ಹೆಲ್ಮೆಟ್ ನಿರ್ವಹಣೆಗೆ ಅತ್ಯುತ್ತಮ ಟಿಪ್ಸ್... ಬೇಸಿಗೆಯಲ್ಲಿ ಬಳಸುವಾಗ ಇರಲಿ ಎಚ್ಚರ!

ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಶೇ70 ರಷ್ಟು ಮಂದಿ ಹೆಲ್ಮೆಟ್ ಬಳಕೆದಾದರರು ಕೇವಲ ಅದನ್ನು ಪೊಲೀಸರ ಭಯದಿಂದ ಮಾತ್ರ ಬಳಸುತ್ತಿದ್ದಾರೆ. ಇವರೆಲ್ಲರೂ ಹೆಲ್ಮೆಟ್ ಸ್ವಚ್ಚತೆ ಕುರಿತು ಯೋಚಿಸುವುದೇ ಇಲ್ಲ. ನಿಜಕ್ಕೆ ಹೆಲ್ಮೆಟ್ ಕೊಳಕಿನಿಂದಿದ್ದರೇ ಹಲವು ಸಮಸ್ಯೆಗಳು ಎದುರಾಗುತ್ತವೆ.

ಕೂದಲು ಉದುರುವುದು, ಕೆರೆತ, ತಲೆ ನೋವಿನಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಈ ಸಮಸ್ಯೆಗಳನ್ನು ನಮ್ಮಲ್ಲಿ ಹಲವರು ಅನುಭವಿಸಿರುತ್ತಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಇವು ಕಾಡುವುದು ತುಂಬಾ ಸಾಮಾನ್ಯ. ಇದಕ್ಕೆ ಮೂಲ ಕಾರಣ ಹೆಲ್ಮೆಟ್ ಒಳಗೆ ಗಾಳಿ ಆಡದೇ ಬೆವರಿನ ಅಂಶ ಶೇಕರಣೆಗೊಳ್ಳುವುದು, ಇದರಿಂದಾಗಿ ಕೊಳಕು, ಕ್ರಿಮಿ-ಕೀಟಕಗಳಿಂದ ಅನೇಕ ಸಮಸ್ಯೆಗಳು ಕಾಡುತ್ತವೆ.

Best tips for helmet maintenance

ಹಾಗಾದ್ರೆ ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಕೇಳಿದ್ರೆ, ಇದೆ. ನಿಮ್ಮ ಹೆಲ್ಮೆಟ್‌ಗಳನ್ನು ತಾಜಾ ಮತ್ತು ಸ್ವಚ್ಛವಾಗಿಡಲು ಕೆಲವು ಸಲಹೆಗಳಿವೆ, ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸ್ವಚ್ಛ ಮತ್ತು ಆರೋಗ್ಯಕರವಾದ ಹೆಲ್ಮೆಟ್ ಅನ್ನು ನಿರ್ವಹಿಸಬಹುದು. ಇದು ನಿಮ್ಮ ರೈಡ್ ಅನುಭವವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸುರಕ್ಷತೆಗೂ ಹೆಚ್ಚಿನ ಆಧ್ಯತೆ ನಿಡಿದಂತಾಗುತ್ತದೆ.

ಬೆವರು ನಿರ್ವಹಣೆ: ಬೇಸಿಗೆಯಲ್ಲಿ ಎಂಥವರಿಗಾದ್ರೂ ಬೆವರು ಕಾಮನ್ ಸಮಸ್ಯೆ. ಅದರಲ್ಲೂ ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ಸವಾರಿ ಮಾಡುವಾಗ ಬೆವರು ಹೆಲ್ಮೆಟ್‌ನಲ್ಲಿ ಶೇಖರೆಣೆಯಾಗಿ ದುರ್ವಾಸನೆಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಕೂದಲನ್ನು ಮುಚ್ಚಲು ಕ್ಯಾಪ್ ಅಥವಾ ವಸ್ತ್ರವನ್ನು ಬಳಸುವುದು ಉತ್ತಮ. ಕೆಲವು ಹೆಲ್ಮೆಟ್‌ಗಳು ಅಂತರ್ನಿರ್ಮಿತವಾಗಿ ತೆಗೆಯಬಹುದಾದ ಮತ್ತು ತೊಳೆಯಬಹುದಾದ ಸ್ವೆಟ್-ವಿಕಿಂಗ್ ಲೈನರ್‌ಗಳೊಂದಿಗೆ ಬರುತ್ತವೆ. ಅವನ್ನು ಬಳಸಿದರೆ ಇನ್ನೂ ಉತ್ತಮ.

Best tips for helmet maintenance

ಹೆಚ್ಚಾಗಿ ಸ್ವಚ್ಛಗೊಳಿಸಿ: ಹೆಲ್ಮೆಟ್ ಅನ್ನು ಆಗ್ಗೆ ತೊಳೆಯುವುದು, ಅದರಲ್ಲಿನ ಧೂಳು, ಕೊಳಕನ್ನು ತೆಗೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ನಾವು ವರ್ಷಾನಿಗಟ್ಟಲೇ ಸ್ವಚ್ಚಗೊಳಿಸದೇ ಬಳಕೆ ಮಾಡುತ್ತೇವೆ. ವಿಶೇಷವಾಗಿ ಲಾಂಗ್ ರೈಡ್ ನಂತರ ಹೆಲ್ಮೆಟ್ ಒಳಗೆ ಮತ್ತು ಹೊರಗೆ ಬೆಚ್ಚಗಿನ ನೀರಿನ ಜೊತೆಗೆ ಸೋಪ್ ಅನ್ನು ಬಳಸಿ. ಬಟ್ಟೆ ಅಥವಾ ಸ್ಪಂಜಿನೊಂದಿಗೆ ಹೆಲ್ಮೆಟ್ ಅನ್ನು ನಿಧಾನವಾಗಿ ಸ್ಕ್ರಬ್ ಮಾಡಿದ್ರೆ ಬಹುತೇಕ ಹೆಲ್ಮೆಟ್ ಸ್ವಚ್ಚಗೊಳ್ಳುತ್ತದೆ.

ಇದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಪ್ರೇಗಳು ಮತ್ತು ಕ್ಲೀನರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ಹೆಲ್ಮೆಟ್ ತೆಗೆಯಬಹುದಾದ ಲೈನರ್‌ಗಳು ಮತ್ತು ಪ್ಯಾಡ್‌ಗಳನ್ನು ಹೊಂದಿದ್ದರೆ, ಅವುಗಳನ್ನು ತೆಗೆದು ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ. ನಿಮ್ಮ ಹೆಲ್ಮೆಟ್ ಅನ್ನು ಮತ್ತೆ ಜೋಡಿಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಒಣಗಿಸುವುದನ್ನು ಮರೆಯದಿರಿ. ತೇವಾಂಶವಿದ್ದು ಹಾಗೆಯೇ ಬಳಸಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Best tips for helmet maintenance

ಸೂರ್ಯನ ರಕ್ಷಣೆ: ನೇರ ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಹೆಲ್ಮೆಟ್ ಗಳು ನಿಧಾನವಾಗಿ ಹಾನಿಗೊಳಗಾಗುತ್ತವೆ. ಬೈಕ್ ಪಾರ್ಕ್‌ ಮಾಡಿ ಹೆಲ್ಮೆಟ್ ಅನ್ನು ಹ್ಯಾಂಡಲ್ ಬಾರ್‌ಗೆ ಬಿಟ್ಟೋಗುವ ಬದಲು ಜೊತೆಗೆ ಕೊಂಡೊಯ್ದರೆ ಉತ್ತಮ. ಬಳಕೆಯಲ್ಲಿ ಇಲ್ಲದಿದ್ದಾಗ ಅದನ್ನು ನಿಮ್ಮ ಮೋಟಾರ್‌ಸೈಕಲ್‌ನ ಸೀಟಿನ ಅಡಿಯಲ್ಲಿ ಅಥವಾ ಮನೆಯಲ್ಲಿಟ್ಟುಕೊಂಡರೆ ಸಂಭವನೀಯ ಹಾನಿ ತಪ್ಪಿಸಬಹುದು.

ವಾಸನೆ ನಿಯಂತ್ರಣ: ನಿಮ್ಮ ಹೆಲ್ಮೆಟ್ ದುರ್ವಾಸನೆ ಹೊಂದಿದ್ದರೇ ಹೆಲ್ಮೆಟ್ ಡಿಯೋಡರೈಸರ್ ಅನ್ನು ಬಳಸಬಹುದು, ಇದು ಕೇವಲ ಆಕ್ಷಣಕ್ಕೆ ಮಾತ್ರ. ಆದ್ರೆ ವಾಸನೆ ಇದ್ದಲ್ಲಿ ಅದನ್ನು ಕಂಡಿತ ಸ್ವಚ್ಚಗೊಳಿಸುವುದು ತುಂಬಾ ಮುಖ್ಯ. ಮೇಲೆ ತಿಳಿಸಿದ ವಿಧಾನದಲ್ಲಿ ಹೆಲ್ಮೆಟ್ ತೊಳೆದು ಇನ್ನೊಂದು ಬಾರಿ ಸ್ಪ್ರೇ ಹೊಡೆದು ನಿರ್ವಹಿಸುವ ಮೂಲಕ ಹೆಲ್ಮೆಟ್‌ಗೆ ನಿಂದ ಯಾವುದೇ ಸಮಸ್ಯೆಗಳನ್ನು ತಪ್ಪಿಸಬಹುದು.

ನಿಮ್ಮ ಹೆಲ್ಮೆಟ್‌ನಲ್ಲಿ ಇರುವ ಕೆಲವು ದ್ವಾರಗಳಲ್ಲಿ ಸಂಗ್ರಹವಾದ ಧೂಳು ಅಥವಾ ಕೀಟಗಳನ್ನು ತೆಗೆದುಹಾಕಿ. ಕೊಳೆಯನ್ನು ಸ್ವಚ್ಚಗೊಳಿಸುವ ಮೂಲಕ ಹೆಲ್ಮೆಟ್‌ನೊಳಗೆ ಸರಿಯಾದ ಗಾಳಿಯ ಹರಿವನ್ನು ತರಿಸಬಹುದು. ಮೃದುವಾದ ಬ್ರಷ್ ಬಳಸಿ ಅದರ ಗಾಳಿಯ ದ್ವಾರಗಲನ್ನು ಸ್ವಚ್ಚಗೊಳಿಸುವುದು ಉತ್ತಮ. ಇದು ಕೂಡ ವಾಸನೆಯ ಶೇಖರಣೆಯನ್ನು ತಡೆದು ಹೊರ ತಳ್ಳುತ್ತದೆ.

More from DriveSpark

Article Published On: Tuesday, May 30, 2023, 12:53 [IST]
English summary
Best tips for helmet maintenance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+