ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

By Manoj Bk

ಹೆಚ್ಚುತ್ತಿರುವ ವಾಯುಮಾಲಿನ್ಯವು ಜಗತ್ತಿನ ಜನರಿಗೆ ಆತಂಕವನ್ನುಂಟು ಮಾಡುತ್ತಿದೆ. ಕಾರ್ಖಾನೆ ಹಾಗೂ ವಾಹನಗಳಿಂದ ಹೊರಹೊಮ್ಮುವ ಮಾಲಿನ್ಯದಿಂದಾಗಿ ನಮ್ಮ ಪರಿಸರವು ಕಲುಷಿತಗೊಳ್ಳುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿತ್ತು.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

ಸದಾ ವಾಯುಮಾಲಿನ್ಯದಿಂದ ತತ್ತರಿಸುತ್ತಿದ್ದ ನಗರಗಳ ಗಾಳಿಯು ಲಾಕ್‌ಡೌನ್ ಅವಧಿಯಲ್ಲಿ ಶುದ್ಧವಾಗಿತ್ತು. ನಮ್ಮ ಪರಿಸರವು ಎಷ್ಟು ಕಲುಷಿತಗೊಂಡಿತ್ತು ಎಂಬುದು ಇದರಿಂದ ಸ್ಪಷ್ಟವಾಗಿತ್ತು. ಹೀಗಾಗಿ ಪರಿಸರದ ರಕ್ಷಣೆಗಾಗಿ ವಾಹನಗಳ ಬಳಕೆಯಲ್ಲಿ ಬದಲಾವಣೆ ಅವಶ್ಯವಿದೆ.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ಬೈಕ್‌ನಲ್ಲಿ ಇಂಧನವನ್ನು ಉಳಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

1. ಒಂದೇ ವೇಗದಲ್ಲಿ ಬೈಕ್ ಚಾಲನೆ ಮಾಡಿ

ಇಂಧನದ ಬಳಕೆ ಕಡಿಮೆಯಾದಾಗ ವಾಹನಗಳಿಂದ ಉಂಟಾಗುವ ಮಾಲಿನ್ಯವು ಕಡಿಮೆಯಾಗುತ್ತದೆ. ಈ ಕಾರಣಕ್ಕೆ ವಾಹನವನ್ನು ಒಂದೇ ವೇಗದಲ್ಲಿ ಚಾಲನೆ ಮಾಡುವುದು ಅವಶ್ಯಕ. ವೇಗವಾಗಿ ಅಥವಾ ನಿಧಾನವಾಗಿ ಚಾಲನೆ ಮಾಡುವುದರಿಂದ ಎಂಜಿನ್‌ನ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

ಇದರಿಂದ ಇಂಧನದ ಬಳಕೆ ಹೆಚ್ಚಾಗುತ್ತದೆ. ಪದೇ ಪದೇ ಬ್ರೇಕ್ ಹಾಕುವುದರಿಂದ ಹಾಗೂ ಬೈಕ್‌ನ ವೇಗವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವುದರಿಂದ ಇಂಧನ ಬಳಕೆಯು ಹೆಚ್ಚಾಗುತ್ತದೆ.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

2. ಟಯರ್ ಪ್ರೆಷರ್ ಪರಿಶೀಲಿಸಿ

ಎಂಜಿನ್ ಎಫಿಶಿಯನ್ಸಿ ಸರಿಯಾಗಿರಬೇಕಾದರೆ ಟಯರ್ ಪ್ರೆಷರ್ ಸರಿಯಾಗಿರಬೇಕು. ಟಯರ್‌‌ಗಳಲ್ಲಿ ಕಡಿಮೆ ಗಾಳಿಯಿದ್ದರೆ, ವಾಹನವನ್ನು ಚಲಿಸುವಂತೆ ಮಾಡಲು ಎಂಜಿನ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಇಂಧನ ಬಳಕೆ ಹೆಚ್ಚಾಗುತ್ತದೆ. ಕಂಪನಿಗಳು ಸೂಚಿಸಿದ ಟಯರ್‌‌ಗಳನ್ನು ಬಳಸುವುದು ಸೂಕ್ತ.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

