ಕಾರಿನ ಗೇರನ್ನು ಯಾವಾಗ? ಹೇಗೆ? ಶಿಫ್ಟ್ ಮಾಡಬೇಕು?

ಮ್ಯಾನುಯಲ್ ಟ್ರಾನ್ಸ್ ಮಿಷನ್ ಗೇರಿನಲ್ಲಿ ಫಸ್ಟ್ ಗೇರಿನಲ್ಲಿ ಪ್ರತಿಗಂಟೆಗೆ 10ರಿಂದ 15 ಕಿ.ಮೀ. ವೇಗದಲ್ಲಿ ಸಾಗಬಹುದು. ವೇಗ ಹೆಚ್ಚಿಸಬೇಕೆಂದುಕೊಂಡರೆ ನೀವು ಎರಡನೇ ಗೇರಿಗೆ ಬದಲಾಯಿಸಿಕೊಳ್ಳಿ. ಹೆಚ್ಚು ಬ್ರೇಕ್ ಬಳಸದೇ ಸೆಕೆಂಡ್ ಗೇರನ್ನು "ಎಂಜಿನ್ ಬ್ರೇಕಿಂಗ್"ಗೆ ಬಳಸಿಕೊಳ್ಳಬಹುದು. ಕಾರನ್ನು ತಿರುಗಿಸುವ ಸಂದರ್ಭದಲ್ಲೂ ಸೆಕೆಂಡ್ ಗೇರನ್ನು ಬಳಸಿಕೊಳ್ಳಿ. ಇದರಿಂದ ಕಾರಿನ ಬೇಗವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಆದಗ್ಯೂ ನೀವು ಟಾಪ್ ಗೇರ್ ಹಾಕಿ ಸ್ಪೀಡಾಗಿ ಹೋಗಲು ಬಯಸುತ್ತೀರಿ. ಟಾಪ್ ಗೇರಿನ ವೇಗ ಒಂದು ಕಾರಿನಿಂದ ಇನ್ನೊಂದಕ್ಕೆ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಮೂರನೇ ಗೇರಿನಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಸವಾರಿ ಮಾಡಬಹುದು. ಕಾರನ್ನು ನಿಲ್ಲಿಸಲು ಬಯಸುವಾಗ ಅಥವಾ ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಮತ್ತೆ ಮೊದಲ ಗೇರಿಗೆ ಹೋಗಬೇಕಾಗುತ್ತದೆ.
ಗೇರಿನ ಸಾಮರ್ಥ್ಯಕ್ಕಿಂತ ವೇಗದಲ್ಲಿ ಕಾರು ಸಾಗುತ್ತಿರುವುದನ್ನು ಕಾರಿನ ಸದ್ದಿನ ಮೂಲಕ ತಿಳಿದುಕೊಳ್ಳಬಹುದು. ಇದರರ್ಥವೆಂದರೆ ಇದು ಗೇರು ಬದಲಾಯಿಸಲು ಸೂಕ್ತ ಸಮಯವೆಂದಾಗಿದೆ. ಟಾಪ್ ಗೇರಿಗೆ ಗೇರನ್ನು ಸಿಫ್ಟ್ ಮಾಡುವಾಗ ಸಾಮಾನ್ಯವಾಗಿ ಆರ್ ಪಿಎಂ ಸೂಚಿ 3 ಸಾವಿರದಿಂದ 3,500ಗೆ ತಲುಪಿರುತ್ತದೆ.
ಗೇರ್ ಬದಲಾಯಿಸುವಾಗ ನಿಮ್ಮ ಗಮನ ಗಮನ ರಸ್ತೆಯ ಮೇಲಿರಲಿ. ಯಾವ ರೀತಿ ಅಂದರೆ ಕಂಪ್ಯೂಟರ್ ಕೀಬೋರ್ಡ್ ನೋಡದೇ ಟೈಪಿಸುವ ರೀತಿ. ಡ್ಯಾಷ್ ನಲ್ಲಿರುವ ಆರ್ ಪಿಎಂ ಮುಳ್ಳಿನ ಮೇಲೂ ಗಮನವಿರಲಿ. ಹ್ಯಾಪಿ ಡ್ರೈವಿಂಗ್..


Click it and Unblock the Notifications








