ಫೋಕ್ಸ್‌ವ್ಯಾಗನ್ ವೆಂಟೊ ಕನೆಕ್ಟ್ ಸೀಮಿತ ಆವೃತ್ತಿ ಬಿಡುಗಡೆ
ಜರ್ಮನಿಯ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ತನ್ನ ಜನಪ್ರಿಯ ವೆಂಟೊ ಆವೃತ್ತಿಯ ಸೀಮತ ಕನೆಕ್ಟ್ ಮಾದರಿಯನ್ನು ಪರಿಚಯಿಸಿದೆ. ಇದು ತಾಜಾ ಡಿಜಿಟಲ್ ಮನರಂಜನೆ ಹಾಗೂ ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿರಲಿದೆ.
ಮುಖ್ಯಾಂಶಗಳು:
ಫೋಕ್ಸ್‌ವ್ಯಾಗನ್ ವೆಂಟೊ ಕನೆಕ್ಟ್ ಸೀಮಿತ ಆವೃತ್ತಿ ಲಾಂಚ್,
ಕನೆಕ್ಟ್ ಪ್ಯಾಕೇಜ್ ಲಭ್ಯ
ಹೈ ಎಂಡ್ ಬ್ಲಾಪಂಕನ್ಟ್ ಮಾಹಿತಿ ಮನರಂಜನಾ ಸಿಸ್ಟಂ,
ಜಿಪಿಎಸ್ ನೇವಿಗೇಷನ್, ಬ್ಲೂಟೂತ್ ಟೆಲಿಫೋನಿ,
3ಜಿ ಇಂಟರ್‌ನೆಟ್ ಕನೆಕ್ಟಿವಿಟಿ

ಅಂದ ಫೋಕ್ಸ್‌ವ್ಯಾಗನ್ ವೆಂಟೊ ಕೆನಕ್ಟ್ ಸೀಮಿತ ಆವೃತ್ತಿಯು, ಕಂಫರ್ಟ್‌ಲೈನ್ ಮತ್ತು ಹೈಲೈನ್ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಾಗಲಿದೆ. ಅಲ್ಲದೆ ಹೈ ರೆಸೊಲ್ಯೂಷನ್ 7 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಕಲರ್ ಡಿಸ್‌ಪ್ಲೇ ಸಹ ಇರಲಿದೆ.

ಇನ್ನುಳಿದಂತೆ ನೇವಿಗೇಷನ್‌ಗಾಗಿ ತಾಜಾ ಐಗೊನೇವ್‌ಟೆಕ್ ಮ್ಯಾಪ್, ಯುಎಸ್‌ಬಿ ಕನೆಕ್ಟಿವಿಟಿ ಮತ್ತು ಐಫೋನ್/ಐಪೊಡ್ ಸಂಪರ್ಕ ಕೂಡಾ ಇರಲಿದೆ. ಇವೆಲ್ಲದರ ಜೊತೆಗೆ ಹಿಂದುಗಡೆ ಸೀಟಿನಲ್ಲಿ ಮಾತಿತಿ ಮನರಂಜನಾ ವ್ಯವಸ್ಥೆಯು ಇರಲಿದೆ.

ಇದರ ಎಚ್‌ಡಿ ಕಲರ್ ಡಿಸ್‌ಪ್ಲೇಯೊಂದಿಗೆ ಹಿಂದುಗಡೆ ಪ್ರಯಾಣಿಕರು 16 ಚಾನೆಲ್‌ಗಳ ಲೈವ್ ಟೆಲಿವಿಷನ್, ಇಂಟರ್‌ನೆಟ್ ರೆಡಿಯೋ, ಹವಾಮಾನ ಮಾಹಿತಿ, ಲೈವ್ ಶೇರು ಮಾರುಕಟ್ಟೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಹೈ ಎಂಡ್ ಟ್ಯಾಬ್ಲೆಟ್‌ಗಳಿಂದ ಫೇಸ್‌ಬುಕ್, ಟ್ವಿಟರ್‌ಗಳಂತಹ ಸಾಮಾಜಿಕ ಜಾಲತಾಣಗಳ ಬಳಕೆಯು ಸುಲಭವಾಗಲಿದೆ.

ಒಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ಹೊಸ ಆವೃತ್ತಿಯು ಹೆಸರಿಗೆ ತಕ್ಕಂತೆ ಅತ್ಯಂತ ಹೆಚ್ಚು ತಂತ್ರಗಾರಿಕೆಯನ್ನು ಒಳಗೊಂಡಿರಲಿದೆ. ವಾಹನ ಜಗತ್ತಿನ ತಾಜಾ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.


Click it and Unblock the Notifications








