ಪ್ರತಿ ಲೀಟರ್‌ಗೆ 111 ಕೀ.ಮೀ ಮೈಲೇಜ್ ಕಾರು ನೋಡಿ
ನಂಬಿದ್ರೆ ನಂಬಿ, ಇಲಂದ್ರೆ ಬಿಟ್ಟುಬಿಡಿ. ಯಾಕೆಂದರೆ ವಿಶ್ವದ ಗರಿಷ್ಠ ಇಂಧನ ಕ್ಷಮತೆಯುಳ್ಳ ಈ ಕಾರು ಪ್ರತಿ ಲೀಟರ್‌ಗೆ 111 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಂದ ಹಾಗೆ ಇದು ಅಂತಿಥ ಕಾನ್ಸೆಪ್ಟ್ ಕಾರೇನಲ್ಲ. ಈಗಾಗಲೇ ಮುಂಬರುವ ಜಿನೆವಾ ಮೋಟಾರ್ ಶೋದಲ್ಲಿ ಇದರ ಉತ್ಪಾದಕ ವರ್ಷನ್ ಲಾಂಚ್ ಮಾಡುವುದಾಗಿ ಕಂಪನಿ ಘೋಷಿಸಿದೆ.
ಇಷ್ಟಕ್ಕೂ ನಾವು ಮಾತನಾಡುತ್ತಿರುವುದು ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ಕಾರಿನ ಬಗ್ಗೆ. ಇದು ಹೈಬ್ರಿಡ್ ಕಾರಾಗಿದ್ದು, ಎರಡು ಡೀಸೆಲ್ ಎಂಜಿನ್ ಸಿಲಿಂಡರ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿರಲಿದೆ. ಹಾಗೆಯೇ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

ಎಂಜಿನ್
ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ಎಂಜಿನ್ ಗರಿಷ್ಠ 48 ಪಿಎಸ್ ಪವರ್ (35 ಕೆಡಬ್ಲ್ಯು) ಉತ್ಪಾದಿಸಲಿದೆ. ಇದು ಸಾಮಾನ್ಯ ಫೋರ್ ವೀಲರ್‌ಗಳಿಂದ ವ್ಯತ್ಯಸ್ತವಾಗಿದ್ದರೂ ಉತ್ತಮ ನಿರ್ವಹಣೆ ನೀಡಲು ಸಾಧ್ಯವಾಗಲಿದೆ.

ಎಲೆಕ್ಟ್ರಿಕ್ ಮೋಟಾರ್
ಇದರ ಎಲೆಕ್ಟ್ರಿಕ್ ಮೋಟಾರ್ 27 ಪಿಎಸ್ ಪವರ್ (20 ಕೆಡಬ್ಲ್ಯು) ಉತ್ಪಾದಿಸಲಿದ್ದು, ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡಲಿದೆ.

ನಿರ್ವಹಣೆ
ಪ್ರತಿ ಗಂಟೆಗೆ ಪ್ರಭಾವತ್ಮಾಕ 160 ಕೀ.ಮೀ ವೇಗದಲ್ಲಿ ಚಲಿಸಲಿದೆ. ಹಾಗೆಯೇ 12.7 ಸೆಕೆಂಡುಗಳಲ್ಲಿ 0-100 ಕೀ.ಮೀ ವೇಗ ವರ್ಧಿಸಲಿದೆ.

ಏರೋಡೈನಾಮಿಕ್ಸ್ ಹಾಗೂ ವಿನ್ಯಾಸ
ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1 ಇತರ ಕಾರುಗಳಿಂದ ವಿಭಿನ್ನವಾಗಿದ್ದು, ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ.

ಕ್ಲೀನ್ ಎಂಜಿನ್
ಉತ್ತಮ ಎಂಜಿನ್ ಕ್ಷಮತೆಯು ಕ್ಲೀನ್ ಎಂಜಿನ್‌ಗೆ ನೆರವಾಗಲಿದೆ. ಇದರ ಹೊಗೆ ಹೊರಸೂಸುವಿಕೆ ಕೀ.ಮೀ. 21 ಗ್ರಾಂ ಆಗಿದೆ.

ಇಷ್ಟೆಲ್ಲ ಆದರೂ ರಿಯಲ್ ಪರಿಸ್ಥಿತಿಯಲ್ಲಿ ಫೋಕ್ಸ್‌ವ್ಯಾಗನ್ ನಿರ್ವಹಣೆ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1

ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1

ಫೋಕ್ಸ್‌ವ್ಯಾಗನ್ ಎಕ್ಸ್‌ಎಲ್1



Click it and Unblock the Notifications








