ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಕರೋನಾ ಮಾರ್ಗಸೂಚಿಗಳ ಪ್ರಕಾರ, ಜನರು ತುರ್ತು ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಹೋಗುವಂತೆ ಸೂಚಿಸಲಾಗಿದೆ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಲಾಕ್‌ಡೌನ್ ಸಮಯದಲ್ಲಿ ಅನೇಕ ವಾಹನಗಳ ವಿಮಾ ಅವಧಿ ಮುಗಿದಿದೆ. ಈ ಪರಿಸ್ಥಿತಿಯಲ್ಲಿ ಪಾಲಿಸಿಯನ್ನು ನವೀಕರಿಸಲು ವಿಮಾ ಕಂಪನಿಗಳಿಗೆ ಹೋಗುವುದು ಅಪಾಯಕಾರಿ. ಆದರೆ ಆನ್‌ಲೈನ್ ಮೂಲಕವೇ ವಿಮೆಯನ್ನು ಖರೀದಿಸಬಹುದು ಅಥವಾ ನವೀಕರಿಸಬಹುದು. ಆನ್‌ಲೈನ್ ವಿಮೆಯ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಅತ್ಯುತ್ತಮ ಯೋಜನೆಯನ್ನು ಆಯ್ಕೆ ಮಾಡುವ ಸೌಲಭ್ಯ

ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ವಾಹನ ವಿಮೆಯನ್ನು ಖರೀದಿಸಲು ಬಯಸಿದರೆ, ವಿವಿಧ ವೆಬ್‌ಸೈಟ್‌ಗಳಿಗೆ ಲಭ್ಯವಿರುವ ವಿಮಾ ಯೋಜನೆಗಳನ್ನು ಹೋಲಿಸಿ ನೋಡಬಹುದು. ಅಗತ್ಯಕ್ಕೆ ಅನುಗುಣವಾಗಿ ಉತ್ತಮ ಯೋಜನೆಯನ್ನು ಆಯ್ಕೆ ಮಾಡಬಹುದು.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ವಿಮೆಯನ್ನು ಆನ್‌ಲೈನ್‌ ಮೂಲಕ ತೆಗೆದುಕೊಳ್ಳುವಾಗ, ವಿಮೆಗೆ ಸಂಬಂಧಿಸಿದ ಎಲ್ಲಾ ರೀತಿಯ ಹೆಚ್ಚುವರಿ ಶುಲ್ಕ ಹಾಗೂ ತೆರಿಗೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಪ್ರಕ್ರಿಯೆಯಲ್ಲಿ ವಿಮೆಯ ಯಾವ ವೈಶಿಷ್ಟ್ಯಕ್ಕಾಗಿ ಎಷ್ಟು ಮೊತ್ತವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಅನುಕೂಲಕರ

ಆಫ್‌ಲೈನ್ ಮೋಡ್‌ಗೆ ಹೋಲಿಸಿದರೆ ಆನ್‌ಲೈನ್‌ನಲ್ಲಿ ವಾಹನ ವಿಮೆ ಖರೀದಿಸುವ ಅಥವಾ ನವೀಕರಿಸುವ ಪ್ರಕ್ರಿಯೆ ಸುಲಭ ಹಾಗೂ ವೇಗವಾಗಿರುತ್ತದೆ. ಯಾವುದೇ ಜಾಗದಿಂದ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ ಬಳಸಿ ವಾಹನ ವಿಮಾ ಪಾಲಿಸಿಯ ಬಗ್ಗೆ ತಿಳಿಯಬಹುದು.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಸೂಕ್ತವೆಂದು ಕಂಡು ಬಂದ ಪಾಲಿಸಿಯನ್ನು ಖರೀದಿಸಬಹುದು. ಇದಕ್ಕಾಗಿ ವಿಮಾ ಕಂಪನಿಯ ಕಚೇರಿಗೆ ಹೋಗಬೇಕಾಗಿಲ್ಲ ಅಥವಾ ವಿಮಾ ಏಜೆಂಟರನ್ನು ಭೇಟಿ ಮಾಡುವ ಅಗತ್ಯವೂ ಇರುವುದಿಲ್ಲ. ಮನೆಯಲ್ಲಿ ಕುಳಿತು ವಿಮೆಯ ಸೌಲಭ್ಯವನ್ನು ಪಡೆಯಲು ಹೊರಗೆ ಹೋಗಬೇಕಾದ ಅಗತ್ಯವಿಲ್ಲ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಇದು ಕರೋನಾ ವೈರಸ್ ಸೋಂಕು ಹರಡುವುದರಿಂದ ರಕ್ಷಿಸುತ್ತದೆ. ಆನ್‌ಲೈನ್ ವಿಮಾ ಪಾಲಿಸಿಯನ್ನು ಖರೀದಿಸಿದ ನಂತರ, ಪಾಲಿಸಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೆಲವೇ ಕ್ಷಣಗಳಲ್ಲಿ ಡಿಜಿಟಲ್ ವಿಧಾನದ ಮೂಲಕ ಕಳುಹಿಸಲಾಗುತ್ತದೆ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಸಮಯ ಉಳಿತಾಯ

