ಹೊಸ ಕಾರು ಮಾಲೀಕರೇ ಚಿಂತೆಯೇ ಬೇಡ! ಕಾರಿನ ಅಂದವನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಿ ಹೀಗೆ...

ಭಾರತದಲ್ಲಿ ಹೆಚ್ಚಿನ ಜನರಿಗೆ, ಹೊಸ ಕಾರನ್ನು ಖರೀದಿಸುವುದು ದೊಡ್ಡ ಕನಸಾಗಿರುತ್ತದೆ. ಹೇಗೋ ಮಾಡಿ ಕಾರು ಖರೀದಿಸಿದರೂ ಅದರ ನಿರ್ವಹಣೆ ಮಾಡುವುದು ಮತ್ತೊಂದು ಸವಾಲಾಗಿರುತ್ತದೆ. ನಮ್ಮ ವಾಹನಗಳಿಗೆ ಒಂದು ಸಣ್ಣ ಗೀರು ಬಿದ್ದರೂ ಮನಸ್ಸಿಗೆ ನೋವಾಗುತ್ತದೆ. ಹಾಗಾಗಿ, ಹೊಸ ಕಾರನ್ನು ರಕ್ಷಿಸಿಕೊಳ್ಳುವುದು ಹೊಸ ಕಾರು ಮಾಲೀಕರ ಪ್ರಮುಖ ಆದ್ಯತೆಯಾಗಿದೆ.

ಎಲ್ಲದಕ್ಕೂ ಮಿಗಿಲಾಗಿ ಬೇಸಿಗೆಯಲ್ಲಿ ವಾಹನಗಳು ಬಣ್ಣ ಕಳೆದುಕೊಳ್ಳುವುದು ಸಾಮಾನ್ಯಕ್ಕೆ ಸಾಮಾನ್ಯ ವಿಷಯ. ಆದ್ರೂ ಇದರಿಂದ ತಪ್ಪಿಸಿಕೊಂಡು ನಮ್ಮ ವಾಹನಗಳ ಬಣ್ಣವನ್ನು ಕಾಪಾಡಲು ಹಲವು ಉಪಾಯಗಳಿವೆ. ನಮ್ಮ ಹೊಸ ಕಾರಿನ ನೋಟವನ್ನು ಸಂರಕ್ಷಿಸಲು ಟಾಪ್ 5 ಕಾರ್ ಪೇಂಟ್ ಪ್ರೊಟೆಕ್ಷನ್ ವಿಧಾನಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ಒಮ್ಮೆ ಪರಿಶೀಲಿಸಿ.

car-paint-protection-tips-ppf-ceramic-coating-wax

ಸೆರಾಮಿಕ್ ಲೇಪನ (Ceramic Coating): ಸೆರಾಮಿಕ್ ಲೇಪನವು ಹೈಡ್ರೋಫೋಬಿಕ್ ಗುಣಲಕ್ಷಣಗಳೊಂದಿಗೆ ರಕ್ಷಣೆಯ ಅರೆ-ಶಾಶ್ವತ (semi-permanent) ಪದರವನ್ನು ಕಾರಿಗೆ ನೀಡುತ್ತದೆ. ಸೆರಾಮಿಕ್ ಲೇಪನವು PPF ನಷ್ಟು ಪರಿಣಾಮಕಾರಿಯಾಗಿಲ್ಲದಿದ್ದರೂ, ಇದು ಹೆಚ್ಚು ಕಾಲ ಉಳಿಯುವುದರ ಜೊತೆಗೆ ಕಾರಿಗೆ ತುಂಬಾ ಹೊಳಪು ನೀಡುತ್ತದೆ. ಅಲ್ಲದೆ, ಆಮ್ಲೀಯ ನೀರಿನ (acidic water) ವಿರುದ್ಧ ಸೆರಾಮಿಕ್ ಲೇಪನವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಕಾರ್ ವ್ಯಾಕ್ಸ್: ಉತ್ತಮ ಕಾರ್ ವ್ಯಾಕ್ಸ್ ಸುಲಭವಾಗಿ 2 ರಿಂದ 3 ತಿಂಗಳುಗಳವರೆಗೆ ಇರುತ್ತದೆ. ಮಧ್ಯಂತರಗಳಲ್ಲಿ ನಿಮ್ಮ ಕಾರನ್ನು ವ್ಯಾಕ್ಸಿಂಗ್ ಮಾಡುವುದರಿಂದ ಬಾಹ್ಯ ಬಣ್ಣವು ಧೂಳು ಮತ್ತು UV ಕಿರಣಗಳಂತಹ ಹಾನಿಕಾರಕ ಬಾಹ್ಯ ಅಂಶಗಳಿಂದ ರಕ್ಷಿಸಲ್ಪಡುತ್ತದೆ. ಜೊತೆಗೆ ಇದರ ಮೇಣದ ಪದರವು ಸಣ್ಣ ಗೀರುಗಳನ್ನು ತಡೆಯುವುದರ ಜೊತೆಗೆ ನಿಮ್ಮ ಕಾರಿಗೆ ಹೊಳಪು ನೀಡುತ್ತದೆ.

car-paint-protection-tips-ppf-ceramic-coating-wax

ಪೇಂಟ್ ಸೀಲಾಂಟ್: ಟೆಫ್ಲಾನ್ ಲೇಪನದಂತಹ ಉತ್ತಮ ಗುಣಮಟ್ಟದ ಪೇಂಟ್ ಸೀಲಾಂಟ್‌ಗಳನ್ನು ಬಳಸುವುದು ಫ್ಯಾಕ್ಟರಿ ಪೇಂಟ್ ಫಿನಿಶ್ ಅನ್ನು ರಕ್ಷಿಸಲು ಉತ್ತಮ ಪರಿಹಾರವಾಗಿದೆ. ಆದರೂ, PPF ಮತ್ತು ಸೆರಾಮಿಕ್ ಲೇಪನಕ್ಕಿಂತ ಭಿನ್ನವಾಗಿ, ಟೆಫ್ಲಾನ್ ಲೇಪನವು ಒಂದು ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ ಇರುತ್ತದೆ. ಹಾಗೆಯೇ ಇದು ತುಂಬಾ ಕಡಿಮೆ ವೆಚ್ಚದಾಯಕವಾಗಿರುತ್ತದೆ ಎಂಬುದನ್ನು ಗಮನಿಸಬೇಕು.

