ಕಾರಿನಲ್ಲಿ ನಾಯಿ: ಸುರಕ್ಷಿತ ಸವಾರಿಗೆ ಸಲಹೆಗಳು

Dogs and Car Safety Tips
ಕಾರುಗಳು ಕೇವಲ ಮನುಷ್ಯರ ಸವಾರಿ ವಾಹನವಾಗಿ ಉಳಿದಿಲ್ಲ. ಚಾಲಕ ಹತ್ತೋ ಮೊದಲೇ ಧಬಕ್ ಅಂತ ಮನೆಯ ಮುದ್ದಿನ ನಾಯಿ ಕಾರಿನ ಹಿಂದಿನ ಸೀಟಿನಲ್ಲಿ ಹಾರಿ ಕುಳಿತುಕೊಳ್ಳುವುದುಂಟು! ಕೆಲವು ನಾಯಿಗಳು ಕಾರಿನ ಕಿಟಕಿಯಿಂದ ಹೊರಗೆ ಮುಖ ಹಾಕಿ ಸಂಗಾತಿಯನ್ನು ಹುಡುಕುತ್ತಿರುತ್ತವೆ.

ಕೆಲವರಿಗೆ ಕಾರಿನಲ್ಲಿ ನಾಯಿಯೊಂದಿಗೆ ಪ್ರಯಾಣಿಸುವುದ ಪ್ರತಿಷ್ಠೆಯ ವಿಷಯ. ಕೆಲವರಿಗೆ ಅನಿವಾರ್ಯವೂ ಆಗಿರಬಹುದು. ಐಷಾರಾಮಿ ಕಾರುಗಳಲ್ಲಿ ನಾಯಿ ಆರಾಮವಾಗಿ ಕುಳಿತಿರುವುದನ್ನು ನೋಡಿ ಕೆಲವರು ಅಸೂಯೆ ಕೂಡ ಪಡಬಹುದು. ಕಾರಿನಲ್ಲಿ ಸವಾರಿ ಮಾಡುವ ಇಂತಹ ಪಿಂಕಿ, ಪಾಂಕಿ, ಜಾಕಿ, ಜಾನ್, ಟಾಮಿ, ಟೈಗರ್ ಗಳ ಮತ್ತು ಕಾರಿನ ಪ್ರಯಾಣ ಸುರಕ್ಷತೆ ಕುರಿತು ಒಂದಿಷ್ಟು ತಲೆಕೆಡಿಸಿಕೊಳ್ಳಬೇಕು.

ಕಾರಿನಲ್ಲಿ ಮಕ್ಕಳು ಸಾಯುವ ಪ್ರಕರಣಗಳು ನಿಮಗೆ ಗೊತ್ತೇ ಇದೆ. ಪ್ರಾಣಿದಯಾ ಸಂಘಟನೆಗಳ ಪ್ರಕಾರ ಪ್ರತಿವರ್ಷ ಸಾವಿರಾರು ನಾಯಿಗಳು ಕಾರಿನಲ್ಲಿ ಸಾಯುತ್ತವೆ. ಕಾರನ್ನು ಪಾರ್ಕ್ ಮಾಡಿ ಹೋದಾಗ ಕಾರು ಮೈಕ್ರೊವೇವನ್ ತರಹ ಬಿಸಿಯಾಗುತ್ತದೆ. ಒಳಗಿದ್ದ ನಾಯಿ ಸಾಯುತ್ತದೆ. ಹತ್ತು ನಿಮಿಷ ಕಾರನ್ನು ಬಿಸಿಲಿನಲ್ಲಿಟ್ಟರೆ ಇಂಟಿರಿಯರ್ ಉಷ್ಠಾಂಶ 160 ಡಿಗ್ರಿಗೆ ತಲುಪುತ್ತದಂತೆ!

ನಿಮ್ಮ ಪ್ರೀತಿಯ ನಾಯಿಯೊಂದಿಗೆ ಕಾರು ಡ್ರೈವಿಂಗ್ ಮಾಡುವುದು ನಿಮಗಿಷ್ಟವಾಗಬಹುದು. ಆದರೆ ಕೆಲವೊಮ್ಮೆ ಇದು ಅಪಘಾತಕ್ಕೂ ಕಾರಣವಾಗುವುದುಂಟು. ಕೆಲವು ನಾಯಿಗಳು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕೆಲವರು ನಾಯಿಯೊಂದಿಗೆ ಆಟ, ತುಂಟಾಟವಾಡುತ್ತ ಡ್ರೈವಿಂಗ್ ಮಾಡುತ್ತಾರೆ. ಇದರಿಂದ ರಸ್ತೆ ಮೇಲೆ ಗಮನ ಕಡಿಮೆಯಾಗಿ ಕಾರು ಅಪಘಾತಕ್ಕೀಡಾಗುತ್ತದೆ.

ಕಾರಿನಲ್ಲಿ ನಾಯಿಯ ಸುರಕ್ಷಿತ ಪ್ರಯಾಣಕ್ಕೆ ಕೆಲವು ಆಕ್ಸೆಸರಿ ಹೊಂದಿರುವುದು ಒಳ್ಳೆಯದು. ವಿಶೇಷ ಪೆಟ್ ಸೀಟುಗಳು, ಪೆಟ್ ಬ್ಯಾಗ್, ವಿಶೇಷ ನಾಯಿ ಬೆಲ್ಟ್, ಹ್ಯಾಚ್ ಬ್ಯಾಕ್ ಇತ್ಯಾದಿಗಳನ್ನು ನಿಮ್ಮ ಪ್ರೀತಿಯ ನಾಯಿಗೆ ತೊಡಿಸಬಹುದು. ಒಟ್ಟಾರೆ ಕಾರಿನಲ್ಲಿ ಸುಮ್ಮಗೆ ಕುಳಿತುಕೊಳ್ಳುವ ಜಾಣನಾಯಿಯೊಂದಿಗೆ ಪ್ರಯಾಣಿಸಬಹುದು. ಆದರೆ ಉಪದ್ರಕೊಡುವ ಕಂತ್ರಿ ಬುದ್ದಿಯ ನಿಮ್ಮ ದುಬಾರಿ ನಾಯಿಯೊಂದಿಗೆ ಪ್ರಯಾಣಿಸುವಾಗ ಜೋಪಾನ.

More from DriveSpark

Article Published On: Tuesday, August 2, 2011, 12:32 [IST]
English summary
Dogs and Car Safety Tips. Please always carry Dog Travel Accessories while driving car with your pet. Keep your pet into the dog car travel seat or dog travel safety belt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+