ದಿ ಗ್ರೇಟ್ ಹಿಮಾಲಯನ್ ರೈಡ್; 21 ಅಮೂಲ್ಯ ಟಿಪ್ಸ್

By Nagaraja

ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತ ಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ ಹಿಮದ ಮನೆ ಅಥವಾ ಹಿಮ+ಆಲಯ=ಹಿಮಾಲಯ.

ವರ್ಷವೀಡಿ ಹಿಮಾವೃತವಾಗಿರುವ ಹಿಮಾಲಯದ ಪರ್ವತ ಶ್ರೇಣಿಗಳು ಹವಾಮಾನದ ಮೇಲೆ ಪ್ರಭಾವ ಬೀರುತ್ತದೆ. ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಹಿಮಾಲಯದ ಹಲವಾರು ಸ್ಥಳಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇಂತಹ ಇತಿಹಾಸ ಪ್ರಸಿದ್ಧ ಸ್ಥಳಕ್ಕೆ ರೈಡಿಂಗ್ ಹಮ್ಮಿಕೊಳ್ಳುವುದು ಅಷ್ಟೊಂದು ಸುಲಭ ಮಾತಲ್ಲ. ಯಾವುದೇ ಪೂರ್ವ ತಯಾರಿ ಇಲ್ಲದೆ ಹಿಮಾಲಯ ಸಾಹಸಕ್ಕೆ ಕೈ ಹಾಕಿದರೆ ಅದರ ಭವಿಷ್ಯತ್ ಪರಿಣಾಮವನ್ನು ಎದುರಿಸಲು ಶಕ್ತರಾಗಿರಬೇಕು. ಹಾಗಾಗಿ ಇಂದಿನ ಈ ಸಾಹಸ ಪ್ರಿಯರಿಗಾಗಿನ ವಿಶೇಷ ಲೇಖನದಲ್ಲಿ ಹಿಮಾಲಯ ರೈಡಿಂಗ್ ವೇಳೆ ವಹಿಸಬೇಕಾದ ಎಚ್ಚರಿಕೆ, ಪಾಲಿಸಬೇಕಾದ ಸುರಕ್ಷಾ ಕ್ರಮಗಳು ಹಾಗೂ ಇನ್ನಿತರ ವಿಚಾರಗಳ ಬಗೆಗಿನ 21 ಅಮೂಲ್ಯ ಟಿಪ್ಸ್ ಗಳನ್ನು ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ಹಂಚಿಕೊಳ್ಳಲಿದ್ದೇವೆ.

01. ನಕ್ಷೆ

01. ನಕ್ಷೆ

ಹಿಮಾಲಯ ರೈಡಿಂಗ್ ಹೋಗುವವರಿಗೆ ದಾರಿ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರಬೇಕು. ಇದಕ್ಕಾಗಿ ಒಂದು ಸಮಗ್ರ ದಾರಿಪಟವನ್ನು ಬ್ಯಾಗಲ್ಲಿ ಜೋಪಾನವಾಗಿ ಇಟ್ಟುಕೊಂಡು ಜೊತೆ ಸಾಗಬೇಕು. ಸಾಮಾನ್ಯ ಹಿಮಾಲಯ ರೈಡಿಂಗ್ ಸ್ನೇಹಿತರ ಒಂದು ಗುಂಪು ಅಥವಾ ತಂಡ ಜತೆಯಾಗಿ ನಡೆಸುವುದರಿಂದ ನೀವು ಎಲ್ಲಿಂದ ಪ್ರಯಾಣ ಆರಂಭಿಸುತ್ತಿರೋ ಎಲ್ಲಿ ಕೊನೆಗೊಳಿಸುತ್ತಿರೋ ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು.

