ಈ ದಿನನಿತ್ಯ ಬಳಕೆ ವಸ್ತುಗಳಿಂದ ನಿಮ್ಮ ಕಾರನ್ನು ಸ್ವಚ್ಛಗೊಳಿಸಿರಿ!
ಇಂಧನ ದರ ಏರಿಕೆ, ರುಪಾಯಿ ಅಪಮೌಲ್ಯ, ಹಣದುಬ್ಬರ ಸೇರಿದಂತೆ ಹಲವಾರು ಕಾರಣಗಳಿಂದಾಗಿ ದಿನದಿತ್ಯ ಬಳಕೆ ವಸ್ತುಗಳ ದರ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಹಾಗಿರುವಾಗ ಕಾರಿಗೆ ತುಂಬಿಸಲು ಪೆಟ್ರೋಲ್ ಸಿಗುತ್ತಿಲ್ಲ ಇನ್ನು ಕಾರು ಸ್ವಚ್ಛಗೊಳಿಸಲು ವಿಚಾರ ಎಲ್ಲಿಂದ ಬಂತು ಎಂದು ಮರು ಪ್ರಶ್ನೆ ಹಾಕದಿರಿ!
ಬಜಾರ್‌ನಲ್ಲಿ ಕಾರು ತೊಳೆಯಲು ಹಲವು ವಿವಿಧ ಸಾಮಾಗ್ರಿಗಳು ದೊರೆಯುತ್ತದೆ ನಿಜ. ಆದರೆ ಇಲ್ಲಿ ನಾವು ಸೂಚಿಸಲಿರುವ ಸಿಂಪಲ್ ವಿಷಯವನ್ನು ಒಮ್ಮೆ ಓದಿ ನೋಡಿ. ನಿಮ್ಮ ಬಳಿಯಿರುವ ಕಾರನ್ನು ಸಿಂಪಲಾಗಿ ಲಕಲಕ ಹೊಳೆಯುವಂತೆ ಮಾಡಬಹುದು.
ದುಡ್ಡಿದ್ದರೆ ಪ್ರತಿಯೊಬ್ಬನಿಗೂ ಕಾರು ಮಾಲಿಕರಾಗುವುದು ಸುಲಭದ ವಿಚಾರ. ಅದೇ ಕಾರು ನಿರ್ವಹಣೆ ಮಾಡುವುದು ಅಥವಾ ವರ್ಷಗಟ್ಟಲೆ ತಮ್ಮ ಕಾರನ್ನು ಹೊಸತಾಗಿಸಿರುವುದಕ್ಕೆ ಸ್ವಲ್ಪ ಬುದ್ಧಿ ಖರ್ಚು ಮಾಡಲೇಬೇಕಾಗುತ್ತದೆ. ಇದಕ್ಕಿಂತಲೂ ಮಿಗಿಲಾಗಿ ನನ್ನ ಕಾರು ನನ್ನ ಆಸ್ತಿಯೆಂಬ ಭಾವನೆ ಮೊದಲು ಮೂಡಬೇಕು.

ಹಾಗಿದ್ದರೆ ಬನ್ನಿ ಈ ದಿನನಿತ್ಯ ಬಳಕೆ ವಸ್ತುಗಳಿಂದ ನಿಮ್ಮ ಕಾರುಗಳನ್ನು ಸ್ವಚ್ಛವಾಗಿಡಿರಿ...

