ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುತ್ತಿದ್ದೀರಾ?

By * ಪ್ರವೀಣ್ ಚಂದ್ರ

Used Car, Bikes buying tips
ಶಶಿಕಿರಣ್ ಎಂಬ ನನ್ನ ಸ್ನೇಹಿತನಿಗೆ ಆದ ಅನುಭವವಿದು. ಬೆಂಗಳೂರಿನಲ್ಲಿ ನಿತ್ಯದ ಪ್ರಯಣಕ್ಕೆ ಇರಲಿ ಎಂದು ಸೆಕೆಂಡ್ ಹ್ಯಾಂಡ್ ಬೈಕೊಂದನ್ನು ಖರೀದಿಸಲು ಮಿನರ್ವ ಸರ್ಕಲ್ ಬಳಿಯ ಡೀಲರ್ ಒಬ್ಬರ ಬಳಿಗೆ ಹೋದ. ಅಲ್ಲಿದ್ದ ಬೈಕ್ ಗಳಲ್ಲಿ ಹೀರೋ ಹೋಂಡಾ ಕಂಪನಿಯ ಹಳೆಯ ಮಾಡಲ್ ಅವನಿಗೆ ಇಷ್ಟವಾಗಿ ಖರೀದಿಸಿದ. ನೋಡಲು ಹೊಸದರಂತೆ ಕಾಣುತ್ತಿದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳದೇ ಅಲ್ಲೇ ಒಂದು ಸುತ್ತು ಟೆಸ್ಟ್ ಡ್ರೈವ್ ಮಾಡಿ ಖರೀದಿಸಿಬಿಟ್ಟ.

20 ಸಾವಿರ ರೂಪಾಯಿ ಆಸುಪಾಸಿನಲ್ಲಿ ದೊರಕಿದ ಆ ಬೈಕ್ ಗೆ ಆರಂಭದಲ್ಲಿ ಏನು ಸಮಸೈ ಇರಲಿಲ್ಲ. ಖರೀದಿಸಿ ತಿಂಗಳು ಕಳೆದಾಗ ಗಾಡಿಯಲ್ಲಿ ಏನೋ ಅನಪೇಕ್ಷಿತ ಸದ್ದು, ಬ್ರೇಕ್ ಸಮಸೈ ಹೀಗೆ ಸಣ್ಣಪುಟ್ಟ ಸಮಸೈಗಳು ಕಂಡುಬಂದವಂತೆ. ಅದನ್ನು ರಿಪೇರಿ ಮಾಡಲು ಗ್ಯಾರೇಜ್ ಗೆ ಕೊಂಡೊಯ್ದಾಗ ಆ ಬೈಕ್ ನ ಎಂಜಿನ್ ಸೇರಿದಂತೆ ಎಲ್ಲದರಲೂ ಇರುವ ಸಮಸೈಗಳನ್ನು ಮೆಕಾನಿಕ್ ಇವನ ಮುಂದಿಟ್ಟಾಗ ಇವನಿಗೆ ಷಾಕ್. ಮತ್ತೆ ಕೆಲವು ಸಾವಿರ ಖರ್ಚುಮಾಡಿ ರಿಪೇರಿ ಮಾಡಿ ಕೆಲವು ತಿಂಗಳು ಓಡಿಸಿದನಂತೆ. ಮತ್ತೆ ಸಮಸ್ಯೆ ಆರಂಭವಾಗಲು ತೊಡಗಿದಾಗ, ಇದರ ಸಹವಾಸವೇ ಬೇಡ ಎಂದು ಮಾರಿಬಿಟ್ಟನಂತೆ!

ತೆಗೆದುಕೊಳ್ಳಬೇಕಾದ ಎಚ್ಚರಿಕೆಯೇನು?

