ಬೈಕ್ ಮೈಲೇಜ್ ಹೆಚ್ಚಿಸಿ, ಹಣ ಉಳಿತಾಯ ಮಾಡಿರಿ

* ಬೈಕ್ ಸವಾರಿ ಆರಂಭಿಸಿದ ಮೊದಲ 3-5 ಕಿಲೋಮೀಟರ್ ದೂರದವರೆಗೆ ಹೆಚ್ಚು ಆಕ್ಸಿಲರೇಟರ್(ಥ್ರೋಟಲ್) ಕೊಡಬೇಡಿ. ಯಾಕೆಂದರೆ ಆ ಸಮಯದಲ್ಲಿ ಎಂಜಿನ್ ಕೋಲ್ಡ್ ಆಗಿರುತ್ತದೆ ಮತ್ತು ಸಾಕಷ್ಟು ಆಯಿಲ್ ಲಭ್ಯವಿರುವುದಿಲ್ಲ.
* ಪೂರ್ವಾಹ್ನ ಕೆಲವು ನಿಮಿಷ ಕಾಲ ಚೋಕ್ ಉಪಯೋಗಿಸಿ. ಎಂಜಿನ್ ಆ ಸಮಯದಲ್ಲಿ ಒಂದಿಷ್ಟು ಆಲಸ್ಯದಿಂದ ಇರುತ್ತದೆ. ಇದರಿಂದ ಎಂಜಿನ್ ಕಾರ್ಯಪ್ರವೃತ್ತವಾಗಿ ಆಯಿಲ್ ಬೈಕ್ ನ ಎಲ್ಲಾ ಭಾಗಗಳಿಗೆ ಆವರಿಸಿಕೊಳ್ಳುತ್ತದೆ.
* ತಕ್ಷಣ ಬ್ರೇಕ್ ಹಾಕುವುದು ಮತ್ತು ಗೇರ್ ಬದಲಾಯಿಸುವ ಪ್ರವೃತ್ತಿಯನ್ನು ನಿಲ್ಲಿಸಿ. ಆಗಾಗ ಗೇರ್ ಬದಲಾಯಿಸುವುದು ಇಂಧನ ದಕ್ಷತೆ ಮತ್ತು ಬೈಕ್ ಬಾಳಿಕೆಗೆ ತೊಂದರೆಯುಂಟುಮಾಡುತ್ತದೆ. ಅದೇ ರೀತಿ ಸಡನ್ ಬ್ರೇಕ್ ಹಾಕದೇ ನಿಧಾನವಾಗಿ ಬೈಕ್ ನಿಲ್ಲಿಸಲು ಕಲಿಯಿರಿ.
* ಕಂಪನಿ ಹೇಳಿದ ಮಿತಿಯಷ್ಟೇ ಟೈರ್ ಗೆ ಗಾಳಿ ತುಂಬಿಸಿ.
* ಎಂಜಿನ್ ಆಯಿಲ್ ನಿಯಮಿತವಾಗಿ ಬದಲಾಯಿಸಿ. ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಬೇಕೆಂಬುದು ನೀವು ಬಳಸಿರುವ ಆಯಿಲ್ ಬಗೆಗೆ ಅನುಗುಣವಾಗಿರುತ್ತದೆ. ಮಿನರಲ್ ಆಯಿಲ್ ನ್ನು ಗರಿಷ್ಠ ಒಂದು ಸಾವಿರ ಕಿ.ಮೀ. ಪ್ರಯಾಣಕ್ಕೊಮ್ಮೆಯಾದರೂ ಬದಲಾಯಿಸಬೇಕು. ಸೆಮಿ ಸಿಂಥೆಟಿಕ್ ಆಯಿಲನ್ನು ಎರಡುವರೆ ಕಿ.ಮೀ. ಪ್ರಯಾಣಕ್ಕೊಮ್ಮೆ ಬದಲಾಯಿಸಬಹುದು. ಇದರೊಂದಿಗೆ ನಿಮ್ಮ ರೈಡಿಂಗ್ ಸ್ಟೈಲ್, ಪರಿಸರ, ಎಂಜಿನ್ ಉಷ್ಣತೆ ಇತ್ಯಾದಿ ಹಲವು ಅಂಶಗಳೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: ಕಾರು ಇಂಧನ ಉಳಿಸಿ ಹಣ ಉಳಿಸಲು ಇಲ್ಲಿದೆ ಟಿಪ್ಸ್
* ಸಿಗ್ನಲ್ ಗಳಲ್ಲಿ ಬೈಕ್ ಎಂಜಿನ್ ಆಫ್ ಮಾಡಿರಿ. ಈಗ ಸಿಗ್ನಲ್ ಗಳು ಹಸಿರು ಬಣ್ಣಕ್ಕೆ ತಿರುಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಹಸಿರು ಬಣ್ಣಕ್ಕೆ ಸಿಗ್ನಲ್ ತಿರುಗಲು 5 ಸೆಕೆಂಡ್ ಮುನ್ನ ಎಂಜಿನ್ ಸ್ಟಾರ್ಟ್ ಮಾಡಿ.
* ನಿಯಮಿತ ಸಮಯಕ್ಕೆ ಅನುಗುಣವಾಗಿ ಬೈಕ್ ಸರ್ವಿಸ್ ಮಾಡಿಸಿ ಸರಿಯಾದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿರಿ.
* ಪ್ರತಿನಿತ್ಯ ಇಂಧನ ಟ್ಯಾಂಕ್, ಇಂಧನ ಪೈಪ್ ಮತ್ತು ಇಂಧನ ಫಿಲ್ಟರನ್ನು ಪರಿಶೀಲಿಸುತ್ತೀರಿ.
* ಪೂರ್ವಾಹ್ನದ ಸಮಯದಲ್ಲಿ ಟ್ಯಾಂಕ್ ಗೆ ಇಂಧನ ತುಂಬಿಸಲು ಪ್ರಯತ್ನಿಸಿ ಮತ್ತು ನರಳಿನಲ್ಲಿ ಬೈಕ್ ಪಾರ್ಕ್ ಮಾಡಿರಿ.
* ಬೈಕನ್ನು ಟಾಪ್ ಗೇರ್ ನಲ್ಲಿ(40ರಿಂದ 60 ಕಿ.ಮೀಯಲ್ಲಿ) ಚಲಾಯಿಸಿ. ಪ್ರತಿಗಂಟೆಗೆ 70 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋಗೋದನ್ನು ಅವಾಯ್ಡ್ ಮಾಡಿರಿ.
ಈ ಸಲಹೆಗಳು ನಿಮ್ಮ ಬೈಕ್ ಕಾರ್ಯಕ್ಷಮತೆ, ಎಂಜಿನ್ ದಕ್ಷತೆ ಉಳಿಸಿ ಮೈಲೇಜ್ ಹೆಚ್ಚಿಸಲು ಸಹಕರಿಸುತ್ತದೆ. ಎಂಜಿನ್ ಆರೋಗ್ಯಪೂರ್ಣವಾಗಿದ್ದರೆ ಬೈಕ್ ಅತ್ಯುತ್ತಮ ಮೈಲೇಜ್ ನೀಡುತ್ತದೆ.


Click it and Unblock the Notifications