Best Gearing tips: ಹೆಚ್ಚಿನ ಮೈಲೇಜ್ ಪಡೆಯುವ ಅತ್ಯುತ್ತಮ ಗೇರಿಂಗ್ ವಿಧಾನಗಳು
ಭಾರತದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಸಾರ್ವಜನಿಕರು ವಾಹನಗಳನ್ನು ಕೊಳ್ಳಲು ಹಿಂದೆ ಮುಂದೆ ನೋಡುವ ಪರಿಸ್ಥಿತಿಯಿದೆ. ಆದರೂ ಅನಿವಾರ್ಯ ಪರಿಸ್ಥಿತಿಗಳಿಂದಾಗಿ ವಾಹನಗಳನ್ನು ಕೊಳ್ಳುವ ಹಲವರು ಇಂಧನವನ್ನು ಉಳಿಸುವ ಬಗ್ಗೆ ಉತ್ತಮ ಸಲಹೆ ಸಿಕ್ಕರೆ ಕಿವಿಗೊಟ್ಟು ಕೇಳುತ್ತಾರೆ ಅಲ್ಲವೇ? ಹಾಗಾಗಿಯೇ ಇಂಧನ ಉಳಿಸಲು ಅತ್ಯುತ್ತಮ ಗೇರಿಂಗ್ ವಿಧಾನಗಳನ್ನು ಇಲ್ಲಿ ತಿಳಿಸಿದ್ದೇವೆ.
ಅತ್ಯುತ್ತಮ ಇಂಧನ ಬಳಕೆಯ ರಹಸ್ಯವು ನಾವು ನಮ್ಮ ಕಾರು ಮತ್ತು ಅದರ ಗೇರ್ ಹಾಕುವ ವಿಧಾನದಲ್ಲಿದೆ. ನಿಮ್ಮ ಕಾರಿನ ಮೈಲೇಜ್ ಅನ್ನು ಹೇಗೆ ಹೆಚ್ಚಿಸಬೇಕೆಂಬುದನ್ನು ತಿಳಿಯುವುದಕ್ಕೂ ಮುನ್ನ ಇಂಧನ ಹೇಗೆ ಖರ್ಚಾಗುತ್ತದೆ ಎಂಬುದನ್ನು ತಿಳಿಯಬೇಕು. ಎಂಜಿನ್ ಸಿಲಿಂಡರ್‌ನೊಳಗಿನ ಪಿಸ್ಟನ್, ಕ್ರ್ಯಾಂಕ್ ಶಾಫ್ಟ್ ಒಳಗಿರುವ ಬೇರಿಂಗ್‌ಗಳು ಮತ್ತು ಗೇರ್ ವೀಲ್ ನಂತಹ ವಿವಿಧ ಭಾಗಗಳ ನಡುವಿನ ಘರ್ಷಣೆಯಲ್ಲಿ ನಮಗೆ ತಿಳಿಯದೇ ಬಹಳಷ್ಟು ಇಂಧನ ಕಳೆದುಹೋಗುತ್ತದೆ.

ಮ್ಯಾನುವಲ್ ಟ್ರಾನ್ಸ್ ಮಿಷನ್‌ನಲ್ಲಿ, ಕ್ಲಚ್ ಪೆಡಲ್ ಸಹಾಯದಿಂದ ಗೇರ್ ಅನ್ನು ಸುಗಮವಾಗಿ ಬದಲಾಯಿಸಬಹುದು. ಆದ್ದರಿಂದ ಗೇರ್ ವೀಲ್ ಘರ್ಷಣೆಯನ್ನು ತಪ್ಪಿಸಲು ಕ್ಲಚ್ ಅನ್ನು ಸರಿಯಾಗಿ ಅನ್ವಯಿಸುವುದು ಅತ್ಯವಶ್ಯಕ. ಕಾರು ಟಾಪ್ ಗೇರ್‌ನಲ್ಲಿ ಚಲಿಸಿದಾಗ, ಗೇರ್ ವೀಲ್‌ಗಳ ನಡುವೆ ಕಡಿಮೆ ಘರ್ಷಣೆ ಉಂಟಾಗುವುದರಿಂದ ನೀವು ಉತ್ತಮ ಮೈಲೇಜ್ ಪಡೆಯಬಹುದು. ಇದನ್ನು ಹೊರತುಪಡಿಸಿ ಇನ್ನು ಹೆಚ್ಚಿನ ಮೈಲೇಜ್ ಪಡೆಯಲು ನಿಮಗಿರುವ ಕೆಲವು ಸಂದೇಹಗಳಿಗೆ ಈ ಲೇಖನದಲ್ಲಿ ಉತ್ತರ ಸಿಗಲಿದೆ.
ಅತ್ಯುತ್ತಮ ಮೈಲೇಜ್‌ಗಾಗಿ RPM ಎಷ್ಟರಲ್ಲಿರಬೇಕು?:
1 ನೇ ಗೇರ್ ಹೆಚ್ಚು ಇಂಧನವನ್ನು ಬಳಸುತ್ತದೆ, ಆದರೆ ಕಡಿಮೆ ರೆವ್ ರೇಂಜ್ ಹೊಂದಿರುವ 5 ನೇ ಗೇರ್ ಕಡಿಮೆ ಬಳಸುತ್ತದೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಹೆಚ್ಚಿನ ಮೈಲೇಜ್‌ಗೆ ಸೂಕ್ತವಾದ ರೆವ್ ಶ್ರೇಣಿಯು 1500 ರಿಂದ 2000 RPM ವರೆಗೆ ಇರುತ್ತದೆ. ಟಾಪ್ ಗೇರ್‌ನಲ್ಲಿ ಎಂಜಿನ್ ಘಟಕಗಳ ನಡುವೆ ಕಡಿಮೆ ಘರ್ಷಣೆ ಇರುವುದರಿಂದ ಕಡಿಮೆ ಇಂಧನ ಬಳಸಿಕೊಂಡು ಹೆಚ್ಚಿನ ಮೈಲೇಜ್ ಹಿಂದಿರುಗಿಸುತ್ತದೆ.