ಕಾರ್ ಅಥವಾ ಬೈಕ್ ಖರೀದಿ ಹೆಚ್ಚಿನವರ ಕನಸು. ಆದರೆ ಹೊಸತನ್ನು ಎಲ್ಲರಿಗೂ ಖರೀದಿಸಲಾಗುವುದಿಲ್ಲ. ಇಂಥವರಿಗೆ ಸುಲಭವಾಗಿ ದೊರಕುವುದು ಸೆಕೆಂಡ್ ಹ್ಯಾಂಡ್ ವೆಹಿಕಲ್. ಹಾಗಂತ ಸೆಕೆಂಡ್ ಹ್ಯಾಂಡ್ ಅಂದಾಕ್ಷಣ ಮೂಗು ಮುರಿಯುವ ಅಗತ್ಯವಿಲ್ಲ. ಶಶಿಕಿರಣ್ ಗೆ ಆದ ಅನುಭವ ಎಲ್ಲರಿಗೂ ಆಗುವುದಿಲ್ಲ. ಶೋರೂಂ ದರಕ್ಕಿಂತ ಎಷ್ಟೋ ಪಾಲು ಕಡಿಮೆಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡುವ ಸೆಕೆಂಡ್ ಹ್ಯಾಂಡ್ ವಾಹನಗಳು ಇಂದು ದೊರಕುತ್ತವೆ.

ಆದರೆ ಶಶಿಕಿರಣ್ ಗೆ ಆದ ಅನುಭವ ಆಗಬಾರದು ಎಂದರೆ ಒಂದಿಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ಕೆಲವೊಮ್ಮೆ ಮುನ್ನೇಚರಿಕೆ ತೆಗೆದುಕೊಳ್ಳದೇ ಖರೀದಿಸಿದ ಇಂಥಹ ವಾಹನಗಳಿಗೆ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವ ಮೊದಲು ಪಾಲೀಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.

ಪಾಲೀಶ್ ಗೆ ಮರುಳಾಗಬೇಡಿ: ಹೆಚ್ಚಿನವರು ಬಣ್ಣ ನೋಡಿ ಮೋಸ ಹೋಗುತ್ತಾರೆ. ಖರೀದಿಸಲು ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ ಬಳಿ ಹೋದಾಗ ಅಲ್ಲಿ ಸಾಲಾಗಿರಿಸಿರುವ ಸ್ಟೈಲಿಶ್ ಬೈಕ್ ಅಥವಾ ಕಾರ್ ನಿಮ್ಮ ಗಮನ ಸೆಳೆಯುತ್ತದೆ. ಎಲ್ಲವೂ ಒಂದಕ್ಕಿಂತ ಒಂದು ಅಂದವಾಗಿ, ಈಗಷ್ಟೇ ಶೋರೂಂನಿಂದ ಬಂದಿದೆಯೇ ಎಂಬಂತೆ ಮಿರಮಿರನೆ ಮಿಂಚುತ್ತಿರುತ್ತವೆ. ಕೆಲವು ವಾಹನಗಳನ್ನು ಹಳತು ಎಂದು ನಂಬಲು ಕಷ್ಟವಾಗುವಂತಿರುತ್ತವೆ. ಬೆಂಗಳೂರಿನ ಕಲಾಸಿಪಾಲ್ಯ, ಮಿನರ್ವ, ಸಜ್ಜನ್ ರಾವ್ ಸರ್ಕಲ್ ಮುಂತಾದ ಬೀದಿಗಳಲ್ಲಿ ಸಾಗಿದರೆ ಒಂದಿಷ್ಟು ಸತ್ಯ ನಿಮ್ಮಅರಿವಿಗೆ ಬರುತ್ತದೆ. ಅಲ್ಲಿ ಹಳೆಯ ವಾಹನಗಳನ್ನು ಮಾರಾಟ ಮಾಡುವ ಹಲವು ಅಂಗಡಿಗಳಿದ್ದು, ಹಳೆಯ ವಾಹನಗಳಿಗೆ ವ್ಯಾಕ್ಸ್ ಉಜ್ಜಿ ಉಜ್ಜಿ ಹೊಸದರಂತೆ ಕಾಣಿಸಲು ಅವರು ಮಾಡುವ ಶ್ರಮ ನಿಮ್ಮ ಗಮನಕ್ಕೆ ಬರುತ್ತದೆ. ಹೀಗಾಗಿ ಹೊರನೋಟಕ್ಕೆ ಅಂದವಾಗಿದೆ ಎಂದು ಕಣ್ಣು ಮುಚ್ಚಿ ಖರೀದಿಸಬೇಡಿ.

