Electric Scooter: ರಸ್ತೆ ಮಧ್ಯೆ ಚಾರ್ಜ್ ಖಾಲಿಯಾದ್ರೆ ಏನು ಮಾಡಬೇಕು? ಚಿಂತೆಯೇ ಬೇಡ!

ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾದ್ರೆ ಬಂಕ್‌ಗೆ ತಳ್ಳುವುದು ಅಥವಾ ಬಾಟಲಿಯಲ್ಲಿ ಪೆಟ್ರೋಲ್ ಕೊಂಡೊಯ್ದು ತುಂಬುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಚಾರ್ಜ್ ಖಾಲಿಯಾದ್ರೆ ಏನು ಮಾಡಬೇಕು? ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂದು ಇಲ್ಲಿ ನೋಡೋಣ.

Electric scooter ‌ಗಳು ಪ್ರಸ್ತುತ ಭಾರತದಲ್ಲಿ ಎಲ್ಲೆಡೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿಲ್ಲ. ಪಟ್ಟಣದಲ್ಲಿ ಅಲ್ಲಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಇವೆ. ಬಿಟ್ಟರೇ ಹೋಮ್ ಚಾರ್ಜರ್ ಅಥವಾ ಆಫೀಸ್‌ಗಳಲ್ಲಿ ಚಾರ್ಜ್ ಮಾಡುವ ಸೌಲಭ್ಯವಿರುತ್ತದೆ. ಹಾಗಾಗಿ ನಿಮ್ಮ ವಾಹನವನ್ನು ಚಾರ್ಜರ್ ಇರುವ ಸ್ಥಳಕ್ಕೆ ಕೊಂಡೊಯ್ದರೆ ಮಾತ್ರ ನೀವು ಚಾರ್ಜ್ ಮಾಡಿ ಬಚಾವ್ ಆಗಬಹುದು.

Electric Scooter

ಇಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾದ್ದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜಿಂಗ್ ಪಾಯಿಂಟ್‌ವರೆಗೂ ತಳ್ಳಿದ್ರೂ ಚಾರ್ಜ್ ಆಗಲು ತುಂಬಾ ಸಮಯ ತೆಗೆದುಕೊಳ್ಳುವುದರಿಂದ ನಿಮ್ಮ ಪ್ರಯಾಣವನ್ನು ತಕ್ಷಣವೇ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಆದ್ರೂ ಇವಿಗಳ ಚಾರ್ಜ್‌ ಕಾಲಿಯಾದ್ರೆ ಶ್ರಮವಿಲ್ಲದೇ ಪ್ರಯಾಣಿಸಲು ಮಾರ್ಗವಿದೆ.

ಬ್ಯಾಟರಿ ಸ್ವಾಪಿಂಗ್: ಈಗ ಹಲವು ಎಲೆಕ್ಟ್ರಿಕ್ ಕಂಪನಿಗಳು ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಹೊಂದಿರುವ ಸ್ಕೂಟರ್‌ಗಳನ್ನು ಪರಿಚಯಿಸಿದ್ದಾರೆ. ಇದು ತುಂಬಾ ಉಪಯುಕ್ತವಾದ ಟೆಕ್ನಾಲಜಿಯಾಗಿದೆ. ಒಟ್ಟಿಗೆ ಎರಡು ಬ್ಯಾಟರಿಗಳನ್ನು ಕೊಂಡೊಯ್ಯುವುದು ಅಥವಾ ಬ್ಯಾಟರಿ ಖಾಲಿಯಾಗಿ ವಾಹನ ನಿಂತರೆ ಚಾರ್ಜಿಂಗ್ ಸ್ಟೇಷನ್‌ಗಳಿಗೆ ತೆರಳಿ ಮತ್ತೊಂದು ಬ್ಯಾಟರಿ ತಂದು ವಾಹನಕ್ಕೆ ಅಳವಡಿಸಿ ಪ್ರಯಾಣ ಮುಂದುವರಿಸಬಹುದು.

