ಬ್ರೇಕ್ ಫೈಲ್ ಆಯ್ತಾ.. ಹೆದರಬೇಡಿ ಇಲ್ಲಿದೆ ಟಿಪ್ಸ್

ದಿನನಿತ್ಯ ಹಲವು ಸಾವುನೋವುಗಳಿಗೆ ಬ್ರೇಕ್ ಫೈಲ್ಯೂರ್ ಕಾರಣವಾಗುತ್ತದೆ. ಆದರೆ ಹೆಚ್ಚು ಅನಾಹುತ ಸಂಭಾವಿಸಲು ಚಾಲಕರೇ ಕಾರಣರಾಗುತ್ತಾರೆ. ಆದರೆ ಇಂತಹ ಪರಿಸ್ಥಿತಿಯಲ್ಲೂ ಧೈರ್ಯಗೆಡದಿದ್ದರೆ ಬ್ರೇಕ್ ಫೈಲ್ಯೂರ್ ಆದ ವಾಹನ ನಿಲ್ಲಿಸಬಹುದು. ಮೊದಲು ಹಳೆಯ ಜೋಕ್ಸ್ ಓದಿ. ನಂತರ ಬ್ರೇಕ್ ಹಾಕದೇ ಸಲಹೆಗಳನ್ನು ಓದುತ್ತ ಹೋಗಿರಿ.
ಬಸ್ ಡ್ರೈವರ್: ಛೆ, ಈ ರಸ್ತೆಯಲ್ಲಿ ಒಂದು ಮರ ಕೂಡಾ ಇಲ್ಲ ನಾಚಿಕೆಗೇಡು
ಪ್ರಯಾಣಿಕ: ನಿಮ್ಮ ಪರಿಸರ ಪ್ರೇಮ ಮೆಚ್ಚಿದೆ
ಡ್ರೈವರ್: ಸುಮ್ನೆ ಕೂತ್ಕೊಳಪ್ಪಾ, ಬಸ್ ಬ್ರೇಕ್ ಫೈಲ್ ಆಗಿದೆ.
ಸಲಹೆಗಳು
* ಬ್ರೇಕ್ ಫೈಲ್ಯೂರ್ ಆಗಿದೆ ಎಂದು ತಿಳಿದಾಗ ಆಕಾಶವೇ ಬಿದ್ದಂತೆ ಕಂಗಲಾಗಬೇಡಿ. ಧೈರ್ಯ ತಂದುಕೊಳ್ಳಿ. ಇದು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ನೆರವಾಗುತ್ತದೆ.
* ಗಮನ ರಸ್ತೆಯ ಮೇಲಿರಲಿ. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಪಾದಚಾರಿಗಳು, ಅತ್ಯಧಿಕ ವಾಹನ ದಟ್ಟಣೆ ಮತ್ತು ಅಪಾಯಕಾರಿ ಸ್ಥಳ ಅವಾಯ್ಡ್ ಮಾಡಲು ಯತ್ನಿಸಿ. ಹೆಚ್ಚು ವಾಹನ ದಟ್ಟಣೆ ಇರುವಲ್ಲಿ ಹೋಗುವ ಅನಿವಾರ್ಯತೆಯಿದ್ದರೆ ಹೆಡ್ ಲೈಡ್ ಹಾಕಿರಿ. ಹಾರ್ನ್ ಹೊಡೆದು ಪಾದಚಾರಿಗಳನ್ನು ಮತ್ತು ಇತರ ವಾಹನ ಚಾಲಕರನ್ನು ಎಚ್ಚರಿಸಿರಿ.
* ಸುಮ್ಮನೆ ಬ್ರೇಕ್ ಹೊಡೆಯುತ್ತ ಇರಿ. ಈ ಒತ್ತಡದಿಂದ ವಾಹನ ನಿಧಾನವಾಗುತ್ತದೆ. ಆದರೆ ಇದಕ್ಕೆ ತುಂಬಾ ಸಮಯ ಹಿಡಿಯಬಹುದು. ಆದರೆ ಕಂಗಲಾಗಬೇಡಿ. ಪ್ರಯತ್ನ ಕೈಬಿಡಬೇಡಿ.
* ಕಾರನ್ನು ಲೋ ಗೇರ್ ಗೆ ಬದಲಾಯಿಸಿ.
* ಪಾರ್ಕಿಂಗ್/ ಎಮರ್ಜೆನ್ಸಿ ಬ್ರೇಕ್ ಬಳಸಲು ಮರೆಯದಿರಿ. ಆದರೆ ಸಡನ್ ಆಗಿ ಅಮುಕದೆ ನಿಧಾನವಾಗಿ ಬಳಸಿ. ಇಲ್ಲವಾದಲ್ಲಿ ನೀವು ವಾಹನದ ಮೇಲಿನ ಹಿಡಿತ ಕಳೆದುಕೊಳ್ಳಬಹುದು. ಲೋ ಗೇರ್ ನಲ್ಲಿದ್ದಾಗ ಇಂತಹ ತುರ್ತು ಬ್ರೇಕ್ ಬಳಸುವುದು ಉತ್ತಮ.
* ಡಾಮರ್ ರಸ್ತೆ ಬಿಟ್ಟು ಗಟ್ಟಿನೆಲಕ್ಕೆ, ಮಣ್ಣಿನ ರಸ್ತೆಗೆ ಗಾಡಿ ತಿರುಗಿಸಲು ಅವಕಾಶವಿದೆಯೇ ನೋಡಿ. ಇಂತಹ ರಸ್ತೆಗಳಲ್ಲಿ ವಾಹನ ಬೇಗ ನಿಧಾನವಾಗುತ್ತದೆ. ಹಾಗಂತ ಒಮ್ಮೆಗೆ ತಿರುಗಿಸಬೇಡಿ. ಸ್ಕಿಡ್ ಆಗುವ ಅಪಾಯವಿದೆ.
* ಅನಿವಾರ್ಯವಾದರೆ ಬೇರೊಂದು ವಾಹನದ ಹಿಂಬದಿಗೆ ಗುದ್ದಬಹುದು. ಆದರೆ ಇದು ಹೆಚ್ಚು ಅಪಾಯಕಾರಿ.
* ಈ ಯಾವ ವಿಧಾನಗಳು ಕೆಲಸಕ್ಕೆ ಬರುತ್ತಿಲ್ಲ ಎಂದೆನಿಸಿದರೆ ಸಣ್ಣ ಮರ ಅಥವಾ ಪೊದೆಗಳನ್ನು ಹುಡುಕಲು ಇದು ಸೂಕ್ತ ಸಮಯ. ಚಿಕ್ಕ ಮರಕ್ಕೆ ಅಥವಾ ಪೊದೆಗಳಿಗೆ ಕಾರನ್ನು ಡಿಕ್ಕಿ ಹೊಡೆಯಿರಿ. ಆದರೆ ನಿಮ್ಮ ಕಾರಿಗಿಂತ ದೊಡ್ಡದಿರುವ ದೊಡ್ಡಮರಗಳಿಗೆ ಡಿಕ್ಕಿ ಹೊಡೆಯದಿರಿ.


Click it and Unblock the Notifications








