ನಾನು ಬ್ರಹ್ಮಚಾರಿ: ನನ್ನ ಬಜೆಟ್ಟಿಗೆ ಸೂಕ್ತ ಕಾರು ಸೂಚಿಸಿ

Which Car Best for Youth
ನಾನು ಬ್ಯಾಚುಲರ್. ಕಾರೊಂದನ್ನು ಖರೀದಿಸಲು ಪ್ಲಾನ್ ಮಾಡಿದ್ದೇನೆ. ಆದರೆ ನನ್ನ ಬಜೆಟ್ 5.5 ಲಕ್ಷಕ್ಕಿಂತ ಹೆಚ್ಚಿಲ್ಲ. ದಿನಕ್ಕೆ ಹೆಚ್ಚೆಂದರೆ ಹತ್ತರಿಂದ ಹದಿನೈದು ಕಿ.ಮೀ. ಪ್ರಯಾಣಿಸುತ್ತೇನೆ. ಪ್ರತಿತಿಂಗಳು ಸುಮಾರು 200-400 ಕಿ.ಮೀಯಷ್ಟು ಹೆದ್ದಾರಿಯಲ್ಲಿ ಪ್ರಯಾಣಿಸುತ್ತೇನೆ.

ಇಷ್ಟು ಕಿ.ಮೀ. ಪ್ರಯಾಣಿಸುವ ನನಗೆ ಪೆಟ್ರೊಲ್ ಕಾರು ಸೂಕ್ತವೇ? ಡೀಸಲ್ ಕಾರು ಖರೀದಿಸಲೇ ಅಥವಾ ಎಲ್ ಪಿಜಿ ಕಾರು ಖರೀದಿಸಲೇ? ಹೀಗಂತ ಪ್ರಶ್ನೆ ಕೇಳಿದವರು ಪೀಣ್ಯದ ಭರತೇಶ್.

ರನ್ನಿಂಗ್ ವೆಚ್ಚ ಗಮನಕ್ಕೆ ತೆಗೆದುಕೊಂಡರೆ ಎಲ್ ಪಿಜಿ ಕಾರು ಅಗ್ಗ. ನೀವು ದಿನಕ್ಕೆ ಹತ್ತರಿಂದ ಹದಿನೈದು ಕಿ.ಮೀ. ಪ್ರಯಾಣಿಸುವರಾಗಿರುವುದರಿಂದ ದುಬಾರಿ ಎಲ್ ಪಿಜಿ ಕಾರು ನಿಮಗೆ ಅಗತ್ಯವಿಲ್ಲವೆಂದೆನಿಸುತ್ತದೆ. ನಿಮ್ಮ ಪ್ರಯಾಣದ ದೂರಕ್ಕೆ ಡೀಸಲ್ ಕಾರಂತು ಸೂಕ್ತ ಆಗುವುದೇ ಇಲ್ಲ.

ನಮ್ಮ ಪ್ರಕಾರ ನಿಮಗೆ ಪೆಟ್ರೊಲ್ ಕಾರು ಸೂಕ್ತ. ನಿಮ್ಮ 5.5 ಬಜೆಟಿಗೆ ಮಾರುತಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 1.2 ಲೀಟರ್ ಎಂಜಿನ್ ಸಾಮರ್ಥ್ಯದ ಮಾರುತಿ ಸುಜುಕಿ ಸ್ವಿಫ್ಟ್ ಅಥವಾ ರಿಟ್ಜ್ ಕಾರನ್ನು ಖರೀದಿಸಬಹುದು.

ಸ್ವಲ್ಪ ದಿನ ಕಾಯಬಹುದು ಎಂದೆನಿಸಿದರೆ ಹೊಸ ಸ್ವಿಫ್ಟ್ ಕಾರಿಗೆ ಕಾಯಬಹುದು. ಆದರೆ ಅದು ನಿಮ್ಮ ಬಜೆಟಿಗೆ ದೊರಕಬಹುದೋ ಹೇಳಲಾಗದು. ನೀವು ಬ್ಯಾಚುಲರ್ ಆಗಿದ್ದರೂ ಸ್ವಿಫ್ಟ್, ರಿಟ್ಜ್ ಕಾರು ಖರೀದಿಸಿದರೆ ಅಡ್ಡಿಯಿಲ್ಲ. ಮುಂದೆ ಫ್ಯಾಮಿಲಿ ಸವಾರಿಗೂ ಅನುಕೂಲ ಆಗಬಹುದು.

ಇದು ನಮ್ಮ ಅಭಿಪ್ರಾಯ. ಓದುಗರಾದ ನೀವು ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಇಮೇಲ್ ಅಥವಾ ಕಾಮೆಂಟ್ ಮಾಡಬಹುದು. ನಿಮ್ಮ ಪ್ರಶ್ನೆಗಳಿಗೂ ಸ್ವಾಗತ.

More from DriveSpark

Article Published On: Saturday, July 30, 2011, 12:59 [IST]
English summary
Readers Mail: This is readers Forum. Tell your opinion. I am Bachelor Planning to buy a car. My budget 5.5 lakh. I am lot of confusing about petrol, diesel and LPG car. Please advise which car best for me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+