02. ಮಾನಸಿಕ ಸಿದ್ಧತೆ, ಮೋಟಾರ್‌ಸೈಕಲ್

02. ಮಾನಸಿಕ ಸಿದ್ಧತೆ, ಮೋಟಾರ್‌ಸೈಕಲ್

ಯಾವುದೇ ಒಂದು ಪ್ರಯಾಣದ ಮೊದಲು ಮಾನಸಿಕವಾಗಿ ಸಿದ್ಧರಾಗುವುದು ಅತಿ ಅಗತ್ಯ. ಸಂಪೂರ್ಣ ಕಂಡೀಷನ್ ಹೊಂದಿರುವ ಟೂರಿಂಗ್ ಅಥವಾ ಪ್ರವಾಸಿ ಬೈಕ್ ಅನ್ನೇ ನೀವು ಆರಿಸಬೇಕು. ಇದನ್ನು ನಂಬಿಕೆಗ್ರಸ್ತ ಗ್ರಾಹಕರಿಂದಲೇ ಸಮಗ್ರ ಪರಿಶೀಲನೆಯನ್ನು ನಡೆಸಬೇಕು.

03. ವೈದ್ಯಕೀಯ ಪರೀಕ್ಷೆ, ಸುರಕ್ಷಾ ಗವಸು

03. ವೈದ್ಯಕೀಯ ಪರೀಕ್ಷೆ, ಸುರಕ್ಷಾ ಗವಸು

ಇನ್ನು ಹಿಮಾಲಯದ ಹವಾಮಾನವನ್ನು ಎದುರಿಸಲು ನಿಮ್ಮ ದೇಹ ಸಮರ್ಥವಾಗಿದ್ದು ನಿಮಗೆ ಯಾವುದೇ ಆರೋಗ್ಯ ತೊಂದರೆಗಳಿಲ್ಲ ಎಂಬುದನ್ನು ವೈದ್ಯಕೀಯ ಪರೀಕ್ಷೆಯಿಂದ ಖಚಿತಪಡಿಸಬೇಕು. ಇನ್ನುಳಿದಂತೆ ಕೈಗವಸು, ಜಾಕೆಟ್, ಕಾಲಂಗಿ ಜೊತೆಗೆ ಹೆಲ್ಮೆಟ್ ಮತ್ತು ಶೂ ಇವೆಲ್ಲ ಸುರಕ್ಷಾ ವಸ್ತುಗಳು ಅತ್ಯಗತ್ಯ.

04. ಬೆಚ್ಚನೆಯ ಉಡುಪು

04. ಬೆಚ್ಚನೆಯ ಉಡುಪು

ಸಾಧ್ಯವಾದಷ್ಟು ಬೆಚ್ಚನೆಯ ಉಡುಪುಗಳನ್ನು ಧರಿಸಲು ಪ್ರಯತ್ನಿಸಿ. ಯಾಕೆಂದರೆ ರಾತ್ರಿ ವೇಳೆ ಚಳಿ ಮತ್ತಷ್ಟು ಹೆಚ್ಚಲಿದ್ದು, ಸಮಸ್ಯೆಗೆ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ತುಂಬಾನೇ ದಪ್ಪವಾದ ಉಡುಪುಗಳನ್ನು ಧರಿಸದಿರಿ. ಇದರಿಂದ ಶರೀರದಲ್ಲಿ ಉಷ್ಣಾಂಶ ಜಾಸ್ತಿಯಾಗಲಿದೆ. ಬದಲಾಗಿ ತೆಳ್ಳಗಿನ ಪದರಗಳ ಉಡುಪುಗಳನ್ನು ಧರಿಸಿರಿ.

05. ಸಹ ಪ್ರಯಾಣಿಕರು ಬೇಡ

05. ಸಹ ಪ್ರಯಾಣಿಕರು ಬೇಡ

ಒಂದೇ ಬೈಕಲ್ಲಿ ಇಬ್ಬಿಬ್ಬರು ಸಂಚರಿಸುವ ಪ್ರಯತ್ನ ಬೇಡ. ಹಿಮಾಲಯ ರಸ್ತೆಗಳು ಅತ್ಯಂತ ಸಾಹಸಮಯವಾಗಿದ್ದು, ಸಿಂಗಲ್ ಸವಾರಿಯಿಂದ ಹೆಚ್ಚು ಸ್ಮರಣೀಯವಾಗಿಸಬಹುದಾಗಿದೆ. ಆಗಲೇ ಬೇಕಾದಷ್ಟು ಲಗ್ಗೇಜ್ ತುಂಬಿರುವ ನಿಮಗೆ ದಣಿವು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ.