3. ಟ್ರಾಫಿಕ್ ಸಿಗ್ನಲ್‌ನಲ್ಲಿ ಎಂಜಿನ್ ಆಫ್ ಮಾಡಿ

30 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಬೇಕಾದಲ್ಲಿ, ಎಂಜಿನ್ ಅನ್ನು ಆಫ್ ಮಾಡಿ. ಇದರಿಂದಲೂ ಸಹ ಮಾಲಿನ್ಯವನ್ನು ನಿವಾರಿಸಬಹುದು.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

ಒಂದು ಅಂದಾಜಿನ ಪ್ರಕಾರ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾರ್ಷಿಕವಾಗಿ ಹಲವಾರು ಲೀಟರ್‌ಗಳ ಇಂಧನವು ವ್ಯರ್ಥವಾಗುತ್ತಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಎಂಜಿನ್ ಆಫ್ ಮಾಡುವುದರಿಂದ ತೈಲ ಉಳಿತಾಯವಾಗುವುದರ ಜೊತೆಗೆ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

4. ಮೆಂಟೆನೆನ್ಸ್

ಬೈಕ್ ಅಥವಾ ಸ್ಕೂಟರ್‌ಗಳನ್ನು ಸರಿಯಾಗಿ ನೋಡಿಕೊಂಡರೆ, ಉತ್ತಮ ಇಂಧನ ದಕ್ಷತೆಯನ್ನು ಪಡೆಯಬಹುದು. ಕಾಲಕಾಲಕ್ಕೆ ಎಂಜಿನ್ ಆಯಿಲ್ ಬದಲಿಸುವುದು ಸೂಕ್ತ.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

ಇದರ ಜೊತೆಗೆ ಬ್ರೇಕ್ ಫ್ಲೂಯಿಡ್, ಚೈನ್ ಹಾಗೂ ಬ್ರೇಕ್ ಸೇರಿದಂತೆ ಇತರ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಕಾಲಕಾಲಕ್ಕೆ ಸರ್ವೀಸ್ ಮಾಡಿಸುವುದು ಒಳ್ಳೆಯದು.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

5. ಎಮಿಷನ್

ಮಾಲಿನ್ಯವನ್ನು ಕಡಿಮೆ ಮಾಡಲು, ಬೈಕ್‌ನಿಂದ ಹೊರಹೋಗುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಿಸಬೇಕು.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

ಹೊರಸೂಸುವಿಕೆಯು ನಿಗದಿತ ಪ್ರಮಾಣವನ್ನು ಮೀರಿದರೆ, ಬೈಕ್ ಎಂಜಿನ್, ಬೈಕ್‌ ಕಾರ್ಬ್ಯುರೇಟರ್ ಹಾಗೂ ಸ್ಪಾರ್ಕ್ ಪ್ಲಗ್‌ಗಳನ್ನು ಕಂಪನಿಯ ಅಧಿಕೃತ ಸರ್ವೀಸ್ ಸೆಂಟರ್‌ಗಳಲ್ಲಿ ಸರಿಪಡಿಸಿ.

ಈ ಸರಳ ವಿಧಾನಗಳೊಂದಿಗೆ ವಾಯು ಮಾಲಿನ್ಯ ತಡೆಗಟ್ಟಿ, ಮೈಲೇಜ್ ಹೆಚ್ಚಿಸಿಕೊಳ್ಳಿ

ಪೆಟ್ರೋಲ್ ಕಲಬೆರಕೆಯಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ಪೆಟ್ರೋಲ್ ಅನ್ನು ಅಧಿಕೃತ ಪೆಟ್ರೋಲ್ ಬಂಕ್‌ನಲ್ಲಿ ಹಾಕಿಸಿ. ಪ್ರತಿ ಆರು ತಿಂಗಳಿಗೊಮ್ಮೆ ಎಮಿಷನ್ ಟೆಸ್ಟ್ ಮಾಡಿಸಿ.

Most Read Articles

Kannada
English summary
Get the maximum mileage from your two wheelers by following these steps. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X