ಆನ್‌ಲೈನ್ ಮೋಟಾರು ವಾಹನ ವಿಮೆಯ ಮೊದಲ ಪ್ರಯೋಜನವೆಂದರೆ, ಅದು ಜನರ ಸಮಯವನ್ನು ಉಳಿಸುತ್ತದೆ. ಏಜೆಂಟರ ಮೂಲಕ ವಿಮೆ ಪಡೆದರೆ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಜೊತೆಗೆ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಕೆಲವೊಮ್ಮೆ ದಾಖಲಾತಿಗಾಗಿ ಸಾಕಷ್ಟು ಬಾರಿ ಕಚೇರಿಗಳಿಗೆ ಹೋಗ ಬೇಕಾಗಬಹುದು. ಆದ್ದರಿಂದ ವಾಹನ ವಿಮೆಗಾಗಿ ಆನ್‌ಲೈನ್ ಆಯ್ಕೆಯನ್ನು ಆರಿಸಿಕೊಳ್ಳುವುದು ಉತ್ತಮ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ರಿಯಾಯಿತಿ

ಆನ್‌ಲೈನ್‌ನಲ್ಲಿ ವಾಹನ ವಿಮೆ ಖರೀದಿಸುವಾಗ ಯಾವುದೇ ಏಜೆಂಟ್'ಗೆ ಪಾವತಿಸಬೇಕಾಗಿಲ್ಲ. ಆನ್‌ಲೈನ್ ವಾಹನ ವಿಮೆಯಲ್ಲಿ ಕಂಪನಿಗಳು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುತ್ತವೆ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ರಿಯಾಯಿತಿ ಅಥವಾ ಕೊಡುಗೆಯ ಲಾಭವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಆಟೋಮೊಬೈಲ್ ಅಸೋಸಿಯೇಶನ್‌ನ ಸದಸ್ಯರಾಗಿದ್ದರೆ ಅಥವಾ ವಾಹನದಲ್ಲಿ ಆ್ಯಂಟಿ-ಥೆಫ್ಟ್ ಸಾಧನವನ್ನು ಅಳವಡಿಸಿದ್ದರೆ ವಿಮಾ ಕಂಪನಿ ಹೆಚ್ಚುವರಿ ರಿಯಾಯಿತಿ ನೀಡುತ್ತದೆ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಸುಲಭ ನವೀಕರಣ

ಆಫ್‌ಲೈನ್ ಮೋಡ್‌ನಲ್ಲಿ ಯಾವುದೇ ವಿಮಾ ದಾಖಲೆಯನ್ನು ನವೀಕರಿಸುವಾಗ ಕೆಲವೊಮ್ಮೆ ಪದೇ ಪದೇ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ. ಆದರೆ ಆನ್‌ಲೈನ್ ವಾಹನ ವಿಮೆ ಖರೀದಿಸುವಾಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಆನ್‌ಲೈನ್‌ನಲ್ಲಿ ಎಲ್ಲಾ ವಿವರಗಳನ್ನು ಮೊದಲೇ ಸಂಗ್ರಹಿಸಲಾಗುತ್ತದೆ. ಈ ಕಾರಣಕ್ಕೆ ಆನ್‌ಲೈನ್ ಮೂಲಕ ಪಾಲಿಸಿ ನವೀಕರಿಸುವಾಗ ಎಲ್ಲಾ ವಿವರಗಳನ್ನು ಮತ್ತೆ ಫಾರಂನಲ್ಲಿ ಭರ್ತಿ ಮಾಡುವ ಅಗತ್ಯವಿಲ್ಲ. ಹಣವನ್ನು ಡಿಜಿಟಲ್ ವಿಧಾನದ ಮೂಲಕವೇ ಪಾವತಿಸಬಹುದು.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಹಕ್ಕು, ಬೋನಸ್ ವರ್ಗಾವಣೆ

ವಾಹನ ವಿಮಾ ಪಾಲಿಸಿಯನ್ನು ಖರೀದಿಸಿ ಆ ವರ್ಷದಲ್ಲಿ ಹಾನಿಗಳಿಗೆ ಯಾವುದೇ ಹಕ್ಕು ಸಾಧಿಸದಿದ್ದರೆ, ಮುಂದಿನ ವರ್ಷ ವಿಮಾ ಪಾಲಿಸಿಯಲ್ಲಿ ನೋ ಕ್ಲೈಮ್ ಬೋನಸ್ (ಎನ್‌ಸಿಬಿ) ಪಡೆಯಬಹುದು.

ಆನ್‌ಲೈನ್ ಮೂಲಕ ವಾಹನ ವಿಮೆ ನವೀಕರಿಸುವುದರಿಂದಾಗುವ ಪ್ರಯೋಜನಗಳಿವು

ಒಂದು ವೇಳೆ ವಿಮಾ ಕಂಪನಿಯನ್ನು ಬದಲಿಸಿದರೆ ಹಳೆಯ ವಿಮಾ ಕಂಪನಿಯಿಂದ ಪಡೆದ ಬೋನಸ್ ಮೊತ್ತವನ್ನು ಹೊಸ ಕಂಪನಿಯ ಪಾಲಿಸಿಗೆ ವರ್ಗಾಯಿಸಲಾಗುತ್ತದೆ.

Most Read Articles

Kannada
English summary
Benefits of online vehicle insurance renewal. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X