06. ಲಗ್ಗೇಜ್

06. ಲಗ್ಗೇಜ್

ಬಹುತೇಕ ಸಮಯವನ್ನು ಚಾಲನೆಯಲ್ಲಿ ವ್ಯಯಿಸುವುದರಿಂದ ಹೆಚ್ಚು ಭಾರದ ಅಥವಾ ತುಂಬಾ ಲಗ್ಗೇಜ್ ಗಳಿಗೆ ಆಸ್ಪದ ಕೊಡದಿರಿ. ನಿಮ್ಮ ಗಾಡಿಯನ್ನು ಸಾಧ್ಯವಾದಷ್ಟು ಹಗುರವಾಗಿಸುದರಿಂದ ನಿಮ್ಮ ಪಯಣ ಮತ್ತಷ್ಟು ಉಲ್ಲಾಸದಾಯಕವಾಗಲಿದೆ.

07. ಟೂಲ್ ಕಿಟ್

07. ಟೂಲ್ ಕಿಟ್

ಹಿಮಾಲಯನ್ ಪ್ರಯಾಣದ ವೇಳೆ ಸಣ್ಣ ಪುಟ್ಟ ಮೆಕ್ಯಾನಿಕ್ ಜವಾಬ್ದಾರಿಯನ್ನು ನೀವೇ ವಹಿಸಬೇಕಾಗುತ್ತದೆ. ಇದಕ್ಕೆ ಮಾನಸಿಕವಾಗಿಯೂ ಸನ್ನದ್ಧರಾಗಬೇಕು. ಈ ನಿಟ್ಟಿನಲ್ಲಿ ಸ್ಪಾನರ್, ಸ್ಕೂಡ್ರೈವರ್ ಸೇರಿದಂತೆ ಸಂಪೂರ್ಣ ಟೂಲ್ ಕಿಟ್ ನಿಮ್ಮ ಜೊತೆ ಒಯ್ಯುವುದು ಉತ್ತಮ. ಇನ್ನು ಟೈರ್ ಟ್ಯೂಬ್, ಕೇಬಲ್ಸ್ ಗಳಂತಹ ಸ್ಪೇರ್ ಭಾಗಗಳನ್ನು ನಿಮ್ಮ ಜೊತೆ ಸಾಗಿಸಿ.

08. ಚಾಲನೆ ಆರಂಭಿಸಿ

08. ಚಾಲನೆ ಆರಂಭಿಸಿ

ಎಲ್ಲ ಸುರಕ್ಷತೆಗಳನ್ನು ಖಾತ್ರಿಪಡಿಸಿದ ಬಳಿಕವಷ್ಟೇ ನಿಮ್ಮ ಪ್ರಯಾಣವನ್ನು ಆರಂಭಿಸಿ. ಇದಕ್ಕೊಂದು ಅಮೂಲ್ಯ ಸಲಹೆಯನ್ನು ನಾವು ಕೊಡಲಿದ್ದೇವೆ. ನಿಮ್ಮ ಪಯಣವನ್ನು ಹೆಚ್ಚು ಆನಂದಮಯ ಹಾಗೂ ದಣಿವು ಕಡಿಮೆ ಮಾಡಲು ದೈನಂದಿನ 200 ಕೀ.ಮೀ. ಮಾತ್ರ ಸಂಚರಿಸಿದರೆ ಸಾಕು. ಹೆದ್ದಾರಿಗಳಲ್ಲಿ 1000 ಕೀ.ಮೀ.ಗಳಷ್ಟು ಸಂಚರಿಸುವುದು ಸುಲಭ. ಆದರೆ ಬೆಟ್ಟ ಪರ್ವತಗಳಿಂದ ತುಂಬಿಕೊಂಡಿರುವ ಹಿಮಾಲಯದಲ್ಲಿ 100 ಕೀ.ಮೀ. ಗುಡ್ಡ ಹತ್ತುವುದೇ ತ್ರಾಸದಾಯಕವಾಗಲಿದೆ. ಅಲ್ಲದೆ ಬೆಳಗ್ಗೆ ಸೂರ್ಯದೋಯದ ವೇಳೆ ಬೇಗನೇ ಆರಂಭಿಸಿದ ಪಯಣವು ಸಂಜೆ ಸೂರ್ಯಾಸ್ತಗಿಂತಲೂ ಮೊದಲೇ ನಿಲ್ಲಿಸಬೇಕು. ಇದರಿಂದ ಬೆಳಕಿನ ಅಭಾವ ಕಾಡದು. ಯಾವುದೇ ಕಾರಣಕ್ಕೂ ರಾತ್ರಿ ವೇಳೆಯ ಪಯಣ ಬೇಡ.

