ಫೋಕ್ಸ್‌ವ್ಯಾಗನ್ ವೆಂಟೊ ಫೇಸ್‌ಲಿಫ್ಟ್ ಬಿಡುಗಡೆ; ಬೆಲೆ 7.44 ಲಕ್ಷ ರು.
ಜರ್ಮನಿ ಮೂಲದ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಇಂಡಿಯಾ, ದೇಶದ ಮಾರುಕಟ್ಟೆಗೆ ಪರಿಷ್ಕೃತ ವೆಂಟೊ ಮಾದರಿಯನ್ನು ಪರಿಚಯಿಸಿದೆ. ಈ ಮೂಲಕ ಹಬ್ಬದ ಆವೃತ್ತಿಯನ್ನು ಹೊಸ ವೆಂಟೊ ಮುಖಾಂತರ ಬರಮಾಡಿಕೊಂಡಿದೆ.
ಹೊಸ ವೆಂಟೊ ದೆಹಲಿ ಎಕ್ಸ್ ಶೋ ಬೆಲೆ 7.44 ಲಕ್ಷ ರು.ಗಳಾಗಿದೆ. ಇದರಲ್ಲಿ ಆಳವಡಿಸಲಾಗಿರುವ 1.5 ಲೀಟರ್ ಡೀಸಲ್ ಮೋಟಾರು ಎಂಜಿನ್ ಪ್ರಮುಖ ವಿಶೇಷತೆಯಾಗಿದೆ. ಪೊಲೊ ಹ್ಯಾಚ್‌ಬ್ಯಾಕ್‌ನಲ್ಲೂ ಇದೇ ಎಂಜಿನ್ ಆಳವಡಿಸಲಾಗಿತ್ತು.

ಹೊಸ ಪೊಲೊ ವೆಂಟೊ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಯ ಜೊತೆಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಹೊಸ ವೆಂಟೊದಲ್ಲಿ ಜಾಣತಣದೊಂದಿಗೆ ಕ್ರೋಮ್ ಬಳಕೆ ಮಾಡಲಾಗಿದ್ದು, ಹೆಡ್ ಲ್ಯಾಂಪ್ ಮತ್ತು ಪರಿಷ್ಕೃತ ಬಂಪರ್ ಪಡೆದಿದೆ. ಇವೆಲ್ಲದರ ಜೊತೆಗೆ ಹೊಸ ಅಲಾಯ್, ಬಂಪರ್ ಮತ್ತು ಟೈಲ್ ಲೈಟ್ ಪಡೆಯಲಿದೆ.

ಇನ್ನು ಹೊಸ ವಂಟೊ ಕಾರಿನೊಳಗೆ ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್, ಪಿಯಾನೊ ಬ್ಲ್ಯಾಕ್ ಫಿನಿಶ್, ಆಡಿಯೋ ಮತ್ತು ಟೆಲಿಫೋನಿ ಕಂಟ್ರೋಲ್ ಪಡೆಯಲಿದೆ. ಅದೇ ರೀತಿ ಟು ಟೋನ್ ಡ್ಯಾಶ್‌ಬೋರ್ಡ್ ಆಯ್ಕೆಯು ಲಭ್ಯವಿರಲಿದೆ.

ವೆರಿಯಂಟ್
ವೆಂಟೊ 1.6 ಎಂಪಿಐ ಪೆಟ್ರೋಲ್ ಮ್ಯಾನುವಲ್ (3 ವೆರಿಯಂಟ್) - ಟ್ರೆಂಡ್‌ಲೈನ್, ಕಂಫರ್ಟ್‌ಲೈನ್ ಮತ್ತು ಹೈಲೈನ್
ಬೆಲೆ - 7.44 ಲಕ್ಷ ರು.ಗಳಿಂದ 8.87 ಲಕ್ಷ ರು.ಗಳ ವರೆಗೆ

ವೆರಿಯಂಟ್
ವೆಂಟೊ 1.2 ಟಿಎಸ್‌ಐ ಪೆಟ್ರೋಲ್ (7 ಸ್ಪೀಡ್ ಡಿಎಸ್‌ಜಿ) - ಕಂಫರ್ಟ್‌ಲೈನ್ ಮತ್ತು ಹೈಲೈನ್
ಬೆಲೆ - 9.35 ಲಕ್ಷ ರು.ಗಳಿಂದ 9.92 ಲಕ್ಷ ರು.ಗಳ ವರೆಗೆ

ವೆರಿಯಂಟ್
ವೆಂಟೊ 1.5 ಟಿಡಿಐ ಮ್ಯಾನುವಲ್ - ಟ್ರೆಂಡ್‌ಲೈನ್, ಕಂಫರ್ಟ್‌ಲೈನ್ ಮತ್ತು ಹೈಲೈನ್ ವೆರಿಯಂಟ್
ಬೆಲೆ - 8.57 ಲಕ್ಷ ರು.ಗಳಿಂದ 9.90 ಲಕ್ಷ ರು.ಗಳ ವರೆಗೆ

ವೆರಿಯಂಟ್
ವೆಂಟೊ 1.5 ಟಿಡಿಐ (7 ಸ್ಪೀಡ್ ಡಿಎಸ್‌ಜಿ) - ಕಂಫರ್ಟ್‌ಲೈನ್ ಮತ್ತು ಹೈಲೈನ್ ವೆರಿಯಂಟ್
ಬೆಲೆ - 10.49 ಲಕ್ಷ ರು.ಗಳಿಂದ 10.94 ಲಕ್ಷ ರು.

ಈ ವಿಭಾಗದಲ್ಲಿ ಹ್ಯುಂಡೈ ವರ್ನಾ ಮಾತ್ರ ಆಟೋಮ್ಯಾಟಿಕ್ ವೆರಿಯಂಟ್ ಆಯ್ಕೆ ನೀಡುತ್ತಿರುವುದರಿಂದ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಿರುವುದು ಫೋಕ್ಸ್‌ವ್ಯಾಗನ್ ಮಾರಾಟ ಉತ್ತೇಜನಕ್ಕೆ ಸಹಕಾರಿಯಾಗಲಿದೆ.


Click it and Unblock the Notifications








