ಮೊದಲ ಡ್ರೈವಿಂಗ್: ಫಸ್ಟ್ ನೈಟಿನಷ್ಟೇ ಥ್ರಿಲ್ ಕಣೋ

Car Driving Tips to Beginners
ಮೊದಲ ಬಾರಿಗೆ ಮಗು ಅಂಬೆಗಾಲಿಡಲು ಕಲಿತಾಗ ಅಮ್ಮನಿಗೆ ಹಿಗ್ಗು. ಮೊದಲ ದಿನ ಶಾಲೆ ಮೆಟ್ಟಿಲು ಹತ್ತುವಾಗ ರಚ್ಚೆ ಹಿಡಿವ ಮಗು. ಕೆಲವೇ ದಿನಗಳಲ್ಲಿ ಶಾಲೆಗೆ ಹೊಂದಿಕೊಂಡು ನಗುವ ಮಗು. ಮೊದಲ ಬಾರಿ ಸಾರಿಯುಟ್ಟದ್ದು, ಐಲವ್ ಯು ಅಂದದ್ದು, ಕಿಸ್ ಕೊಟ್ಟದ್ದು, ಮೊದಲ ರಾತ್ರಿ...

ಮೊದಲು ಎಲ್ಲವೂ ಖುಷಿ. ಅದರ ನೆನಪೇ ಪುಳಕ. ಹೀಗಾಗಿ ಎಲ್ಲರಲ್ಲೂ ಮೊದಲ ಅನುಭವಗಳ ಖಜಾನೆಯೇ ಇರುತ್ತದೆ. ಮೊದಲ ನೆನಪನ್ನು ನೆನಪಿಸಿಕೊಳ್ಳುವುದೇ ಹಿಗ್ಗು.

ಇದೇ ರೀತಿ ಹೆಚ್ಚಿನವರ ಮನದಲ್ಲಿ ಮೊದಲು ಡ್ರೈವಿಂಗ್ ಕಲಿತದ್ದು ಅಚ್ಚಳಿಯದ ನೆನಪಾಗಿ ಉಳಿಯುತ್ತದೆ. ಮೊದಲ ಬಾರಿಗೆ ಅಪ್ಪ ಕಾರಿನ ಕಿಲಿಕೈ ಕೊಟ್ಟಾಗ ಉಂಟಾದ ಪುಳಕ ಮರೆಯುವಂತದ್ದಲ್ಲ.

ಕಾರು ಕಲಿತ ಕೂಡಲೇ ಹೆಚ್ಚಿನವರ ಬದುಕಿನ ಶೈಲಿಯೇ ಬದಲಾಗುತ್ತದೆ. ಮನದಲ್ಲಿ ಸಾವಿರಾರು ಅಶ್ವಶಕ್ತಿ ಅಥವಾ ಹಾರ್ಸ್ ಪವರ್ ಉಂಟಾಗುತ್ತದೆ. ಕಾರು ಕಲಿತ ನಂತರ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡವರು ಇದ್ದಾರೆ.

ಮೊದಲು ಕಾಲೇಜಿನ ಮೆಟ್ಟಿಲು ಹತ್ತುವಾಗ ಏನೋ ಭಯ. ಮೊದಲ ರಾತ್ರಿಯ ಮಂಚದಲ್ಲಿ ಕುಳಿತಾಗಲೂ ಮನದಲ್ಲಿ ತಲ್ಲಣ. ಆದರೂ ಮನಸ್ಸು ಖುಷಿ ಪಡುತ್ತದೆ. ಒಂದು ನೆನಪು ಯಾವತ್ತಿಗೂ ಬೆಚ್ಚಗಿರುತ್ತದೆ.

ಮೊದಲು ಡ್ರೈವಿಂಗ್ ಕಲಿಯುವುದನ್ನು ಯಾವತ್ತೂ ಎಂಜಾಯ್ ಮಾಡಿ. ಆದರೆ ಸುರಕ್ಷತೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ ಡ್ರೈವಿಂಗ್ ಕಲಿಕೆಯ ಲಕ್ಷಣ. ಆರಂಭಿಕರಿಗೆ ಕಾರು ಚಾಲನೆ ಮಾಡಲು ಒಂದಿಷ್ಟು ಸಲಹೆಗಳು ಇಲ್ಲಿವೆ. ಇದು ಕನ್ನಡ ಡ್ರೈವ್ ಸ್ಪಾರ್ಕ್ ವಿಶೇಷ.

ಎಲ್ಲದಕ್ಕೂ ಸಿದ್ದರಾಗುವುದು ಮುಖ್ಯ:
ಮೊದಲು ಕಾಲೇಜಿನ ಮೆಟ್ಟಿಲು ಹತ್ತುವಾಗ ಎಷ್ಟು ಬಾರಿ ಕನ್ನಡಿ ನೋಡಿಕೊಂಡಿದ್ದಿರೋ ಯಾರಿಗೊತ್ತು. ಆದರೆ ಕಾರು ಕಲಿತ ಆರಂಭಿಕ ದಿನಗಳಲ್ಲಿ ಕಾರು ಚಾಲನೆ ಮಾಡುವ ಮುನ್ನ ಸಿದ್ದರಾಗುವುದು ಮುಖ್ಯ.