09. ಆರೋಗ್ಯ ಸಮಸ್ಯೆ

09. ಆರೋಗ್ಯ ಸಮಸ್ಯೆ

ನೀವು ಜಗತ್ತಿನ ಅತಿ ಎತ್ತರದ ಪರ್ವತ ಶಿಖರಗಳಲ್ಲಿ ಸಂಚರಿಸುವುದರಿಂದ ನಿಮ್ಮನ್ನು ತೀವ್ರತರಹದ ಪರ್ವತ ಜ್ವರ Acute Mountain Sickness (AMS) ಆವರಿಸುವ ಸಾಧ್ಯತೆಯಿರುತ್ತದೆ. ಯಾವುದೇ ಕಾರಣಕ್ಕೂ ಇದನ್ನು ಹಗುರವಾಗಿ ಪರಿಗಣಿಸದಿರಿ. ಇದರ ಪ್ರಮುಖ ಲಕ್ಷಣ ತಲೆನೋವು ಹಾಗೂ ತಲೆಸುತ್ತುಲಿದ್ದು, ಅತ್ಯಂತ ಎತ್ತರದ ವಾಯುಪ್ರದೇಶದಲ್ಲಿ ಇದರ ಪ್ರಭಾವ ಕಾಡಲಿದೆ. ಹಾಗೊಂದು ವೇಳೆ ನಿಮಗೂ ಇಂತಹ ಅನುಭವವಾದ್ದಲ್ಲಿ ಅಲ್ಲಿಗೆ ನಿಮ್ಮ ನಿಲ್ಲಿಸಿ ಒಂದು ದಿನ ಅಲ್ಲೇ ಕಳೆಯಿರಿ. ನಿಮ್ಮ ಆರೋಗ್ಯ ಸ್ಥಿತಿ ಸುಧಾರಿಸಿದ್ದಲ್ಲಿ ಮಾತ್ರ ಪ್ರಯಾಣ ಮುಂದುವರಿಸಿರಿ. ಇಲ್ಲದಿದ್ದಲ್ಲಿ ಕೆಳಗಿಳಿದು ನಿಮ್ಮ ಪ್ರಯಾಣ ಮುಂದುವರಿಸಬೇಕೇ ಎಂಬುದರ ಕುರಿತು ವೈದ್ಯರ ಸಲಹೆ ಪಡೆಯುವುದು ಅತಿ ಅಗತ್ಯ.

10. ತಂಗುದಾಣ

10. ತಂಗುದಾಣ

ಪ್ರಯಾಣಕ್ಕೂ ಮೊದಲೇ ಎಲ್ಲಿಲ್ಲಿ ತಂಗಲಿದ್ದೇವೆ ಎಂಬುದರ ಕುರಿತಾಗಿ ಸ್ಪಷ್ಟ ಯೋಜನೆಯೊಂದಿಗೆ ವಸತಿ ಸೌಕರ್ಯವನ್ನು ಮುಂಚಿತವಾಗಿ ಕಾಯ್ದಿರಿಸಿ. ಇದರಿಂದ ಇದೇ ಮಾರ್ಗದಲ್ಲಿ ಅನೇಕ ಸಾಹಸಿ ಯಾತ್ರಿಕರು ಪ್ರಯಾಣಿಸುವುದರಿಂದ ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಬಹುದಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ರಾತ್ರಿಯ ಸುಖನಿದ್ರೆಯು ಮುಂದಿನ ದಿನದ ಸುಖ ಪ್ರಯಾಣಕ್ಕೆ ಅತಿ ಅವಶ್ಯಕ ಎಂಬುದನ್ನು ಮರೆಯದಿರಿ.

