ಕಾರ್ ಚಾಲನೆ ಮಾಡುವ ಗರ್ಭಿಣಿಯರಿಗೆ ಟಿಪ್ಸ್

Driving Pregnant
ಇದು ಕೆಲವು ಗರ್ಭಿಣಿಯರ ಅನಿವಾರ್ಯತೆ. ತವರು ಮನೆಗೋ, ಪಕ್ಕದೂರು, ಆಫೀಸ್, ಅಂಗಡಿ ಮುಂತಾದ ಕಡೆ ತಾವೇ ಕಾರ್ ಡ್ರೈವಿಂಗ್ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆಯಿರುವ ಹಲವು ಗರ್ಭಿಣಿಯರಿದ್ದಾರೆ. ನೋವು ಕಾಣಿಸಿಕೊಂಡಾಗ ತಾವೇ ಡ್ರೈವಿಂಗ್ ಮಾಡುತ್ತ ಆಸ್ಪತ್ರೆ ಸೇರುವ ಚಾಲಕಿಯರೂ ಇದ್ದಾರೆ. ಗರ್ಭಿಣಿಯರು ವಾಹನ ಚಲಾಯಿಸಬಾರದೆಂದು ಇಲ್ಲ. ಆದರೆ ಅಂತಹ ಸಮಯದಲ್ಲಿ ಒಂದಿಷ್ಟು ಸುರಕ್ಷತೆಯತ್ತ ಗಮನ ನೀಡುವುದು ಮುಖ್ಯ. ಗರ್ಭಿಣಿಯರಿಗೆ ವಾಹನ ಚಲಾಯಿಸುವ ಅನಿವಾರ್ಯತೆಯಿದ್ದಲ್ಲಿ ಅನುಸರಿಸಬೇಕಾದ ಕೆಲವು ಟಿಪ್ಸ್ ಗಳು ಇಲ್ಲಿವೆ.

* ಸೀಟನ್ನು ಸಾಧ್ಯವಿದಷ್ಟು ಹಿಂದಕ್ಕೆ ಸರಿಸಿಡಿ. ಇದರಿಂದ ನಿಮಗೆ ಸಾಕಷ್ಟು ಸ್ಥಳಾವಕಾಶನೂ ದೊರಕುತ್ತದೆ. ಸ್ಟೇರಿಂಗ್, ಏರ್ ಬ್ಯಾಗ್ ಮತ್ತು ನಿಮ್ಮ ನಡುವೆ ಸಾಕಷ್ಟು ಅಂತರವಿರುವುದರಿಂದ ಅಪಘಾತಗಳ ಸಂದರ್ಭದಲ್ಲಿ ಹೆಚ್ಚಿನ ತೊಂದರೆಯಾಗದು.
* ಡ್ರೈವಿಂಗ್ ಮಾಡುವಾಗ ನಿಮ್ಮ ಎದೆ ಮತ್ತು ಸ್ಟೇರಿಂಗ್ ನಡುವೆ ಕನಿಷ್ಟ 10 ಇಂಚಾದರೂ ಅಂತರವಿರಲಿ.
* ನೀವು ಕಾರ್ ನಲ್ಲಿರುವಾಗ ಸೀಟ್ ಬೆಲ್ಟ್ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ
* ಗುಂಡಿಗಳು, ಉಬ್ಬುತಗ್ಗುಗಳಿರುವ ರಸ್ತೆಗಳಲ್ಲಿ ಚಾಲನೆ ಮಾಡುವುದನ್ನು ಸಾಧ್ಯವಿದಷ್ಟು ಅವಾಯ್ಡ್ ಮಾಡಿ.
* ನೀವು ಗರ್ಭಿಣೆ ಎಂಬ ಕಾರಣಕ್ಕೆ ನರ್ವಸ್ ಆಗಿ ಡ್ರೈವ್ ಮಾಡಬೇಡಿ.
* ಸಂಚಾರ ದಟ್ಟಣೆ ಹೆಚ್ಚಿರುವ ಸಂದರ್ಭಗಳಲ್ಲಿ ವಾಹನ ಚಾಲನೆ ಮಾಡುವುದನ್ನು ಅವಾಯ್ಡ್ ಮಾಡಿ.
* ಸಾಧ್ಯವಿದಷ್ಟು ಪರಿಚಿತ ರಸ್ತೆಗಳಲ್ಲಿ ಪ್ರಯಾಣಿಸಿ.
* ನಿಮಗೆ ಆರಾಮವೆನಿಸುವ ವೇಗದಲ್ಲಿ ವಾಹನ ಚಲಾಯಿಸಿ. ಅತೀವೇಗ ಬೇಡ.
* ರಾತ್ರಿ ಡ್ರೈವ್ ಮಾಡಬೇಡಿ. ಯಾಕೆಂದರೆ ರಾತ್ರಿ ಅಪಘಾತವಾಗುವ ಅಪಾಯ ಹೆಚ್ಚು. ಸ್ಪಷ್ಟವಾಗಿ ಕಾಣದಿರುವುದು, ವಾಹನ ಚಾಲಕರು ಕುಡಿದಿರುವುದು ಇತ್ಯಾದಿಗಳಿಂದ ರಸ್ತೆ ಹೆಚ್ಚು ಸುರಕ್ಷಿತವಲ್ಲ. ಹೀಗಾಗಿ ಗರ್ಭಿಣಿಯರು ರಾತ್ರಿ ವಾಹನ ಚಾಲನೆ ಮಾಡುವುದನ್ನು ಅವಾಯ್ಡ್ ಮಾಡಿದರೆ ಒಳ್ಳೆಯದು.
* ಕಾರಿನಲ್ಲಿ ಏರ್ ಬ್ಯಾಗ್ ಇರಲಿ. ಇದರಿಂದ ಅಪಘಾತದಂತಹ ಸಂದರ್ಭದಲ್ಲಿ ಹೆಚ್ಚಿನ ಅಪಾಯ ತಪ್ಪುತ್ತದೆ.

More from DriveSpark

Article Published On: Wednesday, March 30, 2011, 15:09 [IST]
English summary
Safe driving tips for pregnant women. Now-a-days independent women drive on their own, be it going to market or bringing kids from school or going to the office. Here are few useful tips to take care for the pregnant women.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+