ಸುಸ್ಥಿತಿಯಲ್ಲಿರುವುದೇ ಪರೀಕ್ಷಿಸಿ: ವಾಹನದ ಕಂಡಿಷನ್ ಹೇಗಿದೆ ಎಂದು ಪರೀಕ್ಷಿಸುವುದು ಅತ್ಯಂತ ಅಗತ್ಯ. ಒಂದಿಷ್ಟು ದೂರ ಟೆಸ್ಟ್ ಡ್ರೈವ್ ಮಾಡಿ. ಅದರಲ್ಲಿ ಕೇಳುವ ಸಣ್ಣಪುಟ್ಟ ಅನಪೇಕ್ಷಿತ ಸದ್ದುಗಳಿಗೂ ಕಿವಿಕೊಡಿ. ನಿಮಗೆ ವಾಹನದ ಅನಾಟಮಿ ಬಗ್ಗೆ ಹೆಚ್ಚು ತಿಳಿಯದೇ ಇದ್ದರೆ ನಿಮ್ಮೊಂದಿಗೆ ನಿಮ್ಮ ಪರಿಚಿತ ಮೆಕಾನಿಕ್ ಸ್ನೇಹಿತರನ್ನು ಕರೆದುಕೊಂಡು ಹೋಗಿ. ಎಂಜನ್ ಸೇರಿದಂತೆ ವಾಹನದ ಪ್ರತಿ ಭಾಗಗಳ ಕುರಿತು ಅವರಿಗೆ ತಿಳಿದಿರುತ್ತದೆ.

ಬಜೆಟ್ ಫಿಕ್ಸ್ ಮಾಡಿ: ನೀವು ಖರೀದಿಸುವ ಕಾರ್ ದರ ಎಷ್ಟಿರಬೇಕು ಎಂದು ಪೂರ್ವ ನಿರ್ಧಾರ ಮಾಡಿಡಿ. ಅದಕ್ಕಿಂತ ಕಡಿಮೆ ದರದ ವಾಹನಗಳನ್ನು ಹುಡುಕಿ. ನಿಮಗೆ ಸೂಕ್ತವಾದ ಕಾರ್ ಆಯ್ಕೆ ಮೊದಲು ಮಾರುಕಟ್ಟೆಯಲ್ಲಿರುವ ಕಾರ್ ದರಗಳ ಕುರಿತು ಒಂದಿಷ್ಟು ಅಧ್ಯಯನ ಮಾಡುವುದು ಒಳ್ಳೆಯದು. ನೆನಪಿರಲಿ ಹೆಚ್ಚಿನ ಸೆಕೆಂಡ್ ಹ್ಯಾಂಡ್ ಕಾರ್ ದರ ಹೊಸ ಕಾರ್ ಗಿಂತ ಎಷ್ಟೋ ಪಟ್ಟು ಕಡಿಮೆಯಿರುತ್ತದೆ. ತೆಗೆದು ಒಂದೆರಡು ತಿಂಗಳಾದರೂ ಅದಕ್ಕೆ ಸೆಕೆಂಡ್ ಹ್ಯಾಂಡ್ ಕಾರ್ ಪಟ್ಟವಿರುವುದರಿಂದ ಅದರ ಮಾರುಕಟ್ಟೆ ಮೌಲ್ಯ ಕಡಿಮೆಯಾಗಿರುತ್ತದೆ. ಖರೀದಿಸಿ ಕೆಲವು ತಿಂಗಳಲ್ಲಿ ಫೈನಾನ್ಸ್ ಕಟ್ಟಲಾಗದೇ ಮಾರಾಟ ಮಾಡಿದ ವಾಹನಗಳು ಕೂಡ ಡೀಲರ್ ಬಳಿ ಇರುತ್ತವೆ.