11. ದಾಖಲೆ ಪತ್ರ

11. ದಾಖಲೆ ಪತ್ರ

ಗುರುತು ಚೀಟಿ, ಚಾಲನಾ ಪರವಾನಗಿ, ವಾಹನ ದಾಖಲಾತಿ ಪತ್ರ, ವಿಮೆ, ವಾಹನ ಮಾಲಿನ್ಯ ಪತ್ರ ಮುಂತಾದವುಗಳ ಅಸಲಿ ಪತ್ರದ ಜೊತೆಗೆ ಜೆರಾಕ್ಸ್ ಕಾಪಿಗಳನ್ನು ಜೊತೆಗಿರಿಸಿ. ಇವುಗಳನ್ನು ಯಾರ ಜೊತೆಯೂ ಹಂಚಿಕೊಳ್ಳದಿರಿ.

12. ರೂಟ್ ಪ್ಲಾನ್

12. ರೂಟ್ ಪ್ಲಾನ್

ಈ ಮೊದಲೇ ಹಿಮಾಲಯ ರೈಡಿಂಗ್ ಗೆದ್ದು ಬಂದಿರುವ ಚಾಲಕ ಅಥವಾ ಅನುಭವಿ ತಜ್ಞರು ನಿಮ್ಮ ಜೊತೆಗಿದ್ದರೆ ಉತ್ತಮ. ಹಾಗೆಯೇ ಸ್ಥಳೀಯರಲ್ಲಿ ಹಾದಿ ಹಾಗೂ ಹವಾಮಾನದ ಬಗ್ಗೆ ಸ್ಪಷ್ಟವಾಗಿ ಕೇಳಿ ತಿಳಿದುಕೊಳ್ಳಿರಿ. ಉದಾಹರಣೆಗೆ ರಸ್ತೆ ಮಾರ್ಗ ಮುಚ್ಚುಲ್ಪಟ್ಟಿದೆಯೇ, ಮಳೆ ಅಥವಾ ಹಿಮಪಾತವಾಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು.

13. ಒದ್ದೆಯಾಗದಿರಿ

13. ಒದ್ದೆಯಾಗದಿರಿ

ಸಾಧ್ಯವಾದಷ್ಟು ಒದ್ದೆಯಾಗುವ ಪರಿಸ್ಥಿತಿಯನ್ನು ತಡೆಯಿರಿ. ಯಾಕೆಂದರೆ ಚಳಿಯಿಂದ ಆವೃತ್ತವಾಗಿರುವ ಪ್ರದೇಶದಲ್ಲಿ ಒದ್ದೆಯಾದ ಬಣ್ಣೆ ಅಥವಾ ಶೂಗಳು ಒಣಗಲು ಸಾಕಷ್ಟು ಸಮಯ ತಗುಲಲಿದೆ.

14. ಸಾಕಷ್ಟು ನೀರು ಕುಡಿಯಿರಿ

14. ಸಾಕಷ್ಟು ನೀರು ಕುಡಿಯಿರಿ

ಹಿಮಾಲಯದಲ್ಲಿ ದೇಹದ ಜಲಾಂಶ ಬೇಗನೇ ನಷ್ಟವಾಗಲಿದ್ದು, ಹಾಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಕಾಷ್ಟು ನೀರು ಕುಡಿಯಿರಿ. ಇದಕ್ಕಾಗಿ ಹೈಡ್ರೋ ಬ್ಯಾಕ್ ಪ್ಯಾಕ್ ಅನ್ನು ನಿಮ್ಮ ಜೊತೆಗೆ ಒಯ್ಯಿರಿ. ಇದರಿಂದ ಚಾಲನೆ ವೇಳೆ ಸುಲಭವಾಗಿ ನೀರು ಕುಡಿಯಬಹುದಾಗಿದ್ದು,ಸಮಯ ವ್ಯರ್ಥವಾಗುವುದನ್ನು ತಡೆಯಲಿದೆ.

