ನನಗೆ 19 ವರ್ಷ, ನಂಗೆ ಯಾವ ಬೈಕ್ ಸೂಕ್ತ?

ಈಗ ನಾನು 250 ಸಿಸಿ ಬೈಕ್ ಖರೀದಿಸಬೇಕೆಂದಿದ್ದೇನೆ. ಹೋಂಡಾ ಸಿಬಿಆರ್250ಆರ್ ಮತ್ತು ಕವಾಸಕಿ ನಿಂಜಾ 250 ಆರ್ ಬೈಕ್ ಗಳಲ್ಲಿ ನನಗೆ ಯಾವುದು ಸೂಕ್ತ ಬೈಕ್? ನಂಗೆ ಹೆಚ್ಚು ಸ್ಪೀಡ್ ಆಗಿ ಸಾಗುವಂತಹ, ಏರೋ ಡೈನಾಮಿಕ್ ಫೀಚರ್ ಹೊಂದಿರುವ ಬೈಕ್ ಬೇಕು.
ನಂಗೆ ಲಾಂಗ್ ಜರ್ನಿಗೆ ಪೂರಕವಾಗಿರುವ ಬೈಕ್ ಬೇಕು. ಇನ್ನೊಂದು ಸಾರಿ ಹೇಳ್ತಿನಿ. ನಂಗೆ ಸ್ಪೀಡ್ ಬೈಕ್ ಬೇಕು. ನಂಗೆ ಇವೆರಡು ಬೈಕ್ ಗಳಲ್ಲಿ ಕನ್ ಫ್ಯೂಸ್ ಆಗಿದೆ. "ದಟ್ಸ್ ಕನ್ನಡ ಆಟೋಮೊಬೈಲ್ಸ್" ನಂಗೆ ಯಾವ ಬೈಕ್ ಬೆಸ್ಟ್ ಅಂತ ಹೇಳು??
ಉತ್ತರ: ಹೀಗಂತ ಓದುಗರಾದ ಸುನೀಲ್ ಪ್ರಶ್ನೆ ಕೇಳಿದಾಗ ನಮಗೂ ಒಂದು ಸಾರಿ ಕನ್ ಫ್ಯೂಸ್ ಆಗಿರೋದು ನಿಜ. ಯಾವ ಬೈಕ್ ಬೇಕಾದರೂ ಖರೀದಿಸಿ ಅಂತ ಹೇಳುವ ಉದ್ಧಟತನ ನಮಗಿಲ್ಲ. ಹೀಗಾಗಿ ಇವೆರಡು ಮಾಡೆಲ್ ಬೈಕ್ ಹೊಂದಿರುವ ಕೆಲವು ಜನರ ಅಭಿಪ್ರಾಯಗಳನ್ನು ಕೇಳಲಾಯಿತು. ಆಗ ತಿಳಿದುಬಂದದ್ದು...
ಕವಾಸಕಿ ನಿಂಜಾ 250 ಆರ್ ನಿಜಕ್ಕೂ ಗ್ರೇಟ್ ಬೈಕ್. ಆದರೆ ಇದರ ಅರ್ಧ ದರದಲ್ಲಿ ಹೋಂಡಾ ಸಿಬಿಆರ್250ಆರ್ ಬೈಕ್ ದೊರಕುತ್ತದೆ. ಕವಾಸಕಿಗೆ ಹೋಲಿಸಿದರೆ ಹೋಂಡಾ ಸಿಬಿಆರ್ ಹೆಚ್ಚು ಕಂಫರ್ಟೆಬಲ್ ಅನುಭವ ನೀಡುತ್ತದೆ. ಹೆಚ್ಚು ಒತ್ತಡವಿಲ್ಲದೇ ಆರಾಮವಾಗಿ ಸವಾರಿ ಮಾಡಬಹುದು.
ಟೂರ್ ಮಾಡುವರಿಗೆ ಮತ್ತು ಸಿಟಿ ರೈಡ್ ಮಾಡುವರಿಗೆ ಹೋಂಡಾ ಸಿಬಿಆರ್250ಆರ್ ಬೆಸ್ಟ್ ಅಂತ ನಮ್ಮ ಅಭಿಪ್ರಾಯ. ಕವಾಸಕಿಗಿಂತ ಅಗ್ಗದ ಬೈಕ್ ಕೂಡ ಹೌದು. ದರ ನಿಮಗೆ ದೊಡ್ಡ ಸಮಸ್ಯೆಯಲ್ಲ ಅನಿಸಿದರೆ ಕವಾಸಕಿಯನ್ನೂ ಖರೀದಿಸಬಹುದು. ದರ ಮತ್ತು ಆರಾಮದಾಯಕತೆ ವಿಷ್ಯದಲ್ಲಿ ಹೋಂಡಾ ಸಿಬಿಆರ್250ಆರ್ ಉತ್ತಮ ಅನಿಸುತ್ತಿದೆ. ಅಂತಿಮ ಆಯ್ಕೆ ನಿಮ್ಮದು.
ಇದು ನಮ್ಮ ಅಭಿಪ್ರಾಯ. ಓದುಗರಾದ ನೀವು ಇವೆರಡು ಬೈಕ್ ಗಳಲ್ಲಿ ನಿಮಗ್ಯಾವುದು ಇಷ್ಟ ಅಂತ ಇಲ್ಲಿ ಕಾಮೆಂಟ್ ಮಾಡಬಹುದು. ಅಥವಾ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಇಮೇಲ್ ಮಾಡಬಹುದು.


Click it and Unblock the Notifications