ಒಂದಿಷ್ಟು ರಿಸರ್ಚ್ ಮಾಡಿ: ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬಳಸಿದ ವಾಹನಗಳು ದೊರಕುತ್ತವೆ. ಅದರಲ್ಲಿ ಸುಸ್ಥಿತಿಯಲ್ಲಿರುವುದು ಮತ್ತು ಸುಸ್ಥಿತಿಯಲ್ಲಿದೆ ಎಂಬಂತೆ ಕಾಣುವ ವಾಹನಗಳು ಇರಬಹುದು. ಆದರೆ ಸುಸ್ಥಿತಿಯಲ್ಲಿರುವಂತೆ ಕಂಡರೂ ಅದರಲ್ಲಿ ಹಲವು ಸಮಸ್ಯೆಗಳಿರಬಹುದು.

ಡೀಲರ್ ಗಳಿಗಿಂತ ಆನ್ ಲೈನ್ ಉತ್ತಮ: ನೀವು ಡೀಲರ್ ಬಳಿ ಹೋಗುವುದಕ್ಕಿಂತ ಇಂಟರ್ ನೆಟ್ ಕ್ಲಾಸಿಫೈಡ್ ಜಾಹೀರಾತು ನೋಡುವುದು ಉತ್ತಮ. ಸುದ್ದಿಪತ್ರಿಕೆಗಳು, ವಾಹನಕ್ಕೆ ಸಂಬಂಧಿಸಿದ ಜಾಲತಾಣಗಳು, ಆನ್ ಲೈನ್ ಕ್ಲಾಸಿಫೈಡ್ ಗಳನ್ನು ನೋಡುವುದು ಉತ್ತಮ. ಆನ್ ಲೈನ್ ಕಮ್ಯುನಿಟಿ ತಾಣಗಳಲ್ಲಿಯೂ ನಿಮಗೆ ಬೇಕಾದ ಸೆಕೆಂಡ್ ಹ್ಯಾಂಡ್ ವಾಹನ ಹುಡುಕಬಹುದು. ಇಲ್ಲಿ ವಾಹನ ಮಾರಾಟ ಮಾಡಲು ಬಯಸುವರು ಖರೀದಿಸಬಯಸುವರೂ ಎಲ್ಲರೂ ಸಿಗುತ್ತಾರೆ.

ನೀವು ವಾಹನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ, ದಾಖಲೆಗಳನ್ನು ಅವರಿಂದ ಪಡೆಯಿರಿ. ಸರಿಯಾಗಿ ವಿಮಾ ಕಂತು ಕಟ್ಟಲಾಗಿದೆಯೇ, ಈ ಹಿಂದೆ ಅಪಘಾತವಾಗಿದೆಯೇ ಇತ್ಯಾದಿ ಮಾಹಿತಿಗಳನ್ನು ತಿಳಿಯಲು ಪ್ರಯತ್ನಿಸಿ.

ಅವಸರ ಬೇಡ: ಅವಸರಕ್ಕೆ ಬಿದ್ದು ಖರೀದಿಸಬೇಡಿ. ಆ ವಾಹನದ ಬಗ್ಗೆ ಸಾಕಷ್ಟು ತಿಳಿದುಕೊಂಡು, ಪ್ರತಿ ಭಾಗಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಸೆಕೆಂಡ್ ಹ್ಯಾಂಡ್ ವಾಹನಗಳು ಮೇಲ್ನೋಟಕ್ಕೆ ಸುಸ್ಥಿತಿಯಲ್ಲಿದೆ ಎಂದೆನಿಸಿದರೂ ಎಚ್ಚರಿಕೆಯಿಂದ ಪರಿಶೀಲಿಸುವುದು ಅಗತ್ಯ. ಎಲ್ಲ ಕಡೆಯಿಂದಲೂ ಓಕೆ ಎಂದೆನಿಸಿ, ಇದಕ್ಕೆ ದುಡ್ಡು ಕೊಟ್ಟರೆ ಮೋಸವಿಲ್ಲ ಎಂದೆನಿಸಿದರೆ ಖರೀದಿಸಿ.

