ಕಾಡಿನ ಮಧ್ಯೆ ಟೈರ್ ಪಂಕ್ಚರ್ ಆದರೆ ತಲೆ ಕೆಡಿಸಿಕೊಳ್ಳಬೇಡಿ: ಇಷ್ಟು ಸುಲಭವಾಗಿ ಪಂಕ್ಚರ್‌ ಹಾಕಲು ಸಾಧ್ಯವೇ?

ನೀವು ಆಗಾಗ್ಗೆ ಚಾಲನೆ ಮಾಡುತ್ತಿದ್ದರೆ, ನೀವು ಒಮ್ಮೆಯಾದರೂ ಪಂಕ್ಚರ್ ಅನ್ನು ಅನುಭವಿಸಿಯೇ ಇರುತ್ತೀರಿ. ಪಂಕ್ಚರ್ ಆಗುವುದನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡರೂ ಸಹ, ನಮ್ಮ ದೇಶದಲ್ಲಿ ರಸ್ತೆ ಪರಿಸ್ಥಿತಿಗಳು ಹೇಗಾದರೂ ನಿಮ್ಮ ಕಾರಿನ ಟೈರ್‌ಗಳನ್ನು ಪಂಕ್ಚರ್‌ ಮಾಡಿಯೇ ತೀರುತ್ತದೆ. ಪಂಕ್ಚರ್ ಅನ್ನು ಸರಿಪಡಿಸುವ ಸಾಧಾರಣ ಮಾರ್ಗವೆಂದರೆ ಅದನ್ನು ರಸ್ತೆಬದಿಯ ಮೆಕ್ಯಾನಿಕ್ ಅಥವಾ ಟೈರ್ ಅಂಗಡಿಯಲ್ಲಿ ರಿಪೇರಿ ಮಾಡುವುದು. ಇನ್ನು ಇದು ಅನುಕೂಲಕರವಾಗಿದ್ದರೂ, ಪಂಕ್ಚರ್ ಅನ್ನು ನೀವೇ ಹೇಗೆ ಸರಿಪಡಿಸುವುದು ಎಂದು ತಿಳಿದುಕೊಳ್ಳುವುದು ತುಂಬಾ ಉಪಯುಕ್ತವಾಗಿದೆ. ಮನಸ್ಸಿದ್ದರೆ ಎಲ್ಲವನ್ನೂ ಕಲಿಯಬಹುದು.

ಇದಕ್ಕೆ ಮೊದಲನೆಯದಾಗಿ, ನಿಮಗೆ ಪಂಕ್ಚರ್ ರಿಪೇರಿ ಕಿಟ್ ಮತ್ತು ಟೈರ್ ಇನ್ಫ್ಲೇಟರ್ ಅಗತ್ಯವಿರುತ್ತದೆ, ಅದನ್ನು ಟೈರ್ ಅಂಗಡಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಖರೀದಿಸಬಹುದು. ವಿಶಿಷ್ಟವಾದ ಪಂಕ್ಚರ್ ರಿಪೇರಿ ಕಿಟ್ ರೀಮರ್ ಟೂಲ್, ಸ್ಟ್ರಿಪ್-ಇನ್ಸರ್ಶನ್ ಟೂಲ್, ಪಂಕ್ಚರ್-ರಿಪೇರಿ (Tyre Puncture) ಸ್ಟ್ರಿಪ್ಸ್ ಮತ್ತು ಕಟ್ಟರ್ ಅನ್ನು ಒಳಗೊಂಡಿರುತ್ತದೆ.

Easy Tricks And Tips To Deal With Tyre Puncture

ನೆನಪಿಡಿ, ಹಾನಿಯು ಚಕ್ರದ ಹೊರಮೈಯಲ್ಲಿರುವ ಮೇಲ್ಮೈಯಲ್ಲಿದ್ದರೆ ಮಾತ್ರ ಪಂಕ್ಚರ್ ಅನ್ನು ಸರಿಪಡಿಸಿ; ಸೈಡ್‌ವಾಲ್‌ಗಳು ಪಂಕ್ಚರ್ ಆಗಿದ್ದರೆ ಟೈರ್ ಅನ್ನು ಬದಲಾಯಿಸಬೇಕು. ಮೊದಲಿಗೆ, ಯಾವ ವಸ್ತುವಿನಿಂದ ಪಂಕ್ಚರ್ ಆಗಿದೆ ಎಂದು ಗುರುತಿಸಲು ಟೈರ್ ಅನ್ನು ಸಂಪೂರ್ಣವಾಗಿ ಪರೀಕ್ಷಿಸಿ, ಗಾಳಿಯ ಸೋರಿಕೆಯನ್ನು ಗುರುತಿಸಲು ನೀವು ಸ್ವಲ್ಪ ಸಾಬೂನು ನೀರನ್ನು ಬಳಸಬಹುದು. ಆ ಸಂಧರ್ಭದಲ್ಲಿ ನೀರಿನಲ್ಲಿ ನೊರೆ ಕಾಣಿಸಿಕೊಂಡರೆ ಅಲ್ಲೇ ಪಂಕ್ಚರ್ ಆಗಿದೆ ಎಂದರ್ಥ.

