2015 ಬಿಡುಗಡೆಯಾಗಲಿರುವ ಹೋಂಡಾ ಕಾರುಗಳು
ಎರಡು ವರ್ಷಗಳ ಹಿಂದೆ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರಿನ ಮೂಲಕ ಡೀಸೆಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಹೋಂಡಾ ದೇಶದ ವಾಹನ ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಗಳಿಸಿತ್ತು. ಅಮೇಜ್ ಹಿಂಬಾಲಿಸಿದ ಸಿಟಿ ಮಧ್ಯಮ ಗಾತ್ರದ ಸೆಡಾನ್ ಕಾರು ಅದಕ್ಕಿಂತಲೂ ಹೆಚ್ಚಿನ ಸದ್ದು ಮಾಡಿತ್ತು. ಇನ್ನು ತಾನೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಮೊಬಿಲಿಯೊ ಎಂಪಿವಿ ಕೂಡಾ ಮಾರುಕಟ್ಟೆಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು.
ಇವನ್ನೂ ಓದಿ: ಮಾರುತಿ ಕಾರೇ ಬೇಕೇ ?
ಈಗ ಮಾರುಕಟ್ಟೆಯಲ್ಲಿ ಹ್ಯಾಟ್ರಿಕ್ ವಿಜಯದ ಬಳಿಕ ಹೋಂಡಾ ಸಂಸ್ಥೆಯು 2015ನೇ ಸಾಲಿನಲ್ಲೂ ಕೆಲವು ಗಮನಾರ್ಹ ಮಾದರಿಗಳ ಬಿಡುಗಡೆಯ ತಯಾರಿಯಲ್ಲಿ ತೊಡಗಿದೆ. ಹೌದು, 2015ನೇ ಸಾಲಿನಲ್ಲಿ ಹೋಂಡಾದಿಂದ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳ ಬಗ್ಗೆ ತಿಳಿಯಲು ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

2014ನೇ ಸಾಲು ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದಿತ್ತು. 2014 ಜನವರಿಯಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿ 1,79,816 ಯುನಿಟ್‌ಗಳ ಮಾರಾಟ ಕಂಡುಕೊಂಡಿದ್ದ ಹೋಂಡಾ ಶೇಕಡಾ 67ರಷ್ಟು ಭರ್ಜರಿ ಮಾರಾಟ ಏರಿಕೆ ದಾಖಲಿಸಿತ್ತು. ಮುಂದಿನ ಸ್ಲೈಡರ್ ಮೂಲಕ ಹೋಂಡಾ ಮುಂಬರುವ ಆವೃತ್ತಿಗಳ ಬಗ್ಗೆ ತಿಳಿಯಿರಿ...
ವಿ.ಸೂ: ಹೋಂಡಾ ಮುಂಬರುವ ಕಾರುಗಳಿಗಾಗಿ ಸಾಂದರ್ಭಿಕ ಚಿತ್ರಗಳ ಬಳಕೆ

ನ್ಯೂ ಜನರೇಷನ್ ಜಾಝ್
ದೇಶದ ವಾಹನ ತಯಾರಕರು ಬಹಳ ಕಾತರದಿಂದ ಕಾದು ಕುಳಿತಿರುವ ಹೋಂಡಾ ಜಾಝ್ ಮಾರುಕಟ್ಟೆಗೆ ಅಪ್ಪಳಿಸಲು ಕ್ಷಣಗಣನೆ ಆರಂಭವಾಗಿದೆ. ಜಪಾನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಹೋಂಡಾ ಜಾಝ್, ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ 2015 ಭಾರತದ ವರ್ಷದ ಕಾರು ಹ್ಯುಂಡೈ ಎಲೈಟ್ ಐ20, ಮಾರುತಿ ಸ್ವಿಫ್ಟ್ ಹಾಗೂ ಫೋಕ್ಸ್‌ವ್ಯಾಗನ್ ಪೊಲೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಹೆಚ್ಚಿನ ಆಕ್ರಮಣಕಾರಿ ವಿನ್ಯಾಸ ಹಾಗೂ ಡೀಸೆಲ್ ಮಾದರಿಯಲ್ಲಿ ಲಭ್ಯವಾಗಲಿರುವುದು ಜಾಝ್ ಯಶಸ್ಸಿಗೆ ಕಾರಣವಾಗಲಿದೆ.

ಹೋಂಡಾ ಜಾಝ್
ಹೋಂಡಾ ಜಾಝ್ ಮಾದರಿಯು 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಂತೆಯೇ ಭವಿಷ್ಯದಲ್ಲಿ ಶಕ್ತಿಶಾಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ.
ನಿರೀಕ್ಷಿತ ಬೆಲೆ - 4.5ರಿಂದ 8 ಲಕ್ಷ ರು.
ನಿರೀಕ್ಷಿತ ಬಿಡುಗಡೆ - 2015 ಮಧ್ಯಂತರ ಅವಧಿ

ಹೋಂಡಾ ಕಾಂಪಾಕ್ಟ್ ಎಸ್‌ಯುವಿ
ಜನಪ್ರಿಯ ಇಕೊಸ್ಪೋರ್ಟ್ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸಲು ಹೋಂಡಾ ಸಿದ್ಧತೆಯಲ್ಲಿ ತೊಡಗಿದೆ. ಹೋಂಡಾ ಸಿಆರ್-ವಿ ಮತ್ತು ಬ್ರಿಯೊ ಹ್ಯಾಚ್‌ಬ್ಯಾಕ್ ವಿನ್ಯಾಸ ತಳಹದಿಯಲ್ಲಿ ಹೋಂಡಾ ಎಚ್‌ಆರ್-ವಿ ತಯಾರಿಸಲಾಗಿದೆ. ಇದು ಈಗಾಗಲೇ ಥಾಯ್ಲೆಂಡ್ ಮಾರುಕಟ್ಟೆ ಪ್ರವೇಶಿಸಿದ್ದು ಭಾರತಕ್ಕೂ ಆಗಮನವಾಗುವ ನಿರೀಕ್ಷೆಯಿದೆ.

ಹೋಂಡಾ ಕಾಂಪಾಕ್ಟ್ ಎಸ್‌ಯುವಿ
ಹೋಂಡಾ ಕಾಂಪಾಕ್ಟ್ ಎಸ್‌ಯುವಿ ಬಗ್ಗೆ ಹೆಚ್ಚೇನು ಮಾಹಿತಿಗಳು ಇಲ್ಲದಿದ್ದರೂ 1.2 ಲೀಟರ್ ಐ-ವಿಟೆಕ್ ಹಾಗೂ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಬಳಕೆಯಾಗುವ ನಿರೀಕ್ಷೆಯಿದೆ.
ನಿರೀಕ್ಷಿತ ಬೆಲೆ - 6.5ರಿಂದ 10 ಲಕ್ಷ ರು.
ನಿರೀಕ್ಷಿತ ಬಿಡುಗಡೆ - 2015 ವರ್ಷಾಂತ್ಯದಲ್ಲಿ

ನ್ಯೂ ಜನರೇಷನ್ ಹೋಂಡಾ ಸಿವಿಕ್
ಹೋಂಡಾದ ಜನಪ್ರಿಯ ಪ್ರೀಮಿಯಂ ಸೆಡಾನ್ ಕಾರುಗಳಲ್ಲಿ ಒಂದಾಗಿರುವ ಸಿವಿಕ್, ಹೊಸ ರೂಪ ಪಡೆದುಕೊಳ್ಳಲಿದೆ. ಭಾರತದಲ್ಲಿ ಸಿವಿಕ್ ಡೀಸೆಲ್ ಎಂಜಿನ್ ಹಾಗೂ ಪರಿಣಾಮಕಾರಿ ವಿನ್ಯಾಸ ಪಡೆದುಕೊಳ್ಳಲಿರುವುದು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ನ್ಯೂ ಜನರೇಷನ್ ಹೋಂಡಾ ಸಿವಿಕ್
ಹೊಸ ಪೀಳಿಗೆಯ ಹೋಂಡಾ ಸಿವಿಕ್ 1.6 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು ಯುರೋಪ್ ಸಿಆರ್-ವಿ ಮಾದರಿಗೆ ಸಮಾನವಾಗಿರಲಿದೆ.
ನಿರೀಕ್ಷಿತ ಬೆಲೆ - 15ರಿಂದ 23 ಲಕ್ಷ ರು.
ನಿರೀಕ್ಷಿತ ಬಿಡುಗಡೆ - 2015 ಮಧ್ಯಂತರ ಅವಧಿಯಲ್ಲಿ

