ಕಾರಿನಲ್ಲಿ ಹೆಡ್‌ಲೈಟ್‌ ಲೆವೆಲಿಂಗ್‌ ಬಗ್ಗೆ ನಿಮಗೆಷ್ಟು ತಿಳಿದಿದೆ? ಇದರ ಲಾಭವೇನು?

ಕಾರು ಚಾಲನೆ ಮಾಡುವಾಗ ಹೆಡ್‌ಲೈಟ್‌ಗಳ ಕಾರ್ಯಕ್ಷಮತೆ ಬಹುಮುಖ್ಯವಾಗಿದೆ. ಹೆಡ್‌ಲೈಟ್‌ಗಳಿಲ್ಲದೆ ಕಾರಿನ ಚಾಲನೆ ಮಾಡುವುದು ಕಣ್ಣು ಮುಚ್ಚಿ ಪ್ರಯಾಣ ಮಾಡಿದಂತೆ ಎಂದೇ ಹೇಳಬಹುದು. ಅದರಲ್ಲೂ ರಾತ್ರಿ ವೇಳೆಯಲ್ಲಿ ಹೆಡ್‌ಲೈಟ್‌ಗಳ ಬಳಕೆ ಅತಿ ಅವಶ್ಯಕವಾಗಿದೆ. ಇದರಿಂದ ರಸ್ತೆಗಳಲ್ಲಿ ನಿಮ್ಮ ಹಿಂದೆ ಬರುವವರಿಗೆ ನಿಮ್ಮ ಪ್ರಯಾಣದ ದಿಕ್ಕನ್ನು ತಿಳಿಸಲಿದೆ.

ಹೌದು, ಹೆಡ್‌ಲೈಟ್‌ಗಳು ನಿಮ್ಮ ಕಾರಿನ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಅದರಲ್ಲೂ ಟ್ರಾಫಿಕ್ ಮತ್ತು ರಸ್ತೆಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಹೆಡ್‌ಲೈಟ್‌ಗಳ ಪಾತ್ರ ಬಹಳ ಮುಖ್ಯವಾಗಿದೆ. ಇನ್ನು ಹೆಡ್‌ಲೈಟ್‌ಗಳ ವಿಚಾರದಲ್ಲಿ ನಾವು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ಹೆಡ್‌ಲೈಟ್ ಲೆವೆಲರ್. ಹಾಗಾದ್ರೆ ಕಾರಿನಲ್ಲಿ ಹೆಡ್‌ಲೈಟ್‌ ಲೆವೆಲಿಂಗ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

headlight-leveling

ಹೆಡ್‌ಲೈಟ್ ಲೆವೆಲಿಂಗ್ ಎಂದರೇನು?

ಕಾರುಗಳಲ್ಲಿ ಹೆಡ್‌ಲೈಟ್ ಲೆವೆಲರ್‌ಗಳನ್ನು ಸಾಮಾನ್ಯವಾಗಿ ಸ್ಟೀರಿಂಗ್ ಕಾಲಂನ ಬಲಭಾಗದಲ್ಲಿ ಇರಿಸಲಾಗಿರುತ್ತದೆ. ಇದು ರೋಟರಿ ನಾಬ್‌ ಆಗಿದ್ದು, ಇದರ ಮೇಲೆ 1-5 ಸಂಖ್ಯೆಗಳನ್ನು ನೀಡಲಾಗಿರುತ್ತದೆ. ಈ ಸಂಖ್ಯೆಗಳು ನಿಮ್ಮ ಹೆಡ್‌ಲೈಟ್‌ ಅನ್ನು ಸೆಟ್‌ಮಾಡುವುದಕ್ಕೆ ಸಹಕಾರಿಯಾಗಿವೆ. ನೀವು ಇದರಲ್ಲಿರುವ ಸಂಖ್ಯೆಗಳನ್ನು ಹೆಚ್ಚಿಸಿದಂತೆ ಹೆಡ್‌ಲೈಟ್‌ಗಳು ನಿಧಾನವಾಗಿ ತಮ್ಮ ಎಸೆಯುವಿಕೆಯನ್ನು ಕೆಳಕ್ಕೆ ಕೇಂದ್ರೀಕರಿಸಲಿವೆ.