ಎಲ್ಲ ಮಾಹಿತಿ ಸಂಕ್ಷಿಪ್ತವಾಗಿ ಇಲ್ಲಿದೆ:
* ಯಾವ ವಾಹನ, ಯಾರಿಂದ ಮತ್ತು ಯಾವ ಮಾಡೆಲ್ ಖರೀದಿಸಬಹುದು?
* ವಾಹನದ ಇತಿಹಾಸ, ದಾಖಲೆಗಳನ್ನು ಪರಿಶೀಲಿಸಿ.
* ಕೆಲವು ಡೀಲರ್ ಗಳು ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ವಾರೆಂಟಿ ನೀಡುತ್ತಾರೆ. ಇದು ಉತ್ತಮ.
* ಜನಪ್ರಿಯವಲ್ಲದ ಮಾಡೆಲ್ ಖರೀದಿಸಬೇಡಿ
* ಫೈನಾನ್ಸ್ ನವರು ಮುಟ್ಟುಗೋಲು ಹಾಕಿದ ವಾಹನ ಖರೀದಿಸಿದರೆ ಅದರ ಹಿಂದಿನ ಮಾಲೀಕನಿಂದ ನಿಮಗೆ ಏನಾದರೂ ಕಿರಿಕಿರಿ ಇರಬಹುದು.
* ತುಂಬಾ ಹಳೆಯ ಕಾರ್ ಬೇಡ. ಖರೀದಿಸಿ ಹೆಚ್ಚು ಸಮಯ ಆಗದ ವಾಹನ ಖರೀದಿಸಿ
* ಎರಡನೇ ಬಾರಿ ಪೈಂಟಿಂಗ್ ಮಾಡಿದ ವಾಹನದ ಮೇಲೆ ಒಂದಿಷ್ಟು ನಿಗವಿರಲಿ. ಎಲ್ಲಾದರೂ ಅಪಘಾತವಾದ ವಾಹನ ಅದಾಗಿರಬಹುದು.
* ಖರೀದಿಗೆ ಹೋದಾಗ ವಾಹನದ ಬಗ್ಗೆ ತಿಳಿದಿರುವವರು ಜೊತೆಗಿರಲಿ
* ದಾಖಲೆ ಪರಿಶೀಲಿಸಿ. ಆರ್ ಟಿ ಒ, ತೆರಿಗೆ, ರಿಜಿಸ್ಟ್ರೇಷನ್, ವಿಮೆ, ಫೈನಾನ್ಸ್ ಸಂಬಂಧಿಸಿದ ದಾಖಲೆಗಳು ಸಮರ್ಪಕವಾಗಿದೆಯೇ ಗಮನಿಸಿ.
* ಎಂಜಿನ್ ಗಾತ್ರ ನೋಡಿ. ಉದಾಹರಣೆಗೆ ಹೋಂಡಾ 1.3 ಎಂಜಿನ್ ಬದಲಾಗಿ ಹೋಂಡಾ 1.5 ಎಂಜಿನ್ ಅಳವಡಿಸಿರಬಾರದಲ್ವ.
* ಟೆಸ್ಟ್ ಡ್ರೈವ್ ಮಾಡಿ. ಮೆಕಾನಿಕ್ ಸಮಸೈಗಳಿವೆಯೇ ಎಂದು ಪರಿಶೀಲಿಸಿ.
* ಅವಸರ ಬೇಡ, ಸುಳ್ಳು ಓನರ್ ಗಳನ್ನು ಡೀಲರ್ ಗಳು ಸೃಷ್ಟಿಸಿರಬಹುದು.
* ವಿಮಾ ಪಾಲಿಸಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಿ. ಹಳೆಯದನ್ನೇ ಮುಂದುವರೆಸಬೇಡಿ. [ಆಟೋಮೊಬೈಲ್ಸ್]

More from DriveSpark

Article Published On: Friday, January 28, 2011, 11:14 [IST]
English summary
Want to buy a pre-owned vehicle? Yes, yes, it makes a lot of sense even if it isn’t as straight forward as buying new. However, chances of getting fleeced are high while you buy a pre-owned car or a bike. Here are some tips from second hand vehicle market expert.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+