15. ನಿಯಂತ್ರಿತ ಚಾಲನೆ

15. ನಿಯಂತ್ರಿತ ಚಾಲನೆ

ಗಾಡಿ ನಿಮ್ಮ ನಿಯಂತ್ರಣದಲ್ಲಿರುವಂತೆಯೇ ಒಂದು ನಿರ್ದಿಷ್ಟ ವೇಗದಲ್ಲಿ ಸಂಚರಿಸಿ. ಅಲ್ಲಿನ ಪರ್ವತಗಳು ಸಾಹಸ ಪ್ರಿಯರನ್ನು ಕೈಬೀಸಿ ಕರೆಯುವುದರಿಂದ ತಾಳ್ಮೆ ಕಳೆದುಕೊಂಡು ಅಮಿತ ವೇಗದ ಗೋಜಿಗೆ ಹೋಗದಿರಿ.

16. ವಾಟರ್ ಕ್ರಾಸಿಂಗ್

16. ವಾಟರ್ ಕ್ರಾಸಿಂಗ್

ವಾಟರ್ ಕ್ರಾಸಿಂಗ್ ನಿಮಗೆ ಎದುರಾಗುವ ಮಗದೊಂದು ಸವಾಲಾಗಿರಲಿದೆ. ತಂಪಾದ ನೀರಿನೆಡೆಯಲ್ಲಿರುವ ಸಣ್ಣ ಪುಟ್ಟ ಬಂಡೆ ಕಲ್ಲುಗಳು ಗೋಚರಿಸದೇ ಹೋಗಬಹುದು. ಇಲ್ಲಿ ನಿಧಾನವೇ ಪ್ರಧಾನ ಎಂಬ ವಾಕ್ಯ ಹೆಚ್ಚು ಮಹತ್ವಪೂರ್ಣವೆನಿಸುತ್ತದೆ. ಅಲ್ಲದೆ ಶೂನೊಳಗೆ ನೀರು ಪ್ರವೇಶಿಸದಂತೆ ನೋಡಿಕೊಳ್ಳಬೇಕಾಗುತ್ತದೆ.

17. ನಡತೆ

17. ನಡತೆ

ಅತ್ಯುತ್ತಮ ಗುಣ ನಡತೆಯನ್ನು ಕಾಯ್ದುಕೊಳ್ಳುವುದರಿಂದ ಮನಸ್ಸಿನ ತಾಜಾತನ ಕಾಪಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಸ್ಥಳೀಯರೊಂದಿಗೆ ಬೆರೆಯುವುದು, ಅಲ್ಲಿನ ಪ್ರವಾಸದ ಕುರಿತು ಸಮಗ್ರವಾಗಿ ಕೇಳಿ ತಿಳಿದುಕೊಳ್ಳುವುದು. ನಿಮ್ಮ ಊರಿನ ವೈಶಿಷ್ಟ್ಯಗಳ ಬಗ್ಗೆ ಅವರೊಂದಿಗೂ ಅನುಭವ ಹಂಚಿಕೊಳ್ಳುವುದು ಹೀಗೆ ಸಂಭಾಷಣೆಯಲ್ಲಿ ತೊಡಗುತ್ತಾ ನಿಮ್ಮ ಪ್ರವಾಸವನ್ನು ಮಧುರವಾಗಿಸಬಹುದಾಗಿದೆ.

18. ಫೋನ್ ನೆಟ್ ವರ್ಕ್

18. ಫೋನ್ ನೆಟ್ ವರ್ಕ್

ನಿಮ್ಮ ಪ್ರಯಾಣದುದ್ಧಕ್ಕೂ ಫೋನ್ ನೆಟ್ ವರ್ಕ್ ಸಿಗುವ ಸಾಧ್ಯತೆ ವಿರಳವಾಗಿದೆ. ನಿರಂತರ ಅಂತರಾಳದಲ್ಲಿ ಎಲ್ಲಿ ನೆಟ್ ವರ್ಕ್ ಸಿಗುತ್ತದೋ ಅಲ್ಲಿಗೆ ತಲುಪಿದಾಗ ನಿಮ್ಮ ನಿಕಟವರ್ತಿ, ಅಪ್ಪ, ಅಪ್ಪ, ಸ್ನೇಹಿತರ ಜೊತೆಗೆ ಸಂಭಾಷಣೆ ಮಾಡಿ ನೀವಿರುವ ಜಾಗದ ಬಗ್ಗೆ ಖಚಿತ ಮಾಹಿತಿ ಕೊಡಿ. ಇದರಿಂದ ನಿಮ್ಮ ಕುಟುಂಬ ಸದಸ್ಯರಿಗೂ ಮಾಹಿತಿ ದೊರಕಲಿದೆ. ಅಲ್ಲದೆ ನೀವು ಉಳಿದುಕೊಂಡಿರುವ ಹೋಟೆಲ್, ಮುಂದಿನ ಒಂದೆರಡು ದಿನಗಳ ಟ್ರಿಪ್ ಮಾಹಿತಿ ಕೊಡುವುದರಿಂದ ಅಪತ್ಕಾಲದಲ್ಲಿ ಇದುವೇ ನಿಮ್ಮ ಜೀವ ರಕ್ಷಣೆಗೂ ಕಾರಣವಾಗಲಿದೆ.