ಹೆಡ್‌ಲೈಟ್ ಲೆವೆಲಿಂಗ್ ಅನ್ನು ಯಾವಾಗ ಬಳಸಲಾಗುತ್ತದೆ?

ಕಾರು ಚಾಲಕರು ಹೆಡ್‌ಲೈಟ್‌ ಲೆವೆಲಿಂಗ್‌ ಅನ್ನು ಹಲವು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಅಂದರೆ ಬೆಟ್ಟದ ಮೇಲೆ ಚಾಲನೆ ಮಾಡುವಾಗ ಹೆಡ್‌ಲೈಟ್‌ ಲೆವೆಲಿಂಗ್‌ ಅನ್ನು ಕಡಿಮೆ ಮಾಡುವುದನ್ನು ಗಮನಿಸಬಹುದು. ಇದರಿಂದ ಬೆಳಕು ಆಕಾಶದ ಕಡೆಗೆ ಎಸೆಯುವ ಬದಲು ಉತ್ತಮ ರಸ್ತೆ ಗೋಚರತೆಯನ್ನು ನೀಡಲಿದೆ.

headlight-leveling

ಹೆಡ್‌ಲೈಟ್‌ ಲೆವೆಲರ್‌ ಥ್ರೋ ಕಡಿಮೆ ಮಾಡಲಿದೆ ಯಾಕೆ?

ಹೆಡ್‌ಲೈಟ್ ಲೆವೆಲರ್ ಥ್ರೋ ಅನ್ನು ಮಾತ್ರ ಕಡಿಮೆ ಮಾಡಲಿದೆ. ಏಕೆಂದರೆ ಹೆಡ್‌ಲೈಟ್‌ಗಳಿಂದ ಹೆಚ್ಚಿನ ಅಪ್‌ ಥ್ರೋ ಅನ್ನು ಬಯಸಿದರೆ ಹೆಚ್ಚಿನ ಲೈಟಿಂಗ್‌ ಪಂಕ್ಷನ್‌ ಅನ್ನು ಹೊಂದಿದ್ದೇವೆ. ಇದರಿಂದ ಮುಂಬರುವ ಟ್ರಾಫಿಕ್‌ ವಿಷಯಗಳನ್ನು ಸುಲಭಗೊಳಿಸಲು ಲೆವೆಲರ್ ಮತ್ತು ಹೈ ಬೀಮ್ ಕಾರ್ಯವನ್ನು ಏಕಕಾಲದಲ್ಲಿ ಬಳಸಬಹುದಾಗಿದೆ.

ಹೆಡ್‌ಲೈಟ್‌ ಲೆವೆಲರ್‌ ಎಷ್ಟು ಉಪಯುಕ್ತವಾಗಿದೆ?

ಹೆಡ್‌ಲೈಟ್‌ ಲೆವೆಲರ್‌ ಉಪಯುಕ್ತವಾಗಿದ್ದು, ಹೆಸರೇ ಸೂಚಿಸುವಂತೆ ಹೆಡ್‌ಲೈಟ್‌ ಲೆವೆಲ್‌ ಅನ್ನು ಅಡ್ಜಸ್ಟ್‌ ಮಾಡುವುದಕ್ಕೆ ಸಹಾಯಮಾಡಲಿದೆ.