ಯಾವ ಗೇರ್‌ನಲ್ಲಿ ಅತ್ಯುತ್ತಮ ಮೈಲೇಜ್:
ನಗರದಲ್ಲಿ ಡ್ರೈವಿಂಗ್ ಮಾಡುವುದು ಒಂದು ಕಲೆ, ಏಕೆಂದರೆ ಟ್ರಾಫಿಕ್‌ನಲ್ಲಿ ನೀವು ಇಂಧನವನ್ನು ಉಳಿಸಬೇಕಾಗುತ್ತದೆ. ನಮಗೆ ತಿಳಿದಿರುವಂತೆ ಟಾಪ್ ಗೇರ್ ಹೆಚ್ಚು ಮೈಲೇಜ್ ಪಡೆಯಲು ನಮಗೆ ಸಹಾಯ ಮಾಡುತ್ತದೆ, ಆದರೆ ನಗರದಲ್ಲಿ ಟಾಪ್ ಗೇರ್ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಕಡಿಮೆ ವೇಗದಲ್ಲಿ ಪ್ರಯತ್ನಿಸಿದರೂ ಸಹ, ಹೆಚ್ಚಿನ ಗೇರ್‌ಗಳು ಎಂಜಿನ್ ಲಗ್ಗಿಂಗ್ ಅನ್ನು ಪ್ರೇರೇಪಿಸಿ ಅಂತಿಮವಾಗಿ ನಿಮ್ಮ ವಾಹನವು ನಿಲ್ಲುತ್ತದೆ.
2ನೇ, 3ನೇ ಮತ್ತು 4ನೇ ಗೇರ್‌ಗಳ ನಡುವಿನ ಲ್ಯಾಗಿಂಗ್ ಅನ್ನು ಮೊದಲಿ ತಿಳಿದಿರಬೇಕು. 2 ನೇ ಗೇರ್ ಸ್ವಲ್ಪ ಎಳೆಯುವ ಗೇರ್ ಆಗಿರುವುದರಿಂದ ನೀವು ನಿಧಾನವಾಗಿ ಚಲಿಸಬೇಕಾದ ಸ್ಥಳಗಳಲ್ಲಿ ಇದು 1 ನೇ ಗೇರ್‌ಗಿಂತ ಉತ್ತಮವಾಗಿರುತ್ತದೆ. 3 ನೇ ಮತ್ತು 4 ನೇ ಗೇರ್ ಸ್ಥಳವನ್ನು ಮತ್ತು ನೀವು ಚಲಿಸುವ ವೇಗಕ್ಕೆ ಅನುಗುಣವಾಗಿ ಬದಲಾಯಿಸಬಹುದು. ಉದಾಹರಣೆಗೆ ನೀವು 4 ನೇ ಗೇರ್ ಅನ್ನು 30 ರಿಂದ 40 ಕಿ.ಮೀ ವೇಗದಲ್ಲಿ ತೊಡಗಿಸಿಕೊಳ್ಳಬಹುದು. ನೀವು 40 ಕಿ.ಮೀ ವೇಗ ತಲುಪಲು ಸಾಧ್ಯವಾದರೆ 5 ನೇ ಗೇರ್ ಅನ್ನು ತೊಡಗಿಸಿಕೊಳ್ಳಿ.

ಉತ್ತಮ ಮೈಲೇಜ್‌ಗಾಗಿ ಯಾವಾಗ ಗೇರ್ ಬದಲಾಯಿಸಬೇಕು?:
ಟ್ರಕ್‌ಗಳು ಗೇರ್‌ಗಳನ್ನು ಬದಲಾಯಿಸುವುದನ್ನು ನೀವು ನೋಡಿದ್ದರೆ ಗೇರ್‌ಗಳು ಬದಲಾಗುವ ವೇಗದ ಬಗ್ಗೆ ನಿಮಗೆ ತಿಳಿದಿರುತ್ತದೆ. ಗೇರ್‌ಗಳನ್ನು ಬೇಗನೇ ಬದಲಾಯಿಸಿದರೆ ಇಂಧನವೂ ಬೇಗನೇ ಕಾಲಿಯಾಗುತ್ತದೆ. ಹಾಗೆಂದು ತುಂಬಾ ತಡವಾಗಿ ಶಿಫ್ಟ್ ಮಾಡಿದರೆ ಅದು ಎಂಜಿನ್ ಲಗ್ಗಿಂಗ್ ಅನ್ನು ಪ್ರೇರೇಪಿಸುತ್ತದೆ. ಇದು ಕೂಡ ಹೆಚ್ಚಿನ ಪ್ರಮಾಣದ ಇಂಧನವನ್ನು ಸೇವಿಸುತ್ತದೆ. ಉತ್ತಮ ಮೈಲೇಜ್‌ಗಾಗಿ ನೀವು ಮಧ್ಯಮ ಶ್ರೇಣಿಯಲ್ಲಿ ಗೇರ್‌ಗಳನ್ನು ಬದಲಾಯಿಸಬೇಕು. ಇದು 1500 ರಿಂದ 2000 RPM ವರೆಗೆ ಇದ್ದರೆ ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