19. ಇಂಧನ ತುಂಬುವುದು

19. ಇಂಧನ ತುಂಬುವುದು

ಇತರ ಪ್ರದೇಶಗಳ ಹಾಗೆ ಹಿಮಾಲಯದಲ್ಲಿ ಅಲ್ಲಲ್ಲಿ ಇಂಧನ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರವಾಸ ಆರಂಭಕ್ಕೂ ಮುನ್ನ ಪೆಟ್ರೋಲ್ ಸ್ಟೇಷನ್ ಗಳ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿರಬೇಕು. ಸಾಧ್ಯವಾದರೆ ಹೆಚ್ಚುವರಿ ಇಂಧನವನ್ನು ಸಾಗಿಸಿದರೆ ಉತ್ತಮ.

20. ವೈದ್ಯಕೀಯ ನೆರವು

20. ವೈದ್ಯಕೀಯ ನೆರವು

ಪ್ರಥಮಾ ಚಿಕಿತ್ಸಾ ಪೆಟ್ಟಿಗೆಯನ್ನು ಜೋಪಾನವಾಗಿ ಹೊತ್ತುಕೊಂಡು ಸಾಗಿ. ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ನೀವು ಅಂದುಕೊಂಡ ಹಾಗೆ ತುರ್ತು ವೈದ್ಯಕೀಯ ನೆರವು ಸಿಗಲಾರದು. ಹಾಗಾಗಿ ಪ್ರಯಾಣ ಆರಂಭಕ್ಕೂ ಮುನ್ನ ಅಥವಾ ಅಲ್ಲಿನ ಸ್ಥಳೀಯರಿಂದ ಮಾಹಿತಿ ಗಿಟ್ಟಿಸಿಕೊಳ್ಳುವುದು ಉತ್ತಮ.

21. ಪ್ರಯಾಣ ಆನಂದಿಸಿ

21. ಪ್ರಯಾಣ ಆನಂದಿಸಿ

ಹಿಮಾಲಯ ರೈಡಿಂಗ್ ಎಂಬುದು ಎಲ್ಲ ಅರ್ಥದಲ್ಲೂ ಸಾಹಸ, ಸಾಹಸ ಮತ್ತು ಸಾಹಸ ಯಾತ್ರೆಯಾಗಿರುವುದರಿಂದ ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಹಳೆಯದನ್ನೆಲ್ಲ ಮರೆತು, ಭವಿಷ್ಯದ ಬಗ್ಗೆ ಯೋಚಿಸದೇ ನೀವಿರುವ ಪುಣ್ಯ ಸ್ಥಳದ ಸಂಪೂರ್ಣ ಆನಂದವನ್ನು ಪಡೆಯಲು ಯತ್ನಿಸಿರಿ. ಹ್ಯಾಪಿ ರೈಡಿಂಗ್!

ದಿ ಗ್ರೇಟ್ ಹಿಮಾಲಯನ್ ರೈಡ್; 21 ಅಮೂಲ್ಯ ಟಿಪ್ಸ್

ಈಗ ಯಾವುದೇ ಅಂಶ ಬಿಟ್ಟು ಹೋಗಿದ್ದಲ್ಲಿ ಅಥವಾ ಈ ವಿಶೇಷ ಲೇಖನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


More from DriveSpark

Article Published On: Friday, August 7, 2015, 10:40 [IST]
English summary
So, what do you need to know when you are planning such a trip on a motorcycle? Here are a few important things to keep in mind while planning a trip to Leh, or simply to the Himalayas:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+