ಫೋಕ್ಸ್‌ವ್ಯಾಗನ್ ಸಬ್ ಬ್ರಾಂಡ್ ಆಗಲಿರುವ ಐಕಾನಿಕ್ 'ಬೀಟ್ಲ್'

By Nagaraja

ನೀವು ವಾಹನ ಪ್ರೇಮಿಯಾಗಿದ್ದಲ್ಲಿ ಖಂಡಿತ ಈ ಸುದ್ದಿಯನ್ನು ಇಷ್ಟಪಡಲಿದ್ದೀರಿ. ಜಗತ್ತಿನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಅನೇಕ ಉಪ-ಬ್ರಾಂಡ್‌ಗಳನ್ನು ಹೊಂದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಇದೀಗ ಬಂದಿರುವ ಸುದ್ದಿ ಏನೆಂದರೆ, ಫೋಕ್ಸ್‌ವ್ಯಾಗನ್ ಐಕಾನಿಕ್ ಮಾದರಿಯಾಗಿರುವ ಬೀಟ್ಲ್, ನಿಕಟ ಭವಿಷ್ಯದಲ್ಲೇ ಸಬ್-ಬ್ರಾಂಡ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ. ಅಂದರೆ ಇನ್ನು ಮುಂದೆ ಫೋಕ್ಸ್‌ವ್ಯಾಗನ್ ಕೈಗನ್ನಡಿಯಾಗಿದ್ದ ಬೀಟ್ಲ್ ಬ್ರಾಂಡ್ ಹೆಸರಲ್ಲಿ ಹೊಸ ಕಾರುಗಳು ಎಂಟ್ರಿ ಪಡೆಯಲಿದೆ. ಎಲ್ಲರಿಗೂ ಚಿರಪರಿಚಿತವಾಗಿರುವ ಸಾಂಪದ್ರಾಯಿಕ ಬೀಟ್ಲ್ ಮಾದರಿಯು, ಎರಡು ಹಾಗೂ ನಾಲ್ಕು ಬಾಗಿಲುಗಳಲ್ಲಿ ಲಭ್ಯವಿದೆ. ಇದೀಗ ಈ ಮಾದರಿಗಿರುವ ಜನಪ್ರಿಯಂತೆಯಿಂದಾಗಿಯೇ ಹೊಸ ಬ್ರಾಂಡ್ ಆಗಿ ರೂಪಿಸಲು ಫೋಕ್ಸ್‌ವ್ಯಾಗನ್ ನಿರ್ಧರಿಸಿದೆ.

ಫೋಕ್ಸ್‌ವ್ಯಾಗನ್ ಸಬ್ ಬ್ರಾಂಡ್ ಆಗಲಿರುವ ಐಕಾನಿಕ್ 'ಬೀಟ್ಲ್'

ಇವೆಲ್ಲದರ ಪರಿಣಾಮವೆಂಬಂತೆ ಬೀಟ್ಲ್ ಸಬ್ ಬ್ರಾಂಡ್ ಅಡಿಯಲ್ಲಿ ಅನೇಕ ನೂತನ ಮಾದರಿಗಳು ಬಿಡುಗಡೆಯಾಗಲಿದೆ. ಇದರಲ್ಲಿ ಸ್ಪೋರ್ಟಿ ಕೂಪೆ, ಸಾಫ್ಟ್ ಆಫ್ ರೋಡರ್ ಹಾಗೂ ಮಿನಿವ್ಯಾನ್/ಕ್ರಾಸೋವರ್ ಸೇರಿಕೊಳ್ಳಲಿದೆ. ವಿಶೇಷವೆಂದರೆ ಈ ಎಲ್ಲ ಮಾದರಿಗಳು ಈಗಾಗಲೇ ಕಾನ್ಸೆಪ್ಟ್ ಹಂತದಲ್ಲಿದೆ.

ಫೋಕ್ಸ್‌ವ್ಯಾಗನ್ ಸಬ್ ಬ್ರಾಂಡ್ ಆಗಲಿರುವ ಐಕಾನಿಕ್ 'ಬೀಟ್ಲ್'

ಅಂದ ಹಾಗೆ ಫೋಕ್ಸ್‌ವ್ಯಾಗನ್ ಬೀಟ್ಲ್ ಸಬ್ ಬ್ರಾಂಡ್ ರೆಟ್ರೊ ಶೈಲಿ (ಸಾಂಪ್ರದಾಯಿಕ) ಉತ್ಪನ್ನಗಳನ್ನು ಒಳಗೊಂಡಿರಲಿದೆ. ನಿಸ್ಸಂಶಯವಾಗಿಯೂ ಇದು ಸಂಸ್ಥೆಯ ಎಂಕ್ಯೂಬಿ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿಲಿದೆ. ಹಾಗಿದ್ದರೂ ಈ ಎಲ್ಲ ವಿಚಾರಗಳ ಬಗೆಗಿನ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಾಗಿದೆ. ಸದ್ಯ ಬೀಟ್ಲ್ ಸಬ್ ಬ್ರಾಂಡ್‌ನಲ್ಲಿ ಬಿಡುಗಡೆಯಾಗಲು ಸಾಧ್ಯತೆಯಿರುವ ಮಾದರಿಗಳ ಬಗ್ಗೆ ತಿಳಿದುಕೊಳ್ಳಲು ಮುಂದಿನ ಸ್ಲೈಡರ್‌ನತ್ತ ಭೇಟಿ ಕೊಡಿರಿ..