ಇನ್ನು ನಿಮ್ಮ ಕಾರಿನಲ್ಲಿ ಒಂದು ಹೆಡ್‌ಲೈಟ್‌ಗಳು ಹಾನಿಗೊಳಗಾದರೆ ಅಥವಾ ಫ್ಯೂಸ್ ಆಗಿದ್ದರೆ, ಸಮಾನ ಪ್ರಮಾಣದ ಹೊಳಪನ್ನು ಖಚಿತಪಡಿಸಿಕೊಳ್ಳಲು ಎರಡೂ ಹೆಡ್‌ಲೈಟ್‌ಗಳನ್ನು ಬದಲಾಯಿಸಿ. ಹೆಡ್‌ಲೈಟ್‌ಗಳಲ್ಲಿನ ಬಿರುಕುಗಳನ್ನು ನೋಡಿ ಮತ್ತು ಸಂದೇಹವಿದ್ದಲ್ಲಿ ವೃತ್ತಿಪರ ಸಹಾಯವನ್ನು ಪಡೆಯಿರಿ. ಹೆಡ್‌ಲೈಟ್‌ಗಳ ಜೋಡಣೆ ಹೆಚ್ಚು ಅಥವಾ ಕಡಿಮೆ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಇದು ಚಾಲಕನಿಗೆ ಬ್ಲೈಂಡ್ ಸ್ಪಾಟ್‌ಗಳನ್ನು ರಚಿಸಬಹುದು. ನಿಯಮಿತ ಹೆಡ್‌ಲೈಟ್ ಸ್ವಚ್ಛಗೊಳಿಸುವ ದಿನಚರಿಯನ್ನು ರೂಪಿಸಿಕೊಳ್ಳಿ ಮತ್ತು ವಾಡಿಕೆಯ ತಪಾಸಣೆಗಳನ್ನು ಮಾಡಿ.

headlight-leveling

ಇನ್ನು ಆಧುನಿಕ ತಂತ್ರಜ್ಞಾನ ಪ್ರೇರಿತ ಹೊಸ ಕಾರುಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಫಾಲೋ ಮಿ ಹೋಂ ಹೆಡ್‌ಲೈಟ್‌ಗಳು ಗ್ರಾಹಕರನ್ನು ಸೆಳೆಯುತ್ತಿದೆ. ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ನೀವು ಸಾಮಾನ್ಯವಾಗಿ ಫಾಲೋ ಮಿ ಹೋಂ ಹೆಡ್‌ಲೈಟ್ಸ್ ನೀಡುತ್ತಿದೆ. ಈ ಫಾಲೋ ಮಿ ಹೋಮ್ ಹೆಡ್‌ಲೈಟ್‌ ಹೊಂದಿರುವ ಕಾರಗಳಲ್ಲಿ ಕಾರಿನಿಂದ ಇಳಿದ ನಂತರ ನಿಮಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ನಿರ್ವಹಿಸುತ್ತವೆ. ಮನೆ ಅಥವಾ ಕಚೇರಿಯಂತಹ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿದ ನಂತರ ಮುಂಭಾಗದ ಹೆಡ್‌ಲೈಟ್‌ಗಳು 10 ರಿಂದ 15 ಸೆಕೆಂಡುಗಳ ಕಾಲ ನಿರಂತರವಾಗಿ ಬೆಳಗುತ್ತವೆ. ಆದ್ದರಿಂದ ನೀವು ಕಾರಿನಿಂದ ಇಳಿದು ಲಾಕ್ ಮಾಡಿದ ನಂತರವೂ ಕೆಲವು ಸೆಕೆಂಡುಗಳ ಕಾಲ ನೀವು ಬೆಳಕನ್ನು ಪಡೆಯಲಿದ್ದು, ಈ ಬೆಳಕಿನ ಗೋಚರದ ಮೂಲಕ ಮೂಲಕ ಸುರಕ್ಷಿತವಾಗಿ ಹೋಗಬಹುದು.

More from DriveSpark

Article Published On: Saturday, May 13, 2023, 13:00 [IST]
English summary
Headlight Levelers are usually placed on the right side of the steering column. It is a rotary knob with the numbers 1-5 on it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+