ಹೊಟ್ಟೆಯೊಳಗೆ ಕಂದನಿರುವಾಗ ಸ್ಟೇರಿಂಗ್ ಹಿಡಿಯಬಹುದೇ?
ಗರ್ಭಿಣಿಯರು ವಾಹನ ಚಲಾಯಿಸಬಹುದೇ ಎಂಬ ಪ್ರಶ್ನೆಗೆ ಹೆಚ್ಚಿನ ವೈದ್ಯರು ಎಸ್ ಅನ್ನುತ್ತಾರೆ. ಆದರೆ ಒಂದಿಷ್ಟು ಮುಂಜಾಗ್ರತೆ ವಹಿಸುವಂತೆ ಸೂಚಿಸುತ್ತಾರೆ. ಕಾರು ಚಲಾಯಿಸುವ ಗರ್ಭಿಣಿ ವಹಿಸಿಕೊಳ್ಳಬೇಕಾದ ಎಚ್ಚರಿಕೆಯೇನು? ಹೊಟ್ಟೆಯಲ್ಲಿರುವ ಕಂದನಿಗೆ ತೊಂದರೆಯಾಗದಂತೆ ವಾಹನ ಚಲಾಯಿಸುವುದು ಹೇಗೆ? ಇಲ್ಲಿದೆ ಸಲಹೆ
* ನೀವು ಗರ್ಭಿಣಿ ಎಂದು ನರ್ವಸ್ ಆಗದಿರಿ. ಕಾನ್ಫಿಡೆನ್ಸ್ ನಿಂದ ವಾಹನ ಚಲಾಯಿಸಿರಿ.
* ಟ್ರಾಫಿಕ್ ಹೆಚ್ಚಿರುವಲ್ಲಿ ವಾಹನ ಚಾಲನೆ ಮಾಡುವುದನ್ನು ಕಡಿಮೆ ಮಾಡಿ. ಪರಿಚಿತ ರಸ್ತೆಗಳಲ್ಲಿ ಪ್ರಯಾಣಿಸಿ. ನಿಮಗೆ ಗೊತ್ತಿಲ್ಲದ ಊರಿಗೆ ಹೋಗುವುದು ಬೇಡ.
* ವೇಗದ ಮೇಲೆ ನಿಯಂತ್ರಣವಿರಲಿ. ನಿಮಗೆ ಕಂಫರ್ಟ್ ಅನಿಸುವ ವೇಗದಲ್ಲಿ ವಾಹನ ಚಲಾಯಿಸಿರಿ.
* ರಾತ್ರಿಯ ಸಮಯದಲ್ಲಿ ವಾಹನ ಚಾಲನೆ ಮಾಡದಿರುವುದು ಒಳಿತು. ಕತ್ತಲಲ್ಲಿ ಸ್ಪಷ್ಟವಾಗಿ ಕಾಣುವುದಿಲ್ಲ. ಲಾರಿ, ಕಾರು ಚಾಲಕರು ಕುಡಿದಿರುತ್ತಾರೆ. ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ರಾತ್ರಿ ಪ್ರಯಾಣ ಬೇಡ.
* ಕಾರಿನಲ್ಲಿ ಏರ್ ಬ್ಯಾಗ್ ಇತ್ಯಾದಿ ಸುರಕ್ಷತೆಯ ಸಾಧನಗಳು ಇರಲಿ.
* ಸೀಟನ್ನು ಸಾಧ್ಯವಿರುವಷ್ಟು ಹಿಂದಕ್ಕೆ ಸರಿಸಿಡಿ. ಸಾಕಷ್ಟು ಸ್ಥಳಾವಕಾಶದಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಸ್ಟೇರಿಂಗ್, ಏರ್ ಬ್ಯಾಗ್ ಮತ್ತು ನಿಮ್ಮ ಮಧ್ಯೆ ಸಾಕಷ್ಟು ಅಂತರವಿರಲಿ. ತಕ್ಷಣ ಬ್ರೇಕ್ ಹಾಕಿದಾಗ ಸ್ಟೇರಿಂಗ್ ಹೊಟ್ಟೆಗೆ ತಾಗದಂತೆ ಇರಲಿ.
* ಡ್ರೈವಿಂಗ್ ಮಾಡುವಾಗ ನಿಮ್ಮ ಎದೆ ಮತ್ತು ಸ್ಟೇರಿಂಗ್ ನಡುವೆ ಕಡಿಮೆಯೆಂದರೂ ಹತ್ತು ಇಂಚಾದರೂ ಅಂತರವಿರಲಿ.
* ಸೀಟ್ ಬೆಲ್ಟ್ ಧರಿಸಲು ಮರೆಯದಿರಿ.
* ಒಳ್ಳೆಯ ರಸ್ತೆಯಲ್ಲಿ ವಾಹನ ಚಲಾಯಿಸಿರಿ. ಅಂದರೆ ಗುಂಡಿ, ಉಬ್ಬುತಗ್ಗು ಇರುವ ಕೆಟ್ಟ ರಸ್ತೆಗಳಲ್ಲಿ ವಾಹನ ಚಲಾಯಿಸಿ.
* ಅಗತ್ಯವಿದ್ದರೆ ಮಾತ್ರ ಕಾರು ಚಲಾಯಿಸಿ. ಗರ್ಭಿಣಿಯಾಗಿರುವಾಗ ಟೈಂ ಪಾಸಿಗಾಗಿ ಕಾರು ಚಲಾಯಿಸುವುದು ಬೇಡ.


Click it and Unblock the Notifications









