ಬೀಟ್ಲ್ ಕನ್ಯೆಗೆ ಫತ್ವಾ ಹೊರಡಿಸಿದ ಫೋಕ್ಸ್‌ವ್ಯಾಗನ್
ಹೌದು, ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿರುವ ವಿಶ್ವದ ಅತಿ ಜನಪ್ರಿಯ ಕಾರು ಬೀಟ್ಲ್‌ಗೆ ಫೋಕ್ಸ್‌ವ್ಯಾಗನ್ ಕತ್ತರಿ ಪ್ರಯೋಗ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಬೀಟ್ಲ್ ಉತ್ಪಾದನೆ ನಿಲುಗಡೆಯಾಗಲಿದೆ.
ತನ್ನ ಸೆಕ್ಸಿ ಲುಕ್‌ನೊಂದಿಗೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿದ್ದ ಬೀಟ್ಲ್, ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಹಾಗಿದ್ದರಿಂದ ಬೀಟ್ಲ್ ಕಳಪೆ ಮಾರಾಟದ ಹಿನ್ನಲೆಯಲ್ಲಿ ಕೊನೆಗೂ ಭಾರತದಿಂದ ಬೀಟ್ಲ್ ಕಾರುಗಳನ್ನು ಹಿಂಪಡೆಯಲು ಫೋಕ್ಸ್‌ವ್ಯಾಗನ್ ನಿರ್ಧರಿಸಿದೆ.
ಅತಿ ಜನಪ್ರಿಯ ಹಾಗೂ ಐಕಾನಿಕ್ ಕಾರು ಎನಿಸಿಕೊಂಡಿರುವ ಬೀಟ್ಲ್ 2009ನೇ ಇಸವಿಯಲ್ಲಿ ಮೊದಲ ಬಾರಿಗೆ ದೇಶದಲ್ಲಿ ಲಾಂಚ್ ಆಗಿತ್ತು. ಇದು ಕಂಪ್ಲೀಟ್ ಬಿಲ್ಟ್ ಯುನಿಟ್ ಸಿದ್ಧಾಂತ ಮುಖಾಂತರ ಭಾರತ ಮಾರುಕಟ್ಟೆ ಪ್ರವೇಶಿಸಿತ್ತು. ಆದರೆ ದೇಶದಲ್ಲಿ ಇದುವರೆಗೆ 500 ಯುನಿಟ್‌ಗಳಷ್ಟು ಮಾತ್ರ ಮಾರಾಟಗೊಂಡಿದ್ದವು.
ಸ್ಲೈಡರ್‌ನಲ್ಲಿ ಬೀಟ್ಲ್ ಸುಂದರಿ ಬಗ್ಗೆ ಒಂದಿಷ್ಟು...

ದುಬಾರಿ ಕಾರು...
ಫೋಕ್ಸ್‌ವ್ಯಾಗನ್ ಬೀಟ್ಲ್ ದೆಹಲಿ ಎಕ್ಸ್ ಶೋ ರೂಂ ದರ 20.45 ಲಕ್ಷ ರು.ಗಳಾಗಿವೆ. ಇದು ಪ್ರಮುಖವಾಗಿಯೂ ಲಗ್ಷುರಿ ಲೈಫ್ ಸ್ಟೈಲ್ ಬಯಸುವುವರನ್ನು ಗುರಿಯಾಗಿರಿಸಿತ್ತು. ಇದೇ ಕಾರಣದಿಂದಾಗಿ ದೇಶದಲ್ಲೇ ಯಶ ಸಾಧಿಸುವಲ್ಲಿ ವಿಫಲವಾಗಿತ್ತು.

ಸೂತ್ರಧಾರಿ ಹಿಟ್ಲರ್
20ನೇ ಶತಮಾನದಲ್ಲಿ ನಾಜಿ ಸಾಮ್ರಾಜ್ಯಶಾಹಿ ಸಿದ್ಧಾಂತ ಮೂಲಕ ಇಡೀ ಜಗತ್ತನ್ನೇ ನಡುಗಿಸಿದ್ದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, 1938ರಲ್ಲಿ ರೂಪುಗೊಂಡಿರುವ ಫೋಕ್ಸ್‌ವ್ಯಾಗನ್ ಬೀಟ್ಲ್ ಕಾರಿನ ಪ್ರಮುಖ ಸೂತ್ರಧಾರಿಯೆನಿಸಿದ್ದಾರೆ.

ಪ್ರಮುಖವಾಗಿಯೂ ಜರ್ಮನಿಯ ಸಂಚಾರ ವ್ಯವಸ್ಥೆಗಾಗಿ ಅತಿ ಅಗ್ಗದ ಹಾಗೂ ಸಿಂಪಲ್ ಕಾರಾಗಿ ಬೀಟ್ಲ್ ಕಾರನ್ನು ನಿರ್ಮಿಸಲಾಗಿತ್ತು. ಇದು ಅಂದಿನ ಕಾಲದಲ್ಲಿ ರಿಯರ್ ಎಂಜಿನ್ ಪಡೆದುಕೊಂಡ ಕೆಲವೇ ಕೆಲವು ಕಾರುಗಳ ಪೈಕಿ ಒಂದಾಗಿತ್ತು.

ಫೋಕ್ಸ್‌ವ್ಯಾಗನ್ ಬೀಟ್ಲ್, ವಿಶ್ವಾದ್ಯಂತ ಒಂದೇ ವಿನ್ಯಾಸದ ವೇದಿಕೆ ಪಡೆದುಕೊಂಡ, ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಹಾಗೂ ಹೆಚ್ಚು ಉತ್ಪಾದಿತ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಕಾರುಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಬೀಟ್ಲ್ ಅಧಿಕೃತ ನಾಮ ಫೋಕ್ಸ್‌ವ್ಯಾಗನ್ ಟೈಪ್ 1 ಎಂದಾಗಿದೆ.

ಪ್ರಸ್ತುತ ಶ್ರೀಮಂತರ ಹೈ ಫೈ ಜೀವನಶೈಲಿಯ ಪ್ರತೀಕವಾಗಿರುವ ಫೋಕ್ಸ್‌ವ್ಯಾಗನ್ ಬೀಟ್ಲ್ ಹ್ಯಾಚ್‌ಬ್ಯಾಕ್ ಕಾರು, ಜತಿನೆಲ್ಲೆಡೆ ಉತ್ತಮ ಹೆಸರನ್ನು ಕಾಯ್ದುಕೊಂಡಿದೆ. ಇದು ಫೋಕ್ಸ್‌ವ್ಯಾಗನ್ ಪ್ರತಿಷ್ಠೆ ವೃದ್ಧಿಯಲ್ಲೂ ಬಹುದೊಡ್ಡ ಪಾತ್ರ ವಹಿಸುತ್ತಿದೆ.


Click it and Unblock the Notifications