ನೀವು ವಸ್ತುವನ್ನು ಗುರುತಿಸಿದ ನಂತರ, ಅದನ್ನು ಹೊರತೆಗೆಯಲು ಪ್ಲೈಯರ್ ಅನ್ನು ಬಳಸಿ. ನಿಮ್ಮ ಕೈಗಳಿಂದ ಅದನ್ನು ಎಳೆಯಲು ಪ್ರಯತ್ನಿಸಬೇಡಿ. ನಂತರ ನೀವು ರೀಮರ್ ಉಪಕರಣವನ್ನು ತೆಗೆದುಕೊಳ್ಳಬೇಕು ಮತ್ತು ಕುಳಿಯನ್ನು ಹಿಗ್ಗಿಸಲು ಅದನ್ನು ಬಳಸಬೇಕು. ಪಂಕ್ಚರ್-ರಿಪೇರಿ ಸ್ಟ್ರಿಪ್ ಅನ್ನು ತೆಗೆದುಕೊಂಡು ಅದನ್ನು ಅಳವಡಿಕೆ ಉಪಕರಣದ ಕಣ್ಣಿಗೆ ಸ್ಲೈಡ್ ಮಾಡಿ, ಅದನ್ನು ಅರ್ಧದಷ್ಟು ಭಾಗಿಸಿ.

Easy Tricks And Tips To Deal With Tyre Puncture

ನಂತರ ಅದನ್ನು 3/4 ರಷ್ಟು ಹೊರಗೆ ಬಿಟ್ಟು ಪಂಕ್ಚರ್ ಆದಲ್ಲಿ ತಳ್ಳಿರಿ ಮತ್ತು ಸ್ಟ್ರಿಪ್ ಅಳವಡಿಕೆ ಉಪಕರಣವನ್ನು ಹೊರತೆಗೆಯಿರಿ. ಶಿಫಾರಸು ಮಾಡಿದ ಒತ್ತಡಕ್ಕೆ ಗಾಳಿಯನ್ನು ತುಂಬುವ ಮೊದಲು ಬ್ಲೇಡ್ ಬಳಸಿ ಹೆಚ್ಚುವರಿ ಪಟ್ಟಿಯನ್ನು ಕತ್ತರಿಸಿ ಮತ್ತು ಪಂಕ್ಚರ್ ಹಾಕಿದ ಪಟ್ಟಿಯ ಸುತ್ತಲೂ ಸಾಬೂನು ನೀರನ್ನು ಸಿಂಪಡಿಸಿ. ನೀವು ಗುಳ್ಳೆಗಳನ್ನು ನೋಡದಿದ್ದರೆ, ನೀವು ಪಂಕ್ಚರ್ ಅನ್ನು ಯಶಸ್ವಿಯಾಗಿ ಸರಿಪಡಿಸಿದ್ದೀರಿ ಎಂದರ್ಥ.

ಏರ್ ಸಸ್ಪೆನ್ಷನ್ ಹೊಂದಿದ ಕಾರಿನಲ್ಲಿ ಟೈರ್ ಅನ್ನು ಬದಲಾಯಿಸುವುದು ಇತರ ಯಾವುದೇ ಕಾರಿನಂತೆ ಸರಳವಲ್ಲ. ನೀವು ಕಾರನ್ನು ಜ್ಯಾಕ್‌ನಲ್ಲಿ ಇರಿಸಲು ಮತ್ತು ಚಕ್ರವನ್ನು ತೆಗೆದುಹಾಕಲು ನಿರ್ಧರಿಸುವ ಮೊದಲು, ನೀವು ಏರ್ ಸಸ್ಪೆನ್ಷನ್ ವೀಲ್-ಚೇಂಜ್ ಸೆಟ್ಟಿಂಗ್ ಅನ್ನು ಆನ್ ಮಾಡಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.

ಈ ರೀತಿಯ ಸ್ಕಿಲ್‌ಗಳನ್ನು ಕಲಿಯುವುದರಿಂದ ತೀರಾ ಎಮೆರ್ಜೆನ್ಸಿ ಸಂಧರ್ಭಗಳಲ್ಲಿ ನಮ್ಮ ಕಾರಿನ ಪಂಕ್ಚರ್ ಅನ್ನು ನಾವೇ ಸರಿ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ಕೆಲವೊಂದು ಕಾಡು ಪ್ರದೇಶ ಅಥವಾ ನಿರ್ಜನ ಪ್ರದೇಶಗಳಿಗೆ ತೆರಳಿದರೆ ಅಲ್ಲಿ ಟೈರ್ ಪಂಕ್ಚರ್ ಅಂಗಡಿಗಳು ಕಾಣ ಸಿಗುವುದೇ ಇಲ್ಲ. ಹಾಗಾಗಿ ಇವುಗಳನ್ನು ಕಲಿತುಕೊಳ್ಳುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 19, 2024, 13:20 [IST]
English summary
Easy tricks and tips to deal with tyre puncture
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+