ಹೇರ್ ಕಂಡಿಷನರ್
ಹೇರ್ ಕಂಡಿಷನರ್ ನಿಮ್ಮ ಕೂದಲಿನ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಕಾರಿನ ಸ್ವಚ್ಛತೆ ಕಾಪಾಡಲು ನೆರವಾಗುತ್ತದೆ. ಇದನ್ನು ಕಾರಿಗೆ ನಯವಾಗಿ ಹಚ್ಚಿದ್ದರೆ ಹೊಳಪು ಬರಲು ಸಾಧ್ಯ. ಆದರೆ ಗಟ್ಟಿಯಾಗಿ ಉಜ್ಜುವ ಪ್ರಯತ್ನಕ್ಕೆ ಮುಂದಾಗಿ ಕಾರಿಗೆ ಗೀಚು ಬೀಳದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ಕೋಲಾ ಪಾನೀಯ
ಬೇಸಿಗೆ ಸಮಯದಲ್ಲಿ ನಿಮ್ಮ ಬಾಯರಿಕೆ ನಿವಾರಿಸುವ ತಂಪು ಪಾನೀಯವಾದ ಕೋಲಾವನ್ನು ನಿಮ್ಮ ಕಾರಿನ ವಿಂಡ್‌ಶೀಲ್ಡ್‌ನಲ್ಲಿ ಪ್ರಯೋಗಿಸಿ ನೋಡಿ. ಖಂಡಿತವಾಗಿಯೂ ನಿಮ್ಮ ವಿಂಡ್ ಶೀಲ್ಡ್‌ಗೆ ಹೊಸ ಹೊಳಪು ಬರಲಿದೆ.

ವೋಡ್ಕಾ
ಇದೇನಿದು ವೋಡ್ಕಾ ಖರೀದಿಸಲು ಪ್ರೇರೇಸುತ್ತೀರಾ ಎಂದು ತಪ್ಪು ಅರ್ಥ ಮಾಡಿಕೊಳ್ಳದಿರಿ. ಎಲ್ಲ ಕಾರಿನ ವೈಪರ್‌ನಲ್ಲೂ ನೀರು ತುಂಬಿಡಲು ಒಂದು ರಿಸರ್ವ್ ವಯರ್ ಎಂಬ ಸಣ್ಣ ನೀರಿನ ಟ್ಯಾಂಕ್ ವ್ಯವಸ್ಥೆ ಹೊಂದಿರುತ್ತದೆ. ಇದರಲ್ಲಿ ಮಾಮೂಲಿಯಂತೆ ನೀರು ಆಳವಡಿಸುವ ಬದಲು 4 ಕಪ್ ನೀರಿನ ಜೊತೆ, 3 ಕಪ್ ವೋಡ್ಕಾ ಮತ್ತು 2 ಟಿ ಚಮಚ ಲಿಕ್ವಿಡ್ ಡಿರ್ಟೆಂಜಟ್ ಮಿಕ್ಸ್ ಮಾಡಿ ಸೇರಿಸಿರಿ. ಬಳಿಕ ಇದನ್ನು ವೈಪರ್ ಟ್ಯಾಂಕ್‌ನಲ್ಲಿ ಆಳವಡಿಸಿರಿ. ಕಾರಿನ ಗಾಜಿಗೆ ಇದನ್ನು ಸಿಂಪಡಿಸುವುದರಿಂದ ಇನ್ನಷ್ಟು ಹೊಳಪು ಬರಲಿದೆ. ಆದರೆ ವೋಡ್ಕಾ ಸ್ವಲ್ಪ ದುಬಾರಿಯಲ್ಲವೇ?

ವಿಂಡೋ ಕ್ಲೀನರ್
ಕಾರಿನ ಅಂದತೆಯನ್ನು ಹೆಚ್ಚಿಸುವುದಲ್ಲಿ ಅದರ ಹೆಡ್‌ಲೈಟ್ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ ನಿಮ್ಮ ಮನೆಯಲ್ಲಿರುವ ವಿಂಡೋ ಕ್ಲೀನರನ್ನು ಸ್ವಲ್ಪ ಕಾರಿನ ಹೆಡ್‌ಲೈಟ್‌ಗೆ ಸಿಂಪಡಿಸಿ ನೋಡಿರಿ..ಇದು ನಿಮ್ಮ ಹೆಡ್‌ಲೈಟ್ ಪಳಪಳನೆ ಹೊಳೆಯುವಂತೆ ಮಾಡಲಿದೆ.