ಅಂದರೆ ಸೀಟು ಬೆಲ್ಟ್ ಹಾಕಿಕೊಳ್ಳುವುದು, ಕಾರಿನ ಸೀಟು ಸೇರಿದಂತೆ ಹಲವು ಫೀಚರುಗಳನ್ನು ಹೊಂದಾಣಿಕೆ ಮಾಡುವುದು, ಮಿರರ್ ಹೊಂದಾಣಿಕೆ, ಸೀಟ್ ಹೊಂದಾಣಿಕೆ ಇತ್ಯಾದಿಗಳನ್ನು ಮಾಡಲು ಮರೆಯಬೇಡಿ.

ಸಂಚಾರಿ ಸೂಚನೆಗಳ ಕುರಿತ ಎಚ್ಚರ: ನಿಜ ಹೇಳಬೇಕೆಂದರೆ ಕಾರು ಕಲಿತ ಕೂಡಲೇ ಹೆಚ್ಚಿನವರಿಗೆ ಸಿಗ್ನಲ್ ಸೂಚನೆಗಳ ಅರಿವಿರುತ್ತದೆ. ಕೆಲವೇ ದಿನಗಳಲ್ಲಿ ಮರೆಯುತ್ತಾರೆ. ಆರಂಭಿಕವಾಗಿ ಕಾರು ಕಲಿತವರು ರಸ್ತೆ ಮತ್ತು ನಗರಗಳಲ್ಲಿರುವ ಸಿಗ್ನಲ್, ಸಿಂಬಲ್, ಸಂಚಾರಿ ಸೂಚನೆ ಇತ್ಯಾದಿಗಳ ಕುರಿತು ಸಂಪೂರ್ಣವಾಗಿ ಅರಿತುಕೊಳ್ಳಬೇಕು.

ಇಂಡಿಕೇಟರ್: ಇಂಡಿಕೇಟರ್ ಅಂತ್ಯಂತ ಪ್ರಮುಖ ಅಂಶ. ನೀವು ಯಾವಾಗ ಕಾರನ್ನು ತಿರುಗಿಸುವಿರಿ, ಯಾವ ಕಡೆಗೆ ತಿರುಗಿಸುವಿರಿ, ಯಾವಾಗ ನಿಲ್ಲಿಸುವಿರಿ ಇತ್ಯಾದಿಗಳು ನಿಮ್ಮ ಸುತ್ತ ಮುತ್ತ ಇರುವ ವಾಹನದವರಿಗೆ ಗೊತ್ತಾಗಬೇಕು. ಹೀಗಾಗಿ ಎಲ್ಲೇಲ್ಲಿ ಯಾವೆಲ್ಲ ಇಂಡಿಕೇಟರ್ ಬಳಸಬೇಕು ಅದನ್ನು ಬಳಸಿ. ಹೆಚ್ಚಿನ ಅಪಘಾತಗಳು ಇಂತಹ ಸಣ್ಣ ತಪ್ಪುಗಳಿಂದಲೇ ನಡೆಯುತ್ತದೆ.

ಸ್ವಲ್ಪ ಸೌಂಡ್ ಕಡಿಮೆ ಮಾಡು:
ಹೊಸ ಕಾರು ಕೈಯಲ್ಲಿದ್ದಾಗ ಪ್ರಮುಖವಾಗಿ ಹರೆಯದವರಿಗೆ ಅತ್ಯಧಿಕ ವಾಲ್ಯೂಂನಲ್ಲಿ ಮ್ಯೂಸಿಕ್ ಪ್ಲೇ ಮಾಡುವ ಹುಚ್ಚಿದೆ. ಇದು ನಿಜಕ್ಕೂ ಒಳ್ಳೆಯದಲ್ಲ. ನೀವು ಕಾರಿನೊಳಗೆ ಜೋರಾಗಿ ಮ್ಯೂಸಿಕ್ ಕೇಳುತ್ತಿದ್ದರೆ, ಸುತ್ತಮುತ್ತಲಿನ ಹಾರ್ನ್, ಅಲಾರಂ ನಿಮಗೆ ಕೇಳದು.

ಆರಂಭಿಕ ವಾಹನ ಚಾಲನೆ ಮಾಡುವರು ಸಂಗೀತ ಕೇಳುತ್ತ ಡ್ರೈವಿಂಗ್ ಮಾಡದಿರುವುದು ಒಳ್ಳೆಯದು. ಕೇಳಲೇ ಬೇಕಿದ್ದರೆ ವಾಲ್ಯೂಂ ಕಡಿಮೆ ಮಾಡಿ ಕೇಳಿ.

ಆರಂಭಿಕವಾಗಿ ಕಾರು ಚಲಾಯಿಸುವ ಚಾಲಕರು ಸುರಕ್ಷತೆ, ಸಿಗ್ನಲ್, ಸಂಚಾರಿ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸಿ. ಇದು ನಿಮ್ಮ ಜೀವನ ಶೈಲಿಗೆ ಉತ್ತಮ ಆರಂಭವಾಗಲಿ. ಹ್ಯಾಪಿ ಡ್ರೈವಿಂಗ್. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Monday, November 28, 2011, 10:22 [IST]
English summary
Driving tips to beginners. In life there is many unforgettable moments. First time entering college, First Night, First Kiss all is unforgettable. And many people's life first driving a car also unforgettable moment. Here is some car driving tips, guides, advises for beginners. Happy Journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+