‌ನಲ್ಲಿ ನಿರ್ಮಾಣ ಸಿದ್ಧ ವರ್ಷನ್ ಪ್ರದರ್ಶಿಸಲಾಗಿತ್ತು. ಇದರಲ್ಲಿ 1.5 ಲೀಟರ್ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ.
ನಿರೀಕ್ಷಿತ ಲಾಂಚ್: 2014 ವರ್ಷಾಂತ್ಯ ಅಥವಾ 2015ರಲ್ಲಿ
ನಿರೀಕ್ಷಿತ ದರ: 10 ಲಕ್ಷ ರು. ಅಸುಪಾಸಿನಲ್ಲಿ

ಟಾಟಾ ಬೋಲ್ಟ್
ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಸಂಪೂರ್ಣ ಹೊಸತನವನ್ನು ಗ್ರಾಹಕರಿಗೆ ನೀಡಲಿದೆ. ಇದು ವಿಸ್ಟಾದ ಅಪ್‌ಡೇಟ್ ವರ್ಷನ್ ಆಗಿದ್ದರೂ ಸಂಪೂರ್ಣ ಪರಿಷ್ಕೃತಗೊಳಿಸಲಾಗಿದೆ.
ನಿರೀಕ್ಷಿತ ಲಾಂಚ್: ಕೆಲವೇ ತಿಂಗಳೊಳಗೆ
ನಿರೀಕ್ಷಿತ ದರ: 4 ಲಕ್ಷ ರು.

ಟಾಟಾ ಜೆಸ್ಟ್
ಈ ಮೊದಲೇ ತಿಳಿಸಿರುವಂತೆಯೇ ಟಾಟಾ ಬೋಲ್ಟ್ ಜತೆಗೆ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ಟಾಟಾ ಪರಿಚಯಿಸಲಿದೆ. ಇದು ಮಾಂಝಾ ಉತ್ತರಾಧಿಕಾರಿಯಾಗಿ ಗುರುತಿಸಿಕೊಳ್ಳಲಿದೆ.
ನಿರೀಕ್ಷಿತ ಲಾಂಚ್: ಕೆಲವೇ ತಿಂಗಳೊಳಗೆ
ನಿರೀಕ್ಷಿತ ದರ: 5 ಲಕ್ಷ ರು.

ಫಿಯೆಟ್ ಅವೆಂಚ್ಯುರಾ
ಫಿಯೆಟ್ ಅವೆಂಚ್ಯುರಾದಲ್ಲಿ ಪರಿಪೂರ್ಣ ನಗರ ಪ್ರದೇಶ ಚಾಲನೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಸಮಕಾಲಿನ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ವಿಶಿಷ್ಟ ರೀತಿಯ ಆಯ್ಕೆಯನ್ನು ಅವೆಂಚ್ಯುರಾ ಪ್ರದಾನ ಮಾಡಲಿದೆ.
ನಿರೀಕ್ಷಿತ ಲಾಂಚ್: 2014ನೇ ಸಾಲಿನ ಎರಡನೇಯಾರ್ಧದಲ್ಲಿ
ನಿರೀಕ್ಷಿತ ದರ: 7 ಲಕ್ಷ ರು.ಗಳ ಅಸುಪಾಸಿನಲ್ಲಿ

ಜೀಪ್ ಗ್ರಾಂಡ್ ಚೊರೊಕ್
ಕಳೆದ ಸ್ವಲ್ಪ ಸಮಯದಿಂದಲೇ ಜೀಪ್ ಗ್ರಾಂಡ್ ಚೆರೊಕ್ ಭಾರತ ಪ್ರವೇಶ ಭಾರಿ ಚರ್ಚೆಯಾಗುತ್ತಲೇ ಇವೆ. ಈ ಹಿಂದೆ 2013ರಲ್ಲೇ ಲಾಂಚ್ ಆಗುವ ಬಗ್ಗೆ ವರದಿಯಾಗಿದ್ದರೂ ಕಾರಣಾಂತರಗಳಿಂದಾಗಿ ಮುಂದೂಡಲಾಗಿತ್ತು. ಇದು 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಪಡೆಯಲಿದೆ.
ನಿರೀಕ್ಷಿತ ಲಾಂಚ್: 2014 ಅಥವಾ 2015
ನಿರೀಕ್ಷಿತ ದರ: 30ರಿಂದ 40 ಲಕ್ಷ ರು. ಅಸುಪಾಸಿನಲ್ಲಿ

ಜೀಪ್ ವ್ರ್ಯಾಂಗ್ಲರ್
ಈ ಮೊದಲೇ ತಿಳಿಸಿರುವಂತೆಯೇ ಜೀಪ್‌ನಿಂದ ಆಗಮವಾಗಲಿರುವ ಮಗದೊಂದು ವ್ರ್ಯಾಂಗ್ಲರ್ ಆಫ್ ರೋಡ್ ಪ್ರೇಮಿಗಳ ಬೇಡಿಕೆಗಳನ್ನು ಪೂರೈಸಲಿದೆ. ಭಾರತದಲ್ಲಿ ಈ ಎಸ್‌ಯುವಿ 2.8 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಆಗಮಿಸಲಿದೆ.
ನಿರೀಕ್ಷಿತ ಲಾಂಚ್: 2014 ವರ್ಷಾಂತ್ಯ ಅಥವಾ 2015
ನಿರೀಕ್ಷಿತ ದರ: 35ರಿಂದ 50 ಲಕ್ಷ ರು. ಅಸುಪಾಸಿನಲ್ಲಿ


Click it and Unblock the Notifications








