ವಿಶ್ವದ ಅತ್ಯುತ್ತಮ ಮಾರಾಟದ ಕಾರು 2013 - ಮಾರುತಿ ಆಲ್ಟೊ
ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಆಗಿರುವ ಮಾರುತಿ ಸುಜುಕಿಯ ಜನಪ್ರಿಯ ಆಲ್ಟೊಗೆ ಮಗದೊಂದು ಗರಿ ಮೂಡಿದ್ದು, 2013ನೇ ಸಾಲಿನಲ್ಲಿ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತೂ ಇಂತೂ ಕಳೆದ ಒಂಬತ್ತು ವರ್ಷಗಳ ಕಾಲ ದೇಶದ ಕಾರು ಮಾರಾಟ ಸಂಖ್ಯೆಯಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದ ಮಾರುತಿ ಆಲ್ಟೊ ಜಾಗತಿಕ ಮಟದಲ್ಲಿ ಕೊನೆಗೂ ಅಗ್ರಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶ ಕಂಡಿದೆ.
ವಿಶೇಷವೆಂದರೆ ಕಳೆದ ಮೂರು ವರ್ಷಗಳಲ್ಲಿ ಮಾರಾಟ ಸಂಖ್ಯೆ ಕುಸಿತ ಕಂಡಿದ್ದರ ಹೊರತಾಗಿಯೂ 800, ಕೆ10 ಮತ್ತು ಆಲ್ಟೊ ಆವೃತ್ತಿಗಳನ್ನು ಹೊಂದಿರುವ ಈ ಕಾರು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಸ್ಪರ್ಧಿಗಳು ಭಾರಿ ಮಾರಾಟ ಕುಸಿತ ಅನುಭವಿಸಿರುವುದೇ 2,65,777 ಯುನಿಟ್ ಮಾರಾಟ ಕಂಡುಕೊಂಡಿರುವ ಆಲ್ಟೊವನ್ನು ನಂ.1 ಪಟ್ಟಕ್ಕೇರಿಸುವಲ್ಲಿ ಸಹಕಾರಿಯಾಗಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ 2010ನೇ ಸಾಲಿನಲ್ಲಿ 3,11,000 ಯುನಿಟ್ ಮಾರಾಟದ ಹೊರತಾಗಿಯೂ ಆಲ್ಟೊಗೆ ಅಗ್ರಸ್ಥಾನ ದಕ್ಕಿರಲಿಲ್ಲ.

ಮಾರುತಿ ಆಲ್ಟೊ
2013ರಲ್ಲಿ ಒಟ್ಟು ಮಾರಾಟ - 2,65,777 ಯುನಿಟ್
2012ನೇ ಸಾಲಿಗೆ ಹೋಲಿಸಿದಾಗ ಶೇಕಡಾ 7.3ರಷ್ಟು ಕುಸಿತ

ಟೊಯೊಟಾ ಅಕ್ವಾ (ಜಪಾನ್)
2013ರಲ್ಲಿ ಒಟ್ಟು ಮಾರಾಟ - 2,62,367 ಯುನಿಟ್
ಶೇಕಡಾ 1.58ರಷ್ಟು ಕುಸಿತ

ಫೋಕ್ಸ್‌ವ್ಯಾಗನ್ ಗೋಲ್ (ಬ್ರೆಜಿಲ್)
2013ರಲ್ಲಿ ಒಟ್ಟು ಮಾರಾಟ - 2,55,057 ಯುನಿಟ್
ಶೇಕಡಾ 12ರಷ್ಟು ಕುಸಿತ

ಫೋಕ್ಸ್‌ವ್ಯಾಗನ್ ಗಾಲ್ಫ್ (ಜರ್ಮನಿ)
2013ರಲ್ಲಿ ಒಟ್ಟು ಮಾರಾಟ - 2,44,249 ಯುನಿಟ್
ಶೇಕಡಾ 1.47ರಷ್ಟು ಏರಿಕೆ

ಕೀ ಕಾರ್ ಹೋಂಡಾ ಎನ್-ಬಾಕ್ಸ್ (ಜಪಾನ್)
2013ರಲ್ಲಿ ಒಟ್ಟು ಮಾರಾಟ - 2,34,995 ಯುನಿಟ್
ಶೇಕಡಾ 11.3ರಷ್ಟು ಏರಿಕೆ

ಕೀ ಕಾರ್ ದೈಹಟ್ಸು ಮೂವ್ (ಜಪಾನ್)
2013ರಲ್ಲಿ ಒಟ್ಟು ಮಾರಾಟ - 205,333 ಯುನಿಟ್
ಶೇಕಡಾ 40.6ರಷ್ಟು ಏರಿಕೆ


Click it and Unblock the Notifications








