ಕಾರು ನಿರ್ವಹಣೆಗೆ ಸುಲಭ, ಸರಳ ಸಲಹೆಗಳು
ಅದಕ್ಕಾಗಿ ಕಾರನ್ನು ಸಮರ್ಪಕವಾಗಿ ನಿರ್ವಹಣೆ ಅಥವಾ ಮೇಂಟೆನ್ಸ್ ಮಾಡಬೇಕು. ಕೆಲವೊಮ್ಮೆ ಕಾರಿನಲ್ಲಿ ಯಾವೆಲ್ಲ ಸಮಸ್ಯೆಗಳಿವೆ ಎಂದು ಕೆಲವರಿಗೆ ಅರ್ಥವಾಗುವುದಿಲ್ಲ. ಉದಾಹರಣೆಗೆ ಕಾರು ಅನಾವಶ್ಯಕ ಸೌಂಡ್ ಮಾಡುತ್ತಿದ್ದರೆ ಅದಕ್ಕೆ ಕಾರಣ ಏನೆಂದು ತಿಳಿದುಕೊಳ್ಳಬೇಕು. ಇಂತಹ ಸೂಚನೆಗಳನ್ನು ಕಡೆಗಣಿಸಬಾರದು.
ಕಾರಿನಿಂದ ಯಾವುದೋ ಬಣ್ಣದ ದ್ರವ ಲೀಕ್ ಆಗುತ್ತಿದೆಯೇ? ನಿಮ್ಮ ಕಾರಿನೊಳಗಿನಿಂದ ಯಾವುದೋ ವಿಚಿತ್ರ ವಾಸನೆ ಬರುತ್ತಿರುವುದೇ? ಸುಟ್ಟ ವಾಸನೆ ಬರುವುದೇ? ಬಹುಶಃ ಕಾರಿನ ಯಾವುದೋ ಟೆಕ್ನಿಕಲ್ ಪಾರ್ಟಿಗೆ ಹಾನಿಯಾಗಿರಬಹುದು. ತಡಮಾಡದೇ ನಿಮ್ಮ ಕಾರನ್ನು ಸರ್ವಿಸಿಗೆ ನೀಡಿ.
ವರ್ಷಕ್ಕೊಂದಾದರೂ ವೈಪರ್ ಬದಲಾಯಿಸಬೇಕು. ಕಾರಿನ ಎಲ್ಲಾ ಲೈಟುಗಳು ಉರಿಯುತ್ತಿವೆಯೇ? ಕ್ಲೀನಾಗಿದೆಯಾ? ಪರಿಶೀಲಿಸಿ. ಅಂದ್ರೆ ಬ್ರೇಕ್ ಲೈಟ್, ಹೆಡ್ ಲೈಟ್, ಫಾಗ್ ಲ್ಯಾಂಪ್, ಎಮರ್ಜೆನ್ಸಿ ಫ್ಲಾಷ್ ಲೈಟ್ ಎಲ್ಲವನ್ನೂ ನಿಯಮಿತವಾಗಿ ಚೆಕ್ ಮಾಡುತ್ತಿರಬೇಕು.
ಕಾರಿನ ಟೈರ್ ಪರಿಶೀಲನೆ ಅತ್ಯಂತ ಅಗತ್ಯ. ಕಾರಿನ ಅಂಚುಗಳು, ಸವೆತ ಎಲ್ಲವನ್ನೂ ಪರಿಶೀಲಿಸಿ. ಕಾರಿನ ಟೈರ್ ಕೆಳಗಡೆ ಯಾವುದಾರೂ ಗಾಜು, ಚೂಪಾದ ವಸ್ತುಗಳು ಅಂಟಿಕೊಂಡಿರುವುದೇ ಪರಿಶೀಲಿಸಿ. ಟೈರ್ ಗಾಳಿ ಒತ್ತಡ ಸಮರ್ಪಕವಾಗಿರುವುದೇ ಚೆಕ್ ಮಾಡಿ.
ಕಾರನ್ನು ನಿಯಮಿತವಾಗಿ ಸರ್ವಿಸ್ ಮಾಡಿಸುತ್ತಿರಿ. ಕಂಪನಿ ನೀಡಿದ ಕಾಲಾವಧಿಗೆ ತಕ್ಕಂತೆ ಆಯಿಲ್ ಮತ್ತು ಆಯಿಲ್ ಫಿಲ್ಟರ್ ಬದಲಾಯಿಸಿ. ಬ್ಯಾಟರಿ ಕೂಡ ಪರಿಶೀಲಿಸುವಂತೆ ಮೆಕಾನಿಕ್ ಅಥವಾ ಸರ್ವಿಸ್ ಮಾಡುವ ವ್ಯಕ್ತಿಗೆ ತಿಳಿಸಬಹುದು.
ಕಾರಿನ ಏರ್ ಫಿಲ್ಟರಿನ ಚಿತ್ರಣ ಡರ್ಟಿಯಾದ ಸಮಯದಲ್ಲಿ ಅಂದ್ರೆ ಹೆಚ್ಚು ಕೊಳಕಾದ ಸಮಯದಲ್ಲಿ ಅದನ್ನು ಬದಲಾಯಿವುದು ಸೂಕ್ತ. ಏರ್ ಫಿಲ್ಟರ್ ಸಮರ್ಕವಾಗಿದ್ದರೆ ಕಾರಿನ ದಕ್ಷತೆ ಕೂಡ ಹೆಚ್ಚಾಗುತ್ತದೆ. ಕಾರನ್ನು ನಿಮ್ಮ ಜ್ಞಾನಕ್ಕೆ ತಕ್ಕಂತೆ ಪರಿಶೀಲಿಸುತ್ತ ಇರಿ. ಏನಾದ್ರು ಪ್ರಾಬ್ಲಂ ಇದೆ ಅನಿಸಿದರೆ ಪರಿಚಿತ ಮೆಕಾನಿಕ್ ನಿಂದ ಮಾಹಿತಿ ಪಡೆದುಕೊಳ್ಳಿ.
ಓದಿ: ವಾಹನ ಸಲಹೆಗಳ ಖಜಾನೆ


Click it and Unblock the Notifications









