Car care tips: ಕಾರನ್ನು ಸದಾ ಸ್ವಚ್ಛವಾಗಿಡಲು ಸಹಕರಿಸುವ ಅತ್ಯಂದ ಅಗ್ಗದ ಅಕ್ಸೆಸೊರಿಗಳು
ನೀವು ಹೊಸ ಕಾರು ಅಥವಾ ಸೆಕೆಂಡ್ ಹ್ಯಾಂಡ್ ಕಾರು ಹೊಂದಿದ್ದರೂ, ನಿಮ್ಮ ಕಾರನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವುದು ನಿಮ್ಮ ಕರ್ತವ್ಯ. ಕಾರು ಅಂದವಾಗಿದ್ದರೆ ನೋಡುಗರಿಗೂ ಚಂದ ನಮ್ಮ ಮನಸ್ಸಿಗೂ ಮುದ ನೀಡುತ್ತದೆ. ಅಂದಹಾಗೆ, ನಿಮ್ಮ ಕಾರನ್ನು ಸ್ವಚ್ಛವಾಗಿಡಲು ಟಾಪ್ 5 ಕಾರು ಬಿಡಿಭಾಗಗಳ ಪಟ್ಟಿ ಇಲ್ಲಿದೆ.
ಕಾರ್ ವ್ಯಾಕ್ಸ್: ಕಾರನ್ನು ತೊಳೆದ ನಂತರ ಕಾರ್ ವ್ಯಾಕ್ಸ್ ಅನ್ನು ಅನ್ವಯಿಸುವುದರಿಂದ ಬಾಡಿ ಪ್ಯಾನೆಲ್‌ಗಳಿಗೆ ಕೊಳಕು ಅಂಟಿಕೊಳ್ಳುವುದನ್ನು ತಪ್ಪಿಸಬಹುದು. ಇದು ಕಾರನ್ನು ಸ್ವಚ್ಛಗೊಳಿಸುವುದನ್ನು ತುಂಬಾ ಸುಲಭಗೊಳಿಸುತ್ತದೆ. ಅಲ್ಲದೇ ಕಾರನ್ನು ವ್ಯಾಕ್ಸಿಂಗ್ ಮಾಡುವುದರಿಂದ ಅದರ ಮೂಲ ಬಣ್ಣವನ್ನು ಸಾಮಾನ್ಯಕ್ಕಿಂತ ಹೆಚ್ಚಿನ ಕಾಲ ರಕ್ಷಿಸುತ್ತದೆ.

ವ್ಯಾಕ್ಯೂಮ್ ಕ್ಲೀನರ್: ಕಾರು ಹೊಂದಿರುವ ಪ್ರತಿಯೊಬ್ಬರು ಮಿನಿ ವ್ಯಾಕ್ಯೂಮ್ ಕ್ಲೀನರ್ ಅನ್ನು ಬಳಸಬೇಕು. ಇದರಿಂದ ಕಾರಿನೊಳಗೆ ಯಾವುದೇ ಸಡಿಲವಾದ ಕೊಳೆಯನ್ನು ಸುಲಭವಾಗಿ ತೆಗೆಯಬಹುದು. ಕಾರ್ಪೆಟ್ ಅಥವಾ ಆಂತರಿಕ ಟ್ರಿಮ್‌ಗೆ ಅಂಟಿಕೊಳ್ಳುವ ಕೊಳೆ ನಿರ್ಮೂಲಿಸಲು ನೀವು ಬ್ರಷ್‌ಗಳನ್ನು ಬಳಸಿದರೂ, ಉಳಿದಂತೆ ಮಿಕ್ಕೆಲ್ಲಾ ಧೂಳು, ಕೊಳೆಯನ್ನು ವ್ಯಾಕ್ಯೂಮ್ ಕ್ಲೀನರ್ ಸುಲಭವಾಗಿ ಹೀರಿಕೊಳ್ಳುತ್ತದೆ.