PPF: ಪಿಪಿಎಫ್ (ಪೇಂಟ್ ಪ್ರೊಟೆಕ್ಷನ್ ಫಿಲ್ಮ್) ಇದು ಮೂಲಭೂತವಾಗಿ ಕಾರ್ ಪೇಂಟ್ ಅನ್ನು ರಕ್ಷಿಸುವ ಪಾರದರ್ಶಕ ಚಿತ್ರವಾಗಿದೆ. PPF, ಹಾನಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ರಸ್ತೆ ಅವಶೇಷಗಳು ಮತ್ತು ಸಣ್ಣ ಕಲ್ಲುಗಳ ವಿರುದ್ಧ ಉತ್ತಮ ರಕ್ಷಣೆ ನೀಡುತ್ತದೆ. ಜೊತೆಗೆ ಕಂಪನಿಯಿಂದ ಬಂದ ಕಾರಿನ ಬಣ್ಣವನ್ನು ಸುಧೀರ್ಘ ಕಾಲ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

car-paint-protection-tips-ppf-ceramic-coating-wax

ಕಾರ್ ಕವರ್: ನಿಮ್ಮ ಕಾರಿನ ಬಣ್ಣವನ್ನು ರಕ್ಷಿಸಲು ಕಾರ್ ಕವರ್ ಅನ್ನು ಬಳಸುವುದು ಅತ್ಯಂತ ಒಳ್ಳೆ ವಿಧಾನವಾಗಿದೆ. ಸರಳವಾದ ಕಾರ್ ಕವರ್ ಕಾರನ್ನು ಮತ್ತು ಕಾರ್‌ಪೇಂಟ್ ಅನ್ನು ಬಾಹ್ಯ ಅಂಶಗಳಿಂದ ರಕ್ಷಿಸುತ್ತದೆ. ಅಲ್ಲದೆ, ನಿಮ್ಮ ಕಾರನ್ನು ದೀರ್ಘಕಾಲದವರೆಗೆ ಬಳಸದಿರಲು ನೀವು ಯೋಜಿಸುತ್ತಿದ್ದರೆ, ಕಾರ್ ಕವರ್ ಅನ್ನು ಬಳಸುವುದರಿಂದ ನಿಮ್ಮ ಕಾರನ್ನು ಧೂಳಿನಿಂದ ರಕ್ಷಿಸಬಹುದು. ಇದು ಎಲ್ಲರಿಗೂ ತಿಳಿದಿರುವ ವಿಷಯವಾದ್ರೂ ತುಂಬಾ ಪ್ರಭಾವಿ ಸಲಹೆಯಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಸ ವಾಹನಗಳನ್ನು ಖರೀದಿಸಿದ ಬಳಿಕ ಅದನ್ನು ಧೀರ್ಘ ಕಾಲ ಅಂದವಾಗಿ ಉಳಿಸಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕಾಲ ಕ್ರಮೇಣ ವಾತಾವರಣ ಸಮಸ್ಯೆಗಳಿಂದ ಯಾವುದೇ ವಾಹನವಾಗಲಿ ಅಂದವನ್ನು ಕಳೆದುಕೊಳ್ಳುತ್ತವೆ. ಇದನ್ನು ಕಂಡು ಮಾಲೀಕರು ಕೂಡ ಬೇಸರಗೊಂಡು ಅದರ ರಕ್ಷಣೆಯನ್ನು ಮರೆತುಬಿಡುತ್ತಾರೆ. ಆದ್ರೆ ಹಾಗಾಗಬಾರದು ನಾವು ನಮ್ಮ ವಾಹನಗಳನ್ನು ಕಾಪಾಡಿಕೊಂಡ್ರೆ, ಅವು ನಮ್ಮನ್ನು ಕಾಪಾಡುತ್ತವೆ ಎಂಬುದನ್ನು ಮರೆಯದಿರಿ.

car-paint-protection-tips-ppf-ceramic-coating-wax

ನಿಮಗೆ ವಾಹನ ಸಂಬಂಧಿ ವಿಷಯಗಳಲ್ಲಿ ಅನುಮಾನವಿದ್ದರೆ ಅಥವಾ ವಾಹನಗಳ ಸಂರಕ್ಷಣೆ ಹೇಗೆ ಎಂಬುದರ ಕುರಿತು ಮಾಹಿತಿ ಬೇಕಿದ್ದಲ್ಲಿ ಡ್ರೈವ್‌ಸ್ಪಾರ್ಕ್ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡಿ ನಿಮ್ಮ ಅನಿಸಿಕೆಗಳು ಮತ್ತು ಸಮಸ್ಯೆಗಳನ್ನು ತಿಳಿಸಿ ಉತ್ತರ ಪಡಿಯಬಹುದು. ಹೆಚ್ಚಿನ ವಿವರಗಳಿಗಾಗಿ ಸದಾ ನಮ್ಮ ಸಾಮಾಜಿಕ ಜಾಲತಾಣದ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

More from DriveSpark

Article Published On: Tuesday, October 17, 2023, 15:36 [IST]
English summary
Car paint protection tips ppf ceramic coating wax
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+