Electric Scooter

ಹಾಗಾಗಿ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿಯನ್ನು ಹೊಂದಿದ್ದರೆ, ನೀವು ಮನೆಗೆ ಹೋಗುವ ಅಗತ್ಯವೇ ಇಲ್ಲ. ನೀವು ನೇರವಾಗಿ ನಿಮ್ಮ ಹತ್ತಿರದ ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್‌ಗೆ ಹೋಗಬಹುದು, ನಿಮ್ಮ ಬ್ಯಾಟರಿಯನ್ನು ನಿಮಿಷಗಳಲ್ಲಿ ಚಾರ್ಜ್ ಮಾಡಲಾದ ಒಂದಕ್ಕೆ ಬದಲಾಯಿಸಿ ತರಬಹುದು. ಇದು ತುಂಬಾ ಉಪಯುಕ್ತವಾದ ಸಲಹೆಯಾಗಿದೆ.

ಚಾರ್ಜರ್ ನಿಮ್ಮ ಬಳಿಯೇ ಇರಲಿ: ಅನಿರೀಕ್ಷಿತ ಪರಿಸ್ಥಿತಿಗಳಲ್ಲಿ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಖಾಲಿಯಾದ್ರೆ, ನೀವಿರುವ ಜಾಗದಿಂದ ಸುತ್ತಮುತ್ತ ನಿಮ್ಮ ಸ್ನೇಹಿತರ ಕಚೇರಿ ಅಥವಾ ಮನೆಗಳಿದ್ರೆ ಅಲ್ಲಿಗೆ ತಳ್ಳಿಕೊಂಡು ಹೋಗಬಹುದು. ಈ ಎರಡೂ ಆಯ್ಕೆಗಳು ಇಲ್ಲದಿದ್ದರೇ ಸ್ಥಳೀಯರನ್ನು ಮನವಿ ಮಾಡಿಕೊಂಡು ಅಲ್ಲಿಯೇ ಚಾರ್ಜ್ ಮಾಡಿಕೊಳ್ಳಬಹುದು.

Electric Scooter

ರೋಡ್ ಸೈಡ್ ಅಸಿಸ್ಟ್: ನಿಮ್ಮ ಸ್ಕೂಟರ್ ಚಾರ್ಜ್ ಖಾಲಿಯಾಗಿ ನೀವು ಮನೆಗೆ ತಲುಪಲಾಗದ ಪರಿಸ್ಥಿತಿಯಲ್ಲಿ ನಿಮಗಿರುವ ಕೊನೆಯ ಮತ್ತು ಉತ್ತಮ ಆಯ್ಕೆಯೆಂದರೆ ವಾಹನವನ್ನು 'ಟೋವ್' ಮಾಡಿಸುವುದು. ಆನ್‌ಲೈನ್ ರೋಡ್ ಸೈಡ್ ಅಸಿಸ್ಟ್ ಸೌಲಭ್ಯವನ್ನು ಒದಗಿಸುವ ಹಲವು ವೆಬ್‌ಸೈಟ್‌ಗಳಿವೆ. ನಿಮ್ಮ ಲೊಕೇಷನ್ ಹಂಚಿಕೊಂಡು ವಾಹನವನ್ನು ನಿಮ್ಮ ಮನೆಯವರೆಗೆ ಟೋವ್ ಸೌಲಭ್ಯ ಪಡೆಯಬಹುದು.

ಭಾರತದಲ್ಲಿ ನಿಧಾನವಾಗಿ ಚಾರ್ಜಿಂಗ್ ಸ್ಟೇಷನ್‌ಗಳ ಅಳವಡಿಗೆ ಹೆಚ್ಚಾಗುತ್ತಿದೆ. ಆದ್ರೆ ಇವಿ ಮಾಲೀಕರಿಗೆ ಯಾವುದೇ ಸಮಸ್ಯೆ ಇಲ್ಲದೇ ವಾಹನಗಳನ್ನು ಬಳಸುವ ಮಟ್ಟಿಗೆ ಚಾರ್ಜಿಂಗ್ ಸ್ಟೇಷನ್ ಸೌಲಭ್ಯ ಒದಗಿಸಲು ಇನ್ನೂ ಹಲವು ವರ್ಷಗಳ ಸಮಯ ಬೇಕಾಗುತ್ತದೆ. ಆದ್ರೆ ಆವರೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾಲೀಕರಿಗೆ ಮೇಲೆ ತಿಳಿಸಿರುವ ಸಲಹೆಗಳು ಮಾತ್ರ ಉತ್ತಮ ಆಯ್ಕೆಯಾಗಿರಲಿವೆ.

More from DriveSpark

Article Published On: Sunday, June 25, 2023, 15:00 [IST]
English summary
Electric scooter runs out charge simple tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+