ಮೈಕ್ರೋಫೈಬರ್ ಬಟ್ಟೆ: ಮೈಕ್ರೋಫೈಬರ್ ಬಟ್ಟೆ ಇತರ ಬಟ್ಟೆಗಳಿಗೆ ಹೋಲಿಸಿದರೆ ಹೆಚ್ಚಿನ ಮೇಲ್ಮೈ ಪ್ರದೇಶವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಹೆಚ್ಚಿನ ಮೇಲ್ಮೈ ವಿಸ್ತೀರ್ಣವು ಹೆಚ್ಚಿನ ಕೊಳೆಯನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಮೈಕ್ರೋಫೈಬರ್ ಬಟ್ಟೆಯು ಸುಲಭವಾಗಿ ಸ್ವಚ್ಛಗೊಳಿಸಲು ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದ್ದರಿಂದ ಕಾರುಗಳಿಗೆ ಇದು ತುಂಬಾ ಉಪಯುಕ್ತ.

ಕಾರ್ ಡಸ್ಟ್ ಬಿನ್: ನಿಮ್ಮ ಕಾರಿನಲ್ಲಿ ಕಸದ ಬುಟ್ಟಿಯನ್ನು ಹೊಂದುವುದು ತುಂಬಾ ಮುಖ್ಯ. ಏಕೆಂದರೆ ಇದು ಕಸವನ್ನು ಸುರಕ್ಷಿತವಾಗಿರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಕಾರನ್ನು ಕೊಳಕು ಮಾಡದೆ ಕಸವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಇಲ್ಲದಿದ್ದರೇ ನಿಮಗೆ ಕಸವನ್ನು ಹಾಕಲು ಜಾಗವಿಲ್ಲದೆ ಕಾರಿನಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಅಭ್ಯಾಸಕ್ಕೆ ಕಾರಣವಾಗಬಹುದು.
ಮಡ್ ಫ್ಲಾಪ್: ಮಡ್ ಫ್ಲಾಪ್ ಸರಳವಾದ ಪರಿಕರದಂತೆ ತೋರುತ್ತದೆಯಾದರೂ, ನಿಮ್ಮ ಕಾರನ್ನು ಸ್ವಚ್ಛವಾಗಿಡಲು ಇದು ತುಂಬಾ ಉಪಯುಕ್ತವಾಗಿದೆ. ಈ ಸರಳ ಮತ್ತು ಕೈಗೆಟುಕುವ ಪರಿಕರವು ಬದಿಗಳಲ್ಲಿ ಮಣ್ಣನಿಂದ ಕಾರನ್ನು ರಕ್ಷಿಸುವುದರಿಂದ ನಿಮಗೆ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸರಳಗೊಳಿಸುತ್ತದೆ. ಆದ್ದರಿಂದ ಇದು ಕೂಡ ಅತ್ಯಂತ ಪ್ರಮುಖ ಸಾಧನವಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಕಾರನ್ನು ಅದರ ದೀರ್ಘಾಯುಷ್ಯಕ್ಕಾಗಿ ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅಲ್ಲದೆ, ಕ್ಲೀನ್ ಕಾರ್ ಒಟ್ಟಾರೆ ಚಾಲನಾ ಅನುಭವವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಜೊತೆಗೆ ನಿಮ್ಮ ಕಾರಿನ ಅಂದವನ್ನು ಹೆಚ್ಚಿಸಿ ರಸ್ತೆಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಪ್ರತಿಯೊಬ್ಬ ಮಾಲೀಕನಿಗೂ ಕೂಡ ಹೀಗೆ ಮೇನ್ಟೇನ್ ಮಾಡುವ ಆಸೆಯಿದ್ದರೂ ಸಮಯವಿಲ್ಲದ ಕಾರಣ ನಿರ್ಲಕ್ಷ ತೋರುತ್ತಾರೆ. ಆದರೆ ಮೇಲೆ ತಿಳಿಸಿರುವ ಈ ಸಲಹೆಗಳು ನಿಮಗೆ ಸುಲಭವಾಗಿ ಸ್ವಚ್ಚಗೊಳಿಸಲು ಸಹಕರಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