ಹೋಂಡಾ ಅಮೇಜ್ ಫೇಸ್‌ಲಿಫ್ಟ್
ಹೋಂಡಾದಿಂದ ಭಾರತದಲ್ಲಿ ಬಿಡುಗಡೆಯಾಗಿರುವ ಪ್ರಪ್ರಥಮ ಡೀಸೆಲ್ ಕಾರಾಗಿರುವ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಈಗಾಗಲೇ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ. ಈಗ 2015 ಎಪ್ರಿಲ್ ತಿಂಗಳಲ್ಲಿ ಎರಡು ವಸಂತಗಳನ್ನು ಪೂರ್ಣಗೊಳಿಸರುವ ಅಮೇಜ್ ಕೆಲವೊಂದು ಮಾರ್ಪಾಡುಗಳನ್ನು ಪಡೆದುಕೊಳ್ಳಲಿದೆ.

ಹೋಂಡಾ ಅಮೇಜ್ ಫೇಸ್‌ಲಿಫ್ಟ್
ಹ್ಯುಂಡೈ ಎಕ್ಸ್‌ಸೆಂಟ್, ಮಾರುತಿ ಸ್ವಿಫ್ಟ್ ಡಿಜೈರ್ ಹಾಗೂ ಟಾಟಾ ಜೆಸ್ಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಹೋಂಡಾ ಅಮೇಜ್ ಎವಿಎನ್ ಪ್ಯಾಕೇಜ್‌ನೊಂದಿಗೆ ಬಿಡುಗಡೆಯಾಗಲಿದೆ.ಅಂತೆಯೇ 1.2 ಲೀಟರ್ ಐ-ವಿಟೆಕ್ ಹಾಗೂ 1.5 ಲೀಟರ್ ಐ-ಡಿಟೆಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.
ನಿರೀಕ್ಷಿತ ಬೆಲೆ - 5.20ರಿಂದ 8.50 ಲಕ್ಷ ರು.
ನಿರೀಕ್ಷಿತ ಬಿಡುಗಡೆ - 2015 ಮಧ್ಯಂತರ ಅವಧಿಯಲ್ಲಿ

2015 ಹೋಂಡಾ ಸಿಆರ್-ವಿ
ಟೊಯೊಟಾ ಫಾರ್ಚುನ್ಯರ್ ಪ್ರತಿಸ್ಪರ್ಧಿ ಹೋಂಡಾ ಸಿಆರ್-ವಿ ದುಬಾರಿ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿದೆ. ನಿಸ್ಸಂಶಯವಾಗಿಯೂ ಇದು ಭಾರತ ಪ್ರವೇಶಿಸಲಿದ್ದಲ್ಲಿ ಸಿರಿವಂತರ ಕುಟುಂಬವನ್ನು ಆಕರ್ಷಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

2015 ಹೋಂಡಾ ಸಿಆರ್-ವಿ
2013 ಜಿನೆವಾ ಮೋಟಾರು ಶೋದಲ್ಲಿ ಹೋಂಡಾ ಸಂಸ್ಥೆಯು ಸಿಆರ್-ವಿ 1.5 ಲೀಟರ್ ಅರ್ಥ್ ಡ್ರೀಮ್ಸ್ ಡೀಸೆಲ್ ಎಂಜಿನ್ ಪರಿಚಯಿಸಿತ್ತು. ಇದೇ ಎಂಜಿನ್ ಭಾರತಕ್ಕೆ ಆಗಮನವಾಗಲಿರುವ ಸಿಆರ್-ವಿ ಮಾದರಿಯಲ್ಲೂ ಪರಿಚಯಿಸುವ ಸಾಧ್ಯತೆಯಿದೆ. ಇದು 118 ಅಶ್ವಶಕ್ತಿ (200 ತಿರುಗುಬಲ) ಉತ್ಪಾದಿಸಲಿದೆ. ಅಂತೆಯೇ 2.0 ಲೀಟರ್ (154ಅಶ್ವಶಕ್ತಿ, 189 ತಿರುಗುಬಲ) ಅಥವಾ 2.4 ಲೀಟರ್ (187ಅಶ್ವಶಕ್ತಿ, 225 ತಿರುಗುಬಲ) ಪೆಟ್ರೋಲ್ ಎಂಜಿನ್ ಕೂಡಾ ಇರಲಿದೆ.
ನಿರೀಕ್ಷಿತ ಬೆಲೆ - 20ರಿಂದ 25 ಲಕ್ಷ ರು.
ನಿರೀಕ್ಷಿತ ಬಿಡುಗಡೆ - 2015


Click it and Unblock the Notifications