ಬೇಬಿ ವೈಪ್ಸ್
ಇದನ್ನು ಕೇಳಿ ನಿಮ್ಮಲ್ಲಿ ಆಶ್ಚರ್ಯವುಂಟಾಗಬಹುದು. ಅಷ್ಟಕ್ಕೂ ಮಗುವಿಗೆ ಬಳಸುವ ಬಟ್ಟೆಗಳಿಗೂ ಕಾರಿಗೂ ಏನೂ ಸಂಬಂಧವಿದೆ ಅಂತಾ? ಆದರೆ ಇದು ಬಹಳ ಸುಲಭ ವಿಧಾನವಾಗಿದ್ದು, ಇದರಿಂದ ಕಾರಿನ ಗಾಜಿನ ಸ್ವಚ್ಛತೆಯನ್ನು ಕಾಪಾಡಬಹುದು. ಇದು ತುಂಬಾನೇ ಸಾಫ್ಟ್ ಆಗಿರುವುದರಿಂದ ಕಾರಿನ ಗಾಜುಗಳಿಗೆ ಗೀಚು ಬೀಳದಂತೆ ನೋಡಿಕೊಳ್ಳಬೇಕಾಗುತ್ತದೆ.

ವೈಪರ್ ಬ್ಲೇಡ್ ಕ್ಲೀನಿಂಗ್
ಒಂದು ಕಪ್ ನೀರಿನಲ್ಲಿ 1/4ರಷ್ಟು ಅಮೋನಿಯಂ ಪೌಡರ್ ಮಿಕ್ಸ್ ಮಾಡಿ ಹತ್ತಿ ಬಟ್ಟೆಯಲ್ಲಿ ನಯವಾಗಿ ಉಜ್ಜಿರಿ. ಈ ಮುಖಾಂತರ ವೈಪರ್ ಬ್ಲೇಡ್ ಸ್ವಚ್ಛಗೊಳಿಸಬಹುದು.

ಬೇಕಿಂಗ್ ಸೋಡಾ
ಅಡುಗೆ ಚವಟು ನಿಮ್ಮ ಮನೆಗಳಲ್ಲಿ ಸುಲಭವಾಗಿ ದೊರಕುವ ಪದಾರ್ಥ. 1/4ರಷ್ಟು ಕಪ್ ಬೇಕಿಂಗ್ ಸೋಡಾ ಹಾಗೂ 1/4ರಷ್ಟು ಕಪ್ ಪಾತ್ರೆ ತೊಳೆಯುವ ಪುಡಿಯನ್ನು ಒಂದು ಬಾಟಲಿ ನೀರಿನಲ್ಲಿ ಮಿಶ್ರಣ ಮಾಡಿರಿ. ಇದು ರೆಡಿಯಾದ ಕಾರು ಕ್ಲೀನರ್ ಆಗಿದ್ದು, ಯಾವಾಗ ಬೇಕಾದರೂ ಕಾರು ತೊಳೆಯಲು ಬಳಸಬಹುದಾಗಿದೆ.

ವಿನೇಗರ್
ಇದು ಕಾರಿನ ಸೀಟು ಕ್ಲೀನ್ ಮಾಡಲು ಬಳಸಬಹುದಾಗಿದೆ. ಇದು ಸೀಟಿನಲ್ಲಿರುವ ಧೂಳಿನ ಕಣ ನಿವಾರಿಸಲು ನೆರವಾಗಲಿದೆ.

ಬಿಸಿ ಕಾರನ್ನು ತಕ್ಷಣ ಸ್ವಚ್ಛಗೊಳಿಸದಿರಿ...
ಹಾಗೊಂದು ವೇಳೆ ಡ್ರೈವ್ ಮಾಡಿ ಬಂದ ತಕ್ಷಣವೇ ಕಾರನ್ನು ವಾಶ್ ಮಾಡದಿರಿ. ಸ್ವಲ್ಪ ಹೊತ್ತು ಕಳೆದ ಬಳಿಕ ಸ್ವಲ್ಪ ಸೂರ್ಯ ಬೆಳಕು ಬಿಳುವ ಪ್ರದೇಶದಲ್ಲಿ ಪಾರ್ಕ್ ಮಾಡಿದ ಬಳಿಕ ನಿಮ್ಮ ಸ್ವಚ್ಛತೆ ಕಾರ್ಯಕ್ರಮ ಆರಂಭಿಸಿ...

ಈ ರೀತಿಯಾದ ಸಿಂಪಲ್ ಟಿಪ್ಸ್‌ಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮುಖಾಂತರ ನೀವು ಹಂಚಿಕೊಳ್ಳಬಹುದು.


Click it and Unblock the Notifications