ಫೋಕ್ಸ್‌ವ್ಯಾಗನ್ ಬುಲ್ಲಿ ಕಾನ್ಸೆಪ್ಟ್ (Bulli)

ಫೋಕ್ಸ್‌ವ್ಯಾಗನ್ ಬುಲ್ಲಿ ಕಾನ್ಸೆಪ್ಟ್ (Bulli)

ಫೋಕ್ಸ್‌ವ್ಯಾಗನ್ ಮೈಕ್ರೋಬಸ್ ತಲಹದಿಯಲ್ಲಿ ಈ ಕಾನ್ಸೆಪ್ಟ್ ನಿರ್ಮಾಣವಾಗಿತ್ತು. ಆದರೆ ಈ ಸಣ್ಣ ವ್ಯಾನ್ ಆರು ಮಂದಿಗೆ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಹೊಂದಿದೆ. ಇದು ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲೆಕ್ಟ್ರಿಕ್ ಮೋಟಾರಿನಿಂದ ನಿಯಂತ್ರಿಸಲ್ಪಡುತ್ತಿದೆ.

ಫೋಕ್ಸ್‌ವ್ಯಾಗನ್ ಬುಲ್ಲಿ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಬುಲ್ಲಿ ಕಾನ್ಸೆಪ್ಟ್

ಹಾಗೊಂದು ವೇಳೆ ಬೀಟ್ಲ್ ಸಬ್ ಬ್ರಾಂಡ್‌ನಲ್ಲಿ ಬುಲ್ಲಿ ಮಾದರಿಯನ್ನು ಲಾಂಚ್ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದ್ದಲ್ಲಿ, ಇದು 2018-19ರ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸುವ ಸಂಭವವಿದೆ.

 ಫೋಕ್ಸ್‌ವ್ಯಾಗನ್ ಬೀಟ್ಲ್ ಡ್ಯೂನ್ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಬೀಟ್ಲ್ ಡ್ಯೂನ್ ಕಾನ್ಸೆಪ್ಟ್

ಫೋಕ್ಸ್‌ವ್ಯಾಗನ್ ಬೀಟ್ಲ್ ಡ್ಯೂನ್ ಕಾನ್ಸೆಪ್ಟ್ ಮೃದುವಾದ ಆಫ್ ರೋಡ್ ಆಗಿರಲಿದೆ. ಇದು 207 ಅಶ್ವಶಕ್ತಿ ಉತ್ಪಾದಿಸುವ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಹಾಗೆಯೇ ಮೇಲ್ಮುಖವಾಗಿರುವ ವೀಲ್ ಆರ್ಚ್, ಸ್ಕಿಡ್ ಪ್ಲೇಟ್, ಬಂಪರ್ ಕವಚಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಫೋಕ್ಸ್‌ವ್ಯಾಗನ್ ಇ-ಬಗ್‌ಸ್ಟರ್ ಕಾನ್ಸೆಪ್ಟ್ (E-Bugster)

ಫೋಕ್ಸ್‌ವ್ಯಾಗನ್ ಇ-ಬಗ್‌ಸ್ಟರ್ ಕಾನ್ಸೆಪ್ಟ್ (E-Bugster)

ಕ್ರೀಡಾತ್ಮಕ ಕೂಪೆ ಕಾನ್ಸೆಪ್ಟ್ ಕಾರಾಗಿರುವ ಇ-ಬಗ್‌ಸ್ಟರ್, ಇಳಿಜಾರಿನಂತಹ ರೂಫ್ ಲೈನ್ (ಮೇಲ್ಛಾವಣಿ) ಹಾಗೂ ಕಿರಿದಾದ ವಿಂಡೋಗಳನ್ನು ಪಡೆದಿವೆ. ಇದು ಸಹ ಬೀಟ್ಲ್‌ ಬ್ರಾಂಡ್‌ನ ಬಿಡುಗಡೆ ಸಾಧ್ಯತಾ ಪಟ್ಟಿಯಲ್ಲಿ ಸೇರಿಕೊಂಡಿದೆ.

More from DriveSpark

Article Published On: Wednesday, April 30, 2014, 16:37 [IST]
English summary
New rumours coming from Germany say that Volkswagen is looking to turn the Beetle into a separate sub-brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+