ದೇಶದ ಅತ್ಯಂತ ಶಕ್ತಿಶಾಲಿ ಡೀಸೆಲ್ ಹ್ಯಾಚ್‌ಬ್ಯಾಕ್ ಲಾಂಚ್
ಫೋಕ್ಸ್‌ವ್ಯಾಗನ್ ಪೊಲೊದ ಅತ್ಯಂತ ಶಕ್ತಿಶಾಲಿ ಕಾರು ಭಾರತಕ್ಕೆ ಲಗ್ಗೆಯಿಡಲಿದೆ ಎಂಬುದು ಕೇವಲ ದಿನಗಳ ಹಿಂದಿನ ವಾರ್ತೆಯಾಗಿತ್ತು. ಇದನ್ನು ನಿಜವೆಂದು ಸಾಬೀತುಪಡಿಸಿರುವ ಜರ್ಮನಿ ಮೂಲದ ಈ ಕಾರು ತಯಾರಕ ಕಂಪನಿಯು, 1.6 ಜಿಟಿ ಟಿಡಿಐ ಡೀಸೆಲ್ ಎಂಜಿನ್ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.
ಅಷ್ಟೇ ಯಾಕೆ ಇದೀಗ ಫೋಕ್ಸ್‌ವ್ಯಾಗನ್ ಪೊಲೊ ದೇಶದ ಅತ್ಯಂತ ಶಕ್ತಿಶಾಲಿ ಡೀಸೆಲ್ ಹ್ಯಾಚ್‌ಬ್ಯಾಕ್ ಕಾರೆಂಬ ಮನ್ನಣೆಗೆ ಪಾತ್ರವಾಗಿದೆ.
ದರ ಮಾಹಿತಿ: 8.08 ಲಕ್ಷ ರು.
ಇದರಲ್ಲಿ ಪವರ್‌ಫುಲ್ 1.6 ಜಿಟಿ ಟಿಡಿಐ ಡೀಸೆಲ್ ಎಂಜಿನ್ ಆಳವಡಿಸಲಾಗಿರುವುದು ಅತ್ಯಂತ ವಿಶೇಷವೆನಿಸಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಫೋಕ್ಸ್‌ವ್ಯಾಗನ್ ಗ್ರೂಪ್ ಸೇಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಹಾನಿರ್ದೇಶಕ ಅರವಿಂದ ಸಕ್ಸೆನಾ, ಭಾರತಕ್ಕೆ ಆಧುನಿಕ ಹಾಗೂ ಅತ್ಯಂತ ನೂತನ ತಂತ್ರಜ್ಞಾನವನ್ನು ಪರಿಚಯಿಸಲು ನಾವು ಸದಾ ಬದ್ಧರಾಗಿರುತ್ತೇವೆ. ಈ ನಿಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ದೇಶದ ಕಾರು ಗ್ರಾಹಕರ ನಿರೀಕ್ಷೆಯನ್ನು ಮುಟ್ಟುವ ನಂಬಿಕೆಯಿದೆ ಎಂದಿದ್ದಾರೆ.

ಎಂಜಿನ್
ನೂತನ ಫೋಕ್ಸ್‌ವ್ಯಾಗನ್ ಪೊಲೊ 1.6 ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಯುನಿಟ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 105 ಪಿಎಸ್ ಪವರ್ (250 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಟ್ರಾನ್ಸ್‌ಮಿಷನ್ ಪಡೆದಿದೆ.

ಮೈಲೇಜ್
ಭಾರತ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆಯ ಪ್ರಕಾರ ಪ್ರಸ್ತುತ ಕಾರು ಪ್ರತಿ ಲೀಟರ್‌ಗೆ 19.7 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಎಕ್ಸ್‌ಟೀರಿಯರ್
ಮೊದಲ ನೋಟಕ್ಕೆ ಹಿಂದಿನ ಆವೃತ್ತಿಗಿಂತ ನೂತನ ಪೊಲೊದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ಹಾಗಿದ್ದರೂ ಫ್ರಂಟ್ ಗ್ರಿಲ್‌ನಲ್ಲಿರುವ ಜಿಟಿ ಬ್ಯಾಡ್ಜ್ ಮತ್ತು ಟಿಡಿಐ ಬ್ಯಾಡ್ಜ್ ಇದನ್ನು ವಿಶಿಷ್ಟವಾಗಿಸುತ್ತಿದೆ.

ಇಂಟಿರಿಯರ್
ಹಾಗೆಯೇ ಕಾರಿನ ಆಂತರಿಕ ಭಾಗಗಳಲ್ಲೂ ಜಿಟಿ ಬ್ಯಾಡ್ಜ್ ಡೋಲ್ ಸಿಲ್ ಪ್ಲೇಟ್, ಚರ್ಮದ ಹೋದಿಕೆಯ ಸ್ಟೀರಿಂಗ್ ವೀಲ್, ಗೇರ್ ಶಿಫ್ಟ್ ನಾಬ್ ಮತ್ತು ಹ್ಯಾಂಡ್ ಬ್ರೇಕ್ ಲೆವೆರ್ ಇರುತ್ತದೆ.

ಫೀಚರ್ಸ್
ಇದರಲ್ಲಿ ಟು ಡಿನ್ ಆಡಿಯೋ ಸಿಸ್ಟಂ ಜತೆ 4 ಸ್ಪೀಕರ್ಸ್, ಬ್ಲೂಟೂತ್, ಯುಎಸ್‌ಬಿ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಬಟನ್ ಮತ್ತು ಎತ್ತರ ಹೊಂದಾಣಿಸಬಹುದಾದ ಡ್ರೈವರ್ ಸೀಟು ಇರಲಿದೆ.

ಸುರಕ್ಷತೆ
ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಟ್ವಿನ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಲೇನ್ ಚೇಂಜ್ ಇಂಡಿಕೇಟರ್ ಆಳವಡಿಸಲಾಗಿದೆ.

ಕಲರ್ ವೆರಿಯಂಟ್
ಹಾಗೆಯೇ ಮೂರು ಕಲರ್ ವೆರಿಯಂಟ್‌ಗಳಲ್ಲಿ ಪೊಲೊ 1.6 ಜಿಟಿ ಟಿಡಿಐ ಲಭ್ಯವಿರುತ್ತದೆ. ಅವುಗಳೆಂದರೆ
ಫ್ಲಾಶ್ ರೆಡ್,
ಡೀಪ್ ಬ್ಲ್ಯಾಕ್
ಕ್ಯಾಡಿ ವೈಟ್


Click it and